Advertisement

ಇಂದಿನಿಂದ ಶೃಂಗೇರಿ ಶ್ರೀಗಳ ವರ್ಧಂತಿ ಉತ್ಸವ

06:06 PM Apr 13, 2021 | Team Udayavani |

ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ 71 ನೇ ವರ್ಧಂತಿ ಉತ್ಸವದ ಕಾರ್ಯಕ್ರಮವು ಏ.13 ರಂದು ಆರಂಭಗೊಳ್ಳಲಿದೆ. ವರ್ಧಂತಿ ಅಂಗವಾಗಿ ಮಂಗಳವಾರ ಶ್ರೀಮಠದಲ್ಲಿ ಲಕ್ಷಮೋದಕ ಗಣ ಹೋಮದೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ.

Advertisement

ಲಕ್ಷ ಮೋದಕವನ್ನು ಸ್ವಯಂ ಸೇವಕರ ಸಹಕಾರದಿಂದ ಕಳೆದ ಮೂರು ದಿನದಿಂದ ಸಿದ್ಧಪಡಿಸಲಾಗಿತ್ತು. ವರ್ಧಂತಿ ಅಂಗವಾಗಿ ನಡೆಯುವ ಕೋಟಿ ಕುಂಕುಮರ್ಚಾನೆ, ಆಯುತ ಚಂಡಿಕಾ ಯಾಗ, ಅತಿರುದ್ರ ಯಾಗ ಮಹಾಯಾಗ ನಡೆಯಲಿದೆ. ಲಕ್ಷಮೋದಕ ಗಣಹೋಮವು ನರಸಿಂಹವನದಲ್ಲಿ ನಡೆಯಲಿದ್ದು, ಗಣಹೋಮದ ಪೂರ್ಣಾಹುತಿಯಲ್ಲಿ ಜಗದ್ಗುರುಗಳು ಉಪಸ್ಥಿತರಿರಲಿದ್ದಾರೆ.

ಏ.14 ರಂದು ಅತಿರುದ್ರ ಮಹಾಯಾಗದ ಸಂಕಲ್ಪ ನಡೆಯಲಿದ್ದು, ಏ.15 ರಂದು ಆಯುತ ಚಂಡಿಕಾ ಮಹಾಯಾಗದ ಸಂಕಲ್ಪ, ಏ.16 ರಂದು ಶ್ರೀ ಶಾರದಾಂಬೆ ಸನ್ನಿ ಧಿಯಲ್ಲಿ ಕೋಟಿ ಕುಂಕುಮಾರ್ಚನೆ ಸಂಕಲ್ಪ ನಡೆಯಲಿದೆ. ಏ.18 ರಂದು ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ವರ್ಧಂತಿ ಉತ್ಸವ ನಡೆಯಲಿದೆ.

ಆಯುತ ಚಂಡಿಕಾ ಮಹಾಯಾಗದ ಅಗತ್ಯ ಪೂರ್ವ ಸಿದ್ಧತೆ ನಡೆಸಲಾಗಿದೆ. ನರಸಿಂಹವನದಲ್ಲಿ ಯಾಗ ನಡೆಯುವ ಸ್ಥಳದಲ್ಲಿ ಬೃಹತ್‌ ಯಾಗಶಾಲೆ ನಿರ್ಮಿಸಲಾಗಿದೆ. ಋತ್ವಿಜರು ಉಳಿದುಕೊಳ್ಳುವ ವ್ಯವಸ್ಥೆಯನ್ನು ನರಸಿಂಹವನದಲ್ಲಿಯೇ ಮಾಡಲಾಗಿದೆ. ನರಸಿಂಹವನಕ್ಕೆ ಪ್ರವೇಶಿಸುವ ಮಾರ್ಗದಲ್ಲಿ ಚಪ್ಪರವನ್ನು ನಿರ್ಮಿಸಲಾಗಿದೆ. ತಳಿರು ತೋರಣ ಹಾಕಲಾಗಿದ್ದು, ಗುರುಭವನ ಹಾಗೂ ಶ್ರೀಮಠವನ್ನು ವಿದ್ಯುದ್ದೀಪದಿಂದ ಅಲಕಂರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next