Advertisement

ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ

05:57 PM Feb 25, 2021 | Team Udayavani |

ಚಿಕ್ಕಮಗಳೂರು: ನಿವೇಶನ ರಹಿತ ಬಡವರಿಗೆ ಭೂಮಿ ಮತ್ತು ನಿವೇಶನ ನೀಡಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಬುಧವಾರ ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಮಾವಣೆಗೊಂಡ ಸಮಿತಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಶೀಘ್ರದಲ್ಲಿ ಬಡಜನರಿಗೆ ಭೂಮಿ ಮತ್ತು ನಿವೇಶನ ನೀಡಬೇಕೆಂದು ಆಗ್ರಹಿಸಿದರು.

ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಾಜ್ಯ ಸಂಚಾಲಕ ಗೌಸ್‌ಮೊಹಿದ್ದೀನ್‌ ಮಾತನಾಡಿ, ಶ್ರೀಮಂತರು ನೂರಾರು ಎಕರೆ ಜಮೀನು ಒತ್ತುವರಿ ಮಾಡಿದ್ದರು ಅವರನ್ನು ಯಾರೂ ಪ್ರಶ್ನಿಸುವುದಿಲ್ಲ. ಬಡಜನರು ವಾಸವಾಗಿರುವ ಜಾಗವನ್ನು ಖಾಲಿ ಮಾಡಿಸುತ್ತಾರೆ. ಆ ನಿರಾಶ್ರಿತರಿಗೆ ಭೂಮಿ ಮತ್ತು ನಿವೇಶನ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಮೂಡಿಗೆರೆ ತಾಲೂಕು ಕಂದೂರು ಗ್ರಾಮದ ಸರ್ವೆ ನಂಬರ್‌ 202 ಮತ್ತು 205ರಲ್ಲಿ ಮನೆ ನಿರ್ಮಿಸಿಕೊಂಡವರನ್ನು ಕಳೆದ 15ವರ್ಷಗಳ ಹಿಂದೇ ಒಕ್ಕಲೆಬ್ಬಿಸಲಾಗಿದೆ. ಆ ನಿರಾಶ್ರಿತರಿಗೆ ಇದುವರೆಗೂ ಭೂಮಿ ಅಥವಾ ನಿವೇಶನ ನೀಡಿಲ್ಲ. ಸತ್ತಿಹಳ್ಳಿ ಗ್ರಾಮದಲ್ಲಿ ಭೂ ಮಾಲಿಕರೊಬ್ಬರು
ಅಕ್ರಮವಾಗಿ ಭೂಮಿ ಅತಿಕ್ರಮಿಸಿದ್ದರು ಅರಣ್ಯ ಇಲಾಖೆ ಅ ಧಿಕಾರಿಗಳು ಹೋಗುವುದಿಲ್ಲ. ಬಡವರು ಗುಡಿಸಲು ಕಟ್ಟಿಕೊಂಡರೆ ಕಿತ್ತು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2019ರಲ್ಲಿ ಇಂದಾವರ ಗ್ರಾಮದಲ್ಲಿ ಟೆಂಟ್‌ಗಳನ್ನು ತೆರವುಗೊಳಿಸಿ ಜನರು ಬೀದಿಗೆ ಬಂದಿದ್ದು, ಅವರಿಗೆ ಭೂಮಿ ಮತ್ತು ನಿವೇಶನ ನೀಡಿಲ್ಲ.
ಶ್ರೀಮಂತರು ನೂರಾರು ಎಕರೆ ಭೂಮಿ ಒತ್ತುವರಿ ಮಾಡಿ ರೆಸಾಲ್ಟ್ ಹೋಂಸ್ಟೇ ಮಾಡಿಕೊಂಡಿದ್ದಾರೆ. ಬಡವರು ಬದುಕಲು ನಿವೇಶನ
ಭೂಮಿ ಕೇಳಿದರೆ ಸರ್ಕಾರಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದ ಅವರು ನಿರಾಶ್ರಿತರಿಗೆ ಶೀಘ್ರದಲ್ಲೇ ಭೂಮಿ ಮತ್ತು ನಿವೇಶನ ನೀಡಬೇಕು.
ಇಲ್ಲದಿದ್ದರೆ ಜಿಲ್ಲಾಡಳಿತ ಮತ್ತು ನಗರಸಭೆ ಮುಂದೆ ಟೆಂಟ್‌ ಹಾಕಿ ವಾಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಎಲ್‌. ಅಶೋಕ್‌, ಎನ್‌.ವೆಂಕಟೇಶ್‌, ಎಚ್‌.
ಎನ್‌.ಪೂರ್ಣೇಶ್‌, ಟಿ.ಎಲ್‌.ಗಣೇಶ್‌, ಕೃಷ್ಣಮೂರ್ತಿ, ನಾಸೀರ್‌, ಆವುತಿ ಮಂಜು, ರಾಜೇಶ್ವರಿ, ಖೈರುನಿಸ್ತ, ಫರಾಜ್‌, ನಗೀನಾ, ಪರ್ವಿನ್‌ ಉಪಸ್ಥಿತರಿದ್ದರು.

ಓದಿ : ಬಹಿರಂಗ ಟೀಕೆ ಸಲ್ಲದು, ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ : ಯತ್ನಾಳಗೆ ಈಶ್ವರಪ್ಪ ಕಿವಿಮಾತು

 

Advertisement

Udayavani is now on Telegram. Click here to join our channel and stay updated with the latest news.

Next