Advertisement

ಬಾಹ್ಯ ತೋರಿಕೆಗೆ ಧರ್ಮಾಚರಣೆ ಸಲ್ಲ : ಶ್ರೀ ವಿಧುಶೇಖರ ಸ್ವಾಮೀಜಿ

05:47 PM Feb 25, 2021 | Team Udayavani |

ಶೃಂಗೇರಿ: ಧರ್ಮಾಚರಣೆಗಳು ಬಾಹ್ಯ ತೋರಿಕೆಗೆ ಮಾಡದೇ, ಆತ್ಮಪೂರ್ವಕವಾಗಿ ನಮ್ಮ ಉನ್ನತಿಗಾಗಿ ಶ್ರದ್ಧೆಯಿಂದ ಮಾಡಬೇಕು ಎಂದು
ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಹೇಳಿದರು.

Advertisement

ವಿದ್ಯಾರಣ್ಯಪುರ ಗ್ರಾಪಂಯ ವಿದ್ಯಾರಣ್ಯಪುರದ ಶ್ರೀರಾಮ ದೇವಸ್ಥಾನದಲ್ಲಿ ಬುಧವಾರ ಶ್ರೀರಾಮ ದೇವರಿಗೆ ರಜತ ಪ್ರಭಾವಳಿ  ಸಮರ್ಪಿಸಿ ಮಾತನಾಡಿದರು. ಶ್ರೀ ಶಂಕರಚಾರ್ಯರು ನಡೆದಾಡಿದ ಕ್ಷೇತ್ರ. ಇಂಥ ತಪೋಭೂಮಿಯಲ್ಲಿ ಯಾವುದೇ ತಪ್ಪು ಆಗಬಾರದು. ಪಾಪ ಮಾಡಿದರೆ
ತೀರ್ಥ ಕ್ಷೇತ್ರಕ್ಕೆ ಹೋಗುತ್ತಾರೆ. ತೀರ್ಥ ಕ್ಷೇತ್ರದಲ್ಲಿದ್ದುಕೊಂಡು ತಪ್ಪು ಮಾಡಿದರೆ ಯಾವ ಕ್ಷೇತ್ರಕ್ಕೆ ಹೋಗಬೇಕು. ಇದು ಮಹಾ ಪಾಪವಾಗಿದೆ. ನಮ್ಮ ಏಳಿಗೆಗಾಗಿ ಆಚರಣೆ ಇರಬೇಕು. ನಾವೇ ಆಚರಣೆ ಮಾಡಿದರೆ ಮುಂದಿನ ಪೀಳಿಗೆ, ಜನಾಂಗ ಅದನ್ನು ಅನುಸರಿಸುತ್ತಾರೆ. ಇಲ್ಲವಾದಲ್ಲಿ
ಧರ್ಮಾಚರಣೆ ನಶಿಸಿಹೋಗುತ್ತದೆ ಎಂದರು.

ಶ್ರೀ ರಾಮಾಯಣದಲ್ಲಿ ಬರುವ ಪಾತ್ರಗಳು ವಚನ ಪಾಲನೆಯನ್ನು ತೋರಿಸಿಕೊಡುತ್ತದೆ. ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀ
ರಾಮಚಂದ್ರ, ಭಾತೃ ಪ್ರೇಮಕ್ಕಾಗಿ ಲಕ್ಷ್ಮಣ, ಸ್ನೇಹಕ್ಕಾಗಿ ವಿಭಿಷಣ, ಭಕ್ತಿಗಾಗಿ ಶ್ರೀ ಆಂಜನೇಯರನ್ನು ತೋರಿಸಿಕೊಡಲಾಗಿದೆ. ಇವೆಲ್ಲ ಪಾತ್ರಗಳು ನಮಗೆ ಆದರ್ಶ ಪ್ರಾಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ನೂತನ ರಸ್ತೆ ನಿರ್ಮಾಣಕ್ಕೆ ಸಹಕರಿಸಿದ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಶಾಸಕ ಟಿ.ಡಿ.ರಾಜೇಗೌಡ,
ಪ್ರಭಾವಳಿ ದಾನಿ ಬೆಂಗಳೂರಿನ ಎನ್‌.ಎ.ಸುಬ್ಬರಾವ್‌ ಅವರನ್ನು ಗೌರವಿಸಲಾಯಿತು.

ಇದಕ್ಕೂ ಮೊದಲು ಜಗದ್ಗುರುಗಳು ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ, ರಜತ ಪ್ರಭಾವಳಿ ಸಮರ್ಪಣೆ
ನೆರವೇರಿಸಿದರು. ನಂತರ ಶ್ರೀರಾಮ ತಾರಕ ಹೋಮದ ಪೂರ್ಣಾಹುತಿಯಲ್ಲಿ ಜಗದ್ಗುರುಗಳು ಉಪಸ್ಥಿತರಿದ್ದರು.

Advertisement

ದೇವಸ್ಥಾನ ಸಮಿತಿಯ ಬಿ.ಎಲ್‌. ರವಿಕುಮಾರ್‌, ಚಂದ್ರಶೇಖರ್‌, ಮುರುಳಿಧರ್‌,ಸತ್ಯನಾರಾಯಣ ಬೆಂಗಳೂರು ಮತ್ತಿತರರು ಇದ್ದರು. ಇಂದಿನ ಕಾರ್ಯಕ್ರಮ: ಶ್ರೀರಾಮ ಸನ್ನಿಧಿಯಲ್ಲಿ ಸತ್ಯಗಣಪತಿ,ಶ್ರೀ ಸತ್ಯನಾರಾಯಣ ವ್ರತ, ರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ.

ಓದಿ : ಜಲವಿವಾದಗಳ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಭೆ ಕರೆದ ಸಚಿವ ರಮೇಶ್ ಜಾರಕಿಹೊಳಿ  

Advertisement

Udayavani is now on Telegram. Click here to join our channel and stay updated with the latest news.

Next