Advertisement

ಅಂತರ್ಜಾತಿ ವಿವಾಹಿತರಿಗೆ ಚೆಕ್‌ ವಿತರಣೆ

06:00 PM Apr 14, 2021 | Team Udayavani |

ಕಡೂರು: ತಾಲೂಕಿನ ಆಲಘಟ್ಟ ಚಟ್ನಹಳ್ಳಿಯ ಯುವಕ ಭರತ್‌ ಸಿ.ಕೆ. ಮತ್ತು ಉಡೆವು ಗ್ರಾಮದ ದಿವ್ಯ ಆರ್‌. ಅವರು ಅಂತರ್ಜಾತೀಯ ವಿವಾಹ ಮಾಡಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ನೀಡುವ 3 ಲಕ್ಷದ ಸಹಾಯ ಧನದ ಚೆಕ್‌ನ್ನು ಶಾಸಕ ಬೆಳ್ಳಿಪ್ರಕಾಶ್‌ ವಿತರಣೆ ಮಾಡಿದರು.

Advertisement

ಚೆಕ್‌ ವಿತರಿಸಿ ಮಾತನಾಡಿದ ಶಾಸಕ ಬೆಳ್ಳಿಪ್ರಕಾಶ್‌ ಅವರು ಸರ್ಕಾರ ನೀಡುವ ಸಹಾಯಧನವನ್ನು ನಿಮ್ಮ ಜೀವನ ನಿರ್ವಹಣೆ ಅಥವಾ ಉತ್ತಮ ಕೆಲಸ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳಿ ಎಂದು ಯುವ ಜೋಡಿಗೆ ಕರೆ ನೀಡಿ ಆಶೀರ್ವದಿಸಿದರು.

ತಾಲೂಕು ಸಮಾಜ ಕಲ್ಯಾಣಾ ಧಿಕಾರಿ ಶಂಕರಮೂರ್ತಿ ಮಾತನಾಡಿ, ಕಳೆದ ಸಾಲಿನಲ್ಲಿ ಸುಮಾರು 51 ಅಂತರ್ಜಾತಿ ವಿವಾಹಗಳು ನೊಂದಣಿಯಾಗಿದ್ದು ಎಲ್ಲರಿಗೂ ಸರ್ಕಾರದಿಂದ ಸೌಲಭ್ಯಗಳನ್ನು ನೀಡಲಾಗಿದೆ. ಈ ಬಾರಿ 38 ಅಂತರ್ಜಾತೀಯ ವಿವಾಹಗಳು ನಡೆದಿದ್ದು ಭರತ್‌ ಮತ್ತು ದಿವ್ಯ ಅವರ ಜೋಡಿಗೆ 3 ಲಕ್ಷ ರೂ. ಸಹಾಯಧನ ಮಂಜೂರಾಗಿದ್ದು 1.5 ಲಕ್ಷ ನಗದು, ಉಳಿದ 1.5 ಲಕ್ಷ ಕೆನರಾ ಬ್ಯಾಂಕಿನಲ್ಲಿ ಇವರಿಬ್ಬರ ಹೆಸರಿನಲ್ಲಿ ಠೇವಣಿಯಾಗಿ ಇಡಲಾಗಿದೆ. 3 ವರ್ಷ ಮುಗಿದ ನಂತರ ಠೇವಣಿ ಹಣ ಅವರು ಪಡೆಯಲು ಸಾಧ್ಯವಿದೆ ಎಂದರು. ಜಿಪಂ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌, ಪಾಟೀಲ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next