ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ದಿವ್ಯಸಪ್ತತಿಪೂರ್ತಿ ಸಮಾರಂಭವು ಶ್ರೀ ಶಾರದಾ ಪೀಠದಲ್ಲಿ ಏ.18ರಂದು ನಡೆಯಲಿದೆ. ಅವಿಚ್ಚಿನ್ನ ಗುರುಪರಂಪರೆ ಹೊಂದಿರುವ ಶ್ರೀ ಶಾರದಾ ಪೀಠದ 35 ನೇ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕರಿಸಿದ್ದರು.
1989 ರಲ್ಲಿ ಪೀಠಾಧಿ ಪತಿಗಳಾಗಿ ವಿರಾಜಮಾನರಾಗಿರುವ ಶ್ರೀಗಳು ಚೈತ್ರ ಶುಕ್ಲ ಷಷ್ಠಿಯಂದು ಜನಿಸಿದ್ದರು. ದಿವ್ಯ ಸಪ್ತತಿಪೂರ್ತಿ ಅಂಗವಾಗಿ ಆಯುತಚಂಡಿ ಮಹಾಯಾಗ, ಕೋಟಿ ಕುಂಕುಮಾರ್ಚನೆ, ಅತಿರುದ್ರಮಹಾಯಾಗದಲ್ಲಿ ಪಾಲ್ಗೊಂಡಿರುವ ಋತ್ವಿಜರು ಬೆಳಗ್ಗೆ ಜಗದ್ಗುರುಗಳು ಆಹಿ°ಕ ದರ್ಶನ ಪಡೆದರು. ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಬೆಟ್ಟದ ಶ್ರೀ ಮಲಹಾನಿಕಾರೇಶ್ವರ ಸ್ವಾಮಿ ಸನ್ನಿ ಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಸ್ವಾಮಿಯ ಸನ್ನಿ ಧಿಯಲ್ಲಿ ಶ್ರೀ ಸದ್ವಿದ್ಯಾ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ರುದ್ರ ಪಠಿಸಿದರು. ಗುರುಭವನದ ಸಮೀಪ ಯಾಗಶಾಲೆಯಲ್ಲಿ ಆಯುತಚಂಡಿ ಮಹಾಯಾಗ, ಅತಿರುದ್ರ ಮಹಾಯಾಗ ನಡೆಯುತ್ತಿದ್ದು, ಕೋಟಿ ಕುಂಕುಮಾರ್ಚನೆ, ಶ್ರೀ ಶಾರದಾಂಬೆ ಸನ್ನಿ ಧಿಯಲ್ಲಿ ನಡೆಯುತ್ತಿದೆ. ವರ್ಧಂತಿ ಅಂಗವಾಗಿ ನಡೆಯುತ್ತಿದ್ದ ಜಗದ್ಗುರುಗಳ ಆಹಿ°ಕ ದರ್ಶನ ರದ್ದುಪಡಿಸಲಾಗಿದೆ. 2011 ರ ಖರ ನಾಮ ಸಂವತ್ಸರದಲ್ಲಿ ಜಗದ್ಗುರುಗಳ ಷಷ್ಟಭಿಪೂರ್ತಿ ಸಂದರ್ಭದಲ್ಲಿ ಶ್ರೀಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಆಯುತ ಚಂಡಿಕಾಯಾಗ, ಅತಿರುದ್ರ ಮಹಾಯಾಗ, ಕೋಟಿ ಕುಂಕುಮರ್ಚಾನೆ ಕಾರ್ಯಕ್ರಮದಲ್ಲಿ ಒಂದು ಸಾವಿರ ಋತ್ವಿಜರು ಹತ್ತು ಸಾವಿರ ದುರ್ಗಾ ಸಪ್ತಶತಿ ಪಾರಾಯಣ 100 ಯಜ್ಞ ಕುಂಡದಲ್ಲಿ ಒಂದು ಸಾವಿರ ಆವೃತ್ತಿ ಚಂಡಿಹೋಮ ನೆರವೇರಿಸಲಾಗಿತ್ತು.
ಅಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಧಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯೂ ವರ್ಧಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದರು. ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಪ್ರವಾಸ ರದ್ದಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಪ್ಪದ ಸಾ Ìನಿ ಮತ್ತು ತಂಡದವರ ಹಾಡುಗಾರಿಕೆ ನಡೆಯಿತು. ವಯೋಲಿನ್‌ನಲ್ಲಿ ಹೊಸೊಳ್ಳಿ ರಘುರಾಂ, ಮೃದಂಗದಲ್ಲಿ ಪುತ್ತೂರು ನಿಕ್ಷಿತ್ ಹಾಗೂ ಘಟಂನಲ್ಲಿ ಬೆಂಗಳೂರಿನ ಉತ್ತಮ್ ಸಹಕರಿಸಿದರು.