Advertisement

ಸಂಭ್ರಮದ ದುರ್ಗಾಂಬಾ ದೇವಿ ಜಾತ್ರೆ

05:52 PM Feb 21, 2021 | Team Udayavani |

ಅಜ್ಜಂಪುರ: ಸಮೀಪದ ಅಂತರಘಟ್ಟೆ ದುರ್ಗಾಂಬಾ ದೇವಿ ರಥೋತ್ಸವ ಶನಿವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ನಾನಾ ಕಡೆಗಳಿಂದ ಭಕ್ತರು ಎತ್ತಿನ ಗಾಡಿ, ಆಟೋ, ಟ್ರಾಕ್ಟರ್‌ ಮೂಲಕ ಆಗಮಿಸಿ ದೇವಿಯ ದರ್ಶನ ಪಡೆದರು. ಕಮಾನು ಕಟ್ಟಿದ ಗಾಡಿಗಳ ಮೂಲಕ ದೇವಾಲಯಕ್ಕೆ ಆಗಮಿಸಿದ ಭಕ್ತರು ಪಾನಕ- ಫಲಾಹಾರ ಹಂಚಿ ಸಂಭ್ರಮಿಸಿದರು. ಭಕ್ತಾ ದಿಗಳು ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು.

Advertisement

ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ಅನೇಕ ಧಾರ್ಮಿಕ ವಿ ಧಿ-ವಿಧಾನಗಳು ಜರುಗಿದವು. ಶುಕ್ರವಾರ ರಾತ್ರಿ ವಿವಿಧ ಜಾನಪದ ಕಲಾ ತಂಡಗಳ ಸಮ್ಮುಖದಲ್ಲಿ ದೇವಿಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವವನ್ನು ಸಂಪೂರ್ಣ ಹೂವಿನಿಂದ ಅಲಂಕರಿಸಿದ್ದು ವಿಶೇಷ ವಾಗಿತ್ತು. ಮಳೆಯ ನಡುವೆಯೂ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಭಕ್ತರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ತಿಂಡಿ- ತಿನಿಸು, ಆಟಿಕೆಗಳ ಖರೀದಿ ಜೋರಾಗಿತ್ತು. ಬಂದಂತಹ ಭಕ್ತಾ ದಿಗಳಿಗೆ ಶುಕ್ರವಾರ ಹಾಗೂ ಶನಿವಾರ 2 ದಿನಗಳ
ಕಾಲ ನಿರಂತರವಾಗಿ ಗ್ರಾಮಸ್ಥರು ಅನ್ನಸಂತರ್ಪಣೆ ನೆರವೇರಿಸಿದರು. ತರೀಕೆರೆ ಶಾಸಕ ಡಿ.ಎಸ್‌. ಸುರೇಶ್‌ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ
ದೇವಿಯ ದರ್ಶನ ಪಡೆದರು.

ತರೀಕೆರೆ ಡಿವೈಎಸ್‌ಪಿ ಏಗಣ್ಣನವರ್‌ ನೇತೃತ್ವದ ಅಜ್ಜಂಪುರ, ಲಿಂಗದಹಳ್ಳಿ, ತರೀಕೆರೆ, ಕಡೂರು, ಯಗಟಿ, ಲಕ್ಕವಳ್ಳಿ ಪೊಲೀಸ್‌ ಠಾಣೆಯ 400ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್ ಕಾರ್ಯದಲ್ಲಿ ನಿರತರಾಗಿದ್ದರು.

ಓದಿ : ಸಿಎಂ ಅವರಿಂದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಸಿಗಲಿದೆ: ಸಚಿವ ನಿರಾಣಿ ವಿಶ್ವಾಸ

Advertisement
Advertisement

Udayavani is now on Telegram. Click here to join our channel and stay updated with the latest news.

Next