Advertisement
ಶನಿವಾರ ತಾಲೂಕಿನ ಲಕ್ಯಾ ಹೋಬಳಿ ವ್ಯಾಪ್ತಿಯ ಕುರುಬರ ಬೂದಿಹಾಳ್ ಗ್ರಾಮದಲ್ಲಿ ಕಂದಾಯ ಇಲಾಖೆ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ “ಜಿಲ್ಲಾ ಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂ ಧಿಸಿದ ಸಮಸ್ಯೆಗಳೇ ಹೆಚ್ಚಿವೆ. ರೈತರ ಜಮೀನಿನ ಪಹಣಿ, ಮ್ಯುಟೇಶನ್, ಪೌತಿ ಖಾತೆಗಳತಿದ್ದುಪಡಿ ಸೇರಿದಂತೆ ಹಲವಾರು ಸಮಸ್ಯೆಗಳು ಬಾಕಿ ಇದ್ದು, ಕಾರ್ಯಕ್ರಮದ ಮೂಲಕ ಪರಿಹಾರ ಒದಗಿಸಲಾಗುವುದು. ಚಿಕ್ಕಮಗಳೂರು ಕಂದಾಯ ಉಪ ವಿಭಾಗದಲ್ಲಿ 12,500 ಪೌತಿ ಖಾತೆಗಳಿದ್ದು, ಇಂತಹ ಖಾತೆಗಳಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್‌ಗಳು ಸಿಗದೇ ಪೌತಿ ಖಾತೆಗಳ ವಾರಸುದಾರರಿಗೆ ಬೆಳೆ ಪರಿಹಾರ ಸಿಕ್ಕಿರಲಿಲ್ಲ. ಪೌತಿ ಖಾತೆಗಳ ಆಂದೋಲನದ ಮೂಲಕ ಇಂತಹ 4,600 ಪೌತಿ ಖಾತೆಗಳನ್ನು ಅವರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಜಮೀನು ದಾಖಲೆಗಳಲ್ಲಿನ ದೋಷ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದರು. ಗ್ರಾಮದ ಮುಖಂಡ ಸತ್ಯಮೂರ್ತಿ ಮಾತನಾಡಿ, ಕೆ.ಬಿ. ಹಾಳ್ ಗ್ರಾಪಂ ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿದ್ದು, ಗ್ರಾಪಂ ಗ್ರಾಮಠಾಣಾ ಜಾಗ ಗುರುತು ಮಾಡದಿರುವುದರಿಂದ ಸರ್ಕಾರಿ ಜಾಗದ ಬಗ್ಗೆ ಗೊಂದಲ ಏರ್ಪಟ್ಟಿದೆ. ಕಂದಾಯ ಅರಣ್ಯ ಜಾಗಗಳ ಬಗ್ಗೆ ಗೊಂದಲವಿದ್ದು, ಜಿಲ್ಲಾಡಳಿತ ಗ್ರಾಮಠಾಣಾ ಜಾಗ ಗುರುತು ಮಾಡುವುದರೊಂದಿಗೆ ಸರ್ಕಾರಿ ಉದ್ದೇಶಕ್ಕಾಗಿ ಗ್ರಾಪಂಗೆ 10 ಎಕರೆ ಕಂದಾಯ ಜಾಗವನ್ನು ಮಂಜೂರು
ಮಾಡಬೇಕು. ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವಾಗಿದ್ದು, ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಜಾನುವಾರುಗಳು ಹೆಚ್ಚಿದ್ದು, ಪಶು ಆಸ್ಪತ್ರೆಯನ್ನು ಮಂಜೂರು ಮಾಡಬೇಕು. ಕೆ.ಬಿ.ಹಾಳ್ ಗ್ರಾಮದಲ್ಲಿ ಸಂಚರಿಸುವ ಚಿಕ್ಕಮಗಳೂರು- ಜಾವಗಲ್ ಸಾರಿಗೆ ಬಸ್‌ಗಳಿಗೆ ನಿಲುಗಡೆ ಕಡ್ಡಾಯ ಮಾಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳ ಅಭಿವೃದ್ಧಿಗಾಗಿ ಕೆರೆಗಳನ್ನು ಜಿಪಂ ಇಲ್ಲವೇ ಸಣ್ಣ ನೀರಾವರಿ ಇಲಾಖೆಗೆ ಸೇರಿಸಬೇಕು. ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಶಿಥಿಲಗೊಂಡಿದ್ದು, ದುರಸ್ತಿಗೆ ಕ್ರಮ
ವಹಿಸಿ, ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಿಸುವುದು ಹಾಗೂ ಕೋಟಿಗನಹಳ್ಳಿ ಗ್ರಾಮದ 22 ಕುಟುಂಬಗಳ ಜಮೀನಿಗೆ ಸಾಗುವಳಿ ಚೀಟಿ ನೀಡಬೇಕೆಂದು ಆಗ್ರಹಿಸಿದರು. ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿದರು. ಪಶು ಸಂಗೋಪನಾ ಇಲಾಖಾ ಧಿಕಾರಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಕುರಿತು ವಿವರಿಸಿದರು. ವೇದಿಕೆ ಕಾರ್ಯಕ್ರಮದ ಬಳಿಕ ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಸಲ್ಲಿಸಿದ್ದ ಅರ್ಜಿಗಳ ವಿಲೇವಾರಿ, ಚರ್ಚೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ಶುಭಾ ಸತ್ಯಮೂರ್ತಿ, ಗ್ರಾಪಂ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಶಾರದಮ್ಮ, ತಹಶೀಲ್ದಾರ್ ಡಾ|ಕಾಂತರಾಜ್, ತಾಪಂ ಇಒ ತಾರಾನಾಥ್, ಸಮಾಜ ಕಲ್ಯಾಣಾ ಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಆರೋಗ್ಯಾಧಿಕಾರಿ ಡಾ| ಸೀಮಾ ಸೇರಿದಂತೆ ಕೃಷಿ, ಪಶು ಸಂಗೋಪನೆ, ಅರಣ್ಯ, ಕೆಎಸ್‌ಆರ್‌ಟಿಸಿ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಅಧಿಕಾರಿಗಳು, ಜನಪ್ರತಿನಿ ಧಿಗಳು ಶಾಲಾ ಮಕ್ಕಳೊಂದಿಗೆ ಮೆರವಣಿಯಲ್ಲಿ ಗ್ರಾಮದ ವಿವಿಧ ರಸ್ತೆ ಬಡಾವಣೆಗಳಲ್ಲಿ ಸಾಗಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದರು. ಓದಿ : ಹಳ್ಳಿ ಜನರ ಸಮಸ್ಯೆಗೆ ಜಿಲ್ಲಾಧಿಕಾರಿ ಸ್ಪಂದನೆ