Advertisement

ಕುಂಚೆಬೈಲು ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ

05:40 PM Feb 21, 2021 | Team Udayavani |

ಶೃಂಗೇರಿ: ಸರ್ಕಾರದ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮ ವಾಸ್ತವ್ಯದ ಮೂಲಕ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದು ತಹಶೀಲ್ದಾರ್‌ ಅಂಬುಜಾ ಹೇಳಿದರು.

Advertisement

ಮೆಣಸೆ ಗ್ರಾಪಂನ ಕುಂಚೆಬೈಲು ಸರ್ಕಾರಿ ಶಾಲೆಯಲ್ಲಿ ಶನಿವಾರ ಹೇರೂರು ಗ್ರಾಮ ವಾಸ್ತವ್ಯ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಸಮಸ್ಯೆಯನ್ನು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಜಿಪಂ ಸದಸ್ಯೆ ಶಿಲ್ಪಾ ರವಿ ಮಾತನಾಡಿ, ಸರ್ಕಾರ ಉತ್ತಮ ಉದ್ದೇಶದಿಂದ ರೂಪಿಸಿರುವ ಗ್ರಾಮ ವಾಸ್ತವ್ಯದ ಮೊದಲ ಸಭೆಗೆ ಮಾಹಿತಿ ಕೊರತೆಯಿಂದ ಪೂರ್ಣ ಪ್ರಮಾಣದ ಯಶಸ್ಸು ದೊರಕಿಲ್ಲ. ಜನಪ್ರತಿನಿಧಿ ಗಳಿಗೂ ಸಮರ್ಪಕ ಮಾಹಿತಿ ನೀಡದೆ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ
ನೀಡಿಲ್ಲ. ಮುಂದಿನ ಸಭೆಗೆ ಮುನ್ನ ಕನಿಷ್ಠ ಎರಡು ಗ್ರಾಮಗಳಲ್ಲಿ ಸಭೆ ನಡೆಸಿ, ಮುಂಚಿತವಾಗಿ ಪ್ರಕಟಣೆ ನೀಡಬೇಕು. ಸರ್ಕಾರ ಕೈಗೊಂಡಿರುವ ಯೋಜನೆ ಯಶಸ್ವಿಯಾಗಬೇಕು ಎಂದರು.

ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಂಯರಾಂ, ತಾಪಂ ಅಧ್ಯಕ್ಷೆ ಜಯಶೀಲ, ಸದಸ್ಯ ಕೆ.ಎಸ್‌. ರಮೇಶ್‌, ಮೆಣಸೆ ಗ್ರಾಪಂ ಅಧ್ಯಕ್ಷ ನವೀನ್‌, ಉಪಾಧ್ಯಕ್ಷೆ ಜಯಲಕ್ಷ್ಮೀ ಮತ್ತಿತರರು ಇದ್ದರು.

ಓದಿ :  ಕೃಷಿ ಪದವಿ ಕೋರ್ಸುಗಳ ಪ್ರವೇಶಾತಿಯಲ್ಲಿ ರೈತರ ಮಕ್ಕಳ ಮೀಸಲಾತಿ ಹೆಚ್ಚಳ: ಸಚಿವ ಬಿ.ಸಿ.ಪಾಟೀಲ್

Advertisement
Advertisement

Udayavani is now on Telegram. Click here to join our channel and stay updated with the latest news.

Next