Advertisement

ಶಾರದಾ ಪೀಠಕ್ಕೆ ಶಾಸಕ ರಾಜೇಗೌಡ ಭೇಟಿ

06:03 PM Apr 13, 2021 | Team Udayavani |

ಶೃಂಗೇರಿ: ಶಾಸಕ ಟಿ.ಡಿ. ರಾಜೇಗೌಡ ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದು ಉಭಯ ಜಗದ್ಗುರುಗಳ ಆಶೀರ್ವಾದ ಪಡೆದರು.

Advertisement

ಸೋಮವಾರ ನರಸಿಂಹವನದ ಗುರುಭವನದಲ್ಲಿ ಜಗದ್ಗುರುಗಳ ವರ್ಧಂತಿ ಹಿನ್ನಲೆಯಲ್ಲಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ಡಿ. ರಾಜೇಗೌಡ, ವರ್ಧಂತಿ ಉತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ನಂತರ ಆಡಳಿತಾ ಧಿಕಾರಿ ಡಾ| ಗೌರಿಶಂಕರ್‌ ಅವರನ್ನು ಭೇಟಿ ಮಾಡಿದ ಶಾಸಕರು, ಶ್ರೀಮಠಕ್ಕೆ ವರ್ಧಂತಿ ಉತ್ಸವಕ್ಕಾಗಿ ಹೊರೆ ಕಾಣಿಕೆ ಸಮರ್ಪಿಸಿದರು

. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌, ವಕ್ತಾರ ಉಮೇಶ್‌ ಪುದುವಾಳ್‌, ತಾಪಂ ಸದಸ್ಯ ಕೆ.ಆರ್‌. ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next