Advertisement

ಸಾರ್ವಜನಿಕ ನಂಬಿಕೆ ಮುಖ್ಯ

05:44 PM Apr 03, 2021 | Team Udayavani |

ಚಿಕ್ಕಮಗಳೂರು: ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅ ಧಿಕಾರಿಗಳು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದುವುದರ ಜೊತೆಗೆ ನಂಬಿಕೆ, ವಿಶ್ವಾಸ ಗಳಿಸಿದಲ್ಲಿ ಯಶಸ್ವಿ ಕಾರ್ಯ ನಿರ್ವಹಣೆ ಸಾಧ್ಯವೆಂದು ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ತಿಳಿಸಿದರು.

Advertisement

ಶುಕ್ರವಾರ ನಗರದ ರಾಮನಹಳ್ಳಿ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೊಲೀಸ್‌ ಇಲಾಖೆ ಉತ್ತಮ ಕಾರ್ಯವೈಖರಿಯಿಂದ ಸಮಾಜದಲ್ಲಿ ಬದಲಾವಣೆಗೆ ಶ್ರಮಿಸುತ್ತಿದೆ.

1965ರ ಏ. 2ರಂದು ರಾಜ್ಯ ಪೊಲೀಸ್‌ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸ್‌ ಧ್ವಜ ದಿನ ಹಾಗೂ ಪೊಲೀಸ್‌ ಕಲ್ಯಾಣ ದಿನ ಆಚರಿಸಲಾಗುತ್ತಿದೆ. ಇದರಿಂದ ನಿವೃತ್ತ ಪೊಲೀಸ್‌ ಸಿಬ್ಬಂ ದಿಗಳಿಗೆ ಹೆಚ್ಚಿನ ಸೌಲಭ್ಯ ನೀಡಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದೆ ಜನರು ಪೊಲೀಸ್‌ ಠಾಣೆಗೆ ಬರಲು ಭಯಪಡುತ್ತಿದ್ದರು. ವ್ಯಾಜ್ಯಗಳನ್ನು ತಮ್ಮ ತಮ್ಮಲ್ಲೇ ಇತ್ಯರ್ಥಪಡಿಸಿಕೊಳ್ಳುತ್ತಿದ್ದರು. ಇಂದು ಆ ಪರಿಸ್ಥಿತಿ ಬದಲಾಗಿದ್ದು ಪೊಲೀಸ್‌ ಇಲಾಖೆ ಉತ್ತಮ ಕಾರ್ಯದಿಂದ ಜನಸಾಮಾನ್ಯರು ಸಣ್ಣ ವಿಚಾರಗಳನ್ನು ಪೊಲೀಸ್‌ ಠಾಣೆ ಮೆಟ್ಟಿಲೇರಿ ದೂರು ನೀಡುತ್ತಿದ್ದು, ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.

ನಿವೃತ್ತ ಪೊಲೀಸ್‌ ನಿರೀಕ್ಷಕ ಕೆ. ಪ್ರಭಾಕರ್‌ ಮಾತನಾಡಿ, ಸಾರ್ವಜನಿಕರು ಮತ್ತು ಎಲ್ಲಾ ಇಲಾಖೆಯ ಅಧಿ  ಕಾರಿಗಳೊಂದಿಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಿದರೆ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ. ಪೊಲೀಸ್‌ ಧ್ವಜ ದಿನಾಚರಣೆ ದಿನದಂದು ಪೊಲೀಸ್‌ ಧ್ವಜ ಗುರುತಿನ ಚೀಟಿಯನ್ನು ಮಾರಾಟ ಮಾಡುವ ಮೂಲಕ ಸಂಗ್ರಹವಾದ ಹಣವನ್ನು ಪೊಲೀಸ್‌ ಕಲ್ಯಾಣ ನಿಧಿ ಗೆ ಅರ್ಪಿಸುವುದರೊಂದಿಗೆ ಪೊಲೀಸರ ಶ್ರೇಯೋಭಿವೃದ್ಧಿಗೆ ಇಲಾಖೆ ಶ್ರಮಿ ಸುತ್ತಿರುವುದು ಶ್ಲಾಘನೀಯ ಎಂದರು.

Advertisement

ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿ ಕಾರಿಗಳು ಮತ್ತು ಸಿಬ್ಬಂ ದಿ ಪ್ರತಿ ನಿತ್ಯ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಾರ್ವಜನಿಕರಿಂದ ದೂರು ಬಂದ ತಕ್ಷಣ ತ್ವರಿತವಾಗಿ ದೂರು ದಾಖಲಿಸಿಕೊಂಡು ಪ್ರಕರಣವನ್ನು ಇತ್ಯರ್ಥಗೊಳಿಸಬೇಕು ಎಂದ ಅವರು, ದೂರುದಾರರು ನೊಂದು ಬಂದಿರುತ್ತಾರೆ. ಅವರಿಗೆ ನೆರವು ನೀಡಬೇಕು ಹಾಗೂ ಮಹಿಳೆ ಯರು ಮತ್ತು ಮಕ್ಕಳೊಂದಿಗೆ ಸೌಹಾರ್ದ ಯುತವಾಗಿ ಅವರ ಸಮಸ್ಯೆಗಳಿಗೆ ಇಲಾಖೆ ಸಿಬ್ಬಂದಿಗಳು ಸ್ಪಂದಿ ಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎಚ್‌. ಅಕ್ಷಯ್‌ ಪೊಲೀಸ್‌ ಇಲಾಖೆಯ ವಾರ್ಷಿಕ ವರದಿ ಹಾಗೂ 2020-21ನೇ ಸಾಲಿನ ನಿವೃತ್ತ ಪೊಲೀಸ್‌ ಅಧಿಕಾರಿಗಳ ಪಟ್ಟಿ ಓದಿದರು.

ಪೊಲೀಸ್‌ ಧ್ವಜ ದಿನಾಚರಣೆ ಅಂಗವಾಗಿ ಆರು ಪೊಲೀಸ್‌ ತುಕಡಿಗಳಿಂದ ಕವಾಯತು ನಡೆಸಲಾಯಿತು. ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಿದ ಸಾರ್ವಜನಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್‌ ಇಲಾಖೆ ಅಧಿಕಾರಿಗಳು, ನಿವೃತ್ತ ಪೊಲೀಸ್‌ ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ಹಾಗೂ ಪೊಲೀಸ್‌ ಇಲಾಖೆ ಪ್ರಶಿಕ್ಷಣಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next