ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆ ಖಾಂಡ್ಯ ಹೋಬಳಿ ಬಿದರೆ ಗ್ರಾಮದಲ್ಲಿ ತಿರುಗಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಮಾನಸಿಕ ಅಸ್ವಸ್ಥ
ಯುವಕನೋರ್ವನನ್ನು ಖಾಂಡ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಕಳಸ ಸಮೀಪದ ಅನಾಥಾಶ್ರಮಕ್ಕೆ ದಾಖಲಿಸಿದ ಘಟನೆ ನಡೆದಿದೆ.
ಬಿದರೆ ಗ್ರಾಮದಲ್ಲಿ ತಿರುಗಾಡುತ್ತಿದ್ದ ಈ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಆತನ ಬಗ್ಗೆ ಅನುಮಾನಗೊಂಡು ಖಾಂಡ್ಯದ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಬಿದರೆ ರಘುಪತಿ ಅವರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅವರು ಆವ್ಯಕ್ತಿಯನ್ನು ಗಮನಿಸಿ ವಿಚಾರಿಸಿ ಊಟ ನೀಡುತ್ತಿದ್ದರು.
ಈ ಬಗ್ಗೆ ಕಡಬಗೆರೆ ಚಂದ್ರಶೇಖರ್ ರೈ ಅವರೊಂದಿಗೆ ಚರ್ಚಿಸಿದ ರಘುಪತಿ ಅವರು ಅಂತಿಮವಾಗಿ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ದೇವರಗುಡ್ಡದಲ್ಲಿನ ದಿವ್ಯ ಕಾರುಣ್ಯಾಲಯ ಅನಾಥಾಶ್ರಮಕ್ಕೆ ಸೇರಿಸಲಾಗಿದೆ. ದಿವ್ಯ ಕಾರುಣ್ಯಾಲಯದ ಬಿಬಿನ್ ಜೋಸ್ ಅವರು ಆ ವ್ಯಕ್ತಿಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಕಳಸದ ಸಿ. ಅಶೋಕ್ ಕುಮಾರ್, ಮೃತ್ಯುಂಜಯ ಆಚಾರ್, ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸುಧಾಕರ್ ಮತ್ತಿತರರು ಸಹಕಾರ ನೀಡಿದ್ದಾರೆ ಎಂದು ಬಿದರೆ ರಘುಪತಿ ತಿಳಿಸಿದ್ದಾರೆ.
ಓದಿ :
ಸಂಭ್ರಮದ ದುರ್ಗಾಂಬಾ ದೇವಿ ಜಾತ್ರೆ