ಬೀರೂರು: ಜೆಡಿಎಸ್ ತತ್ವ-ಸಿದ್ಧಾಂತಗಳನ್ನು ಮೆಚ್ಚಿ ನಾಡಿನ ಸಮಸ್ತ ಯುವಕರು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಜಾತ್ಯತೀತ ಪಕ್ಷ ನಮ್ಮದು. ಯಾರೇ ಆಗಮಿಸಿದರೂ ಸ್ವಾಗತ ಎಂದು ರಾಜ್ಯ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತ ಆರೀಫ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು. ಪ್ರಾದೇಶಿಕ ಪಕ್ಷ ಬೆಳೆಯಲು ಹಲವಾರು ಅಡೆತಡೆಗಳಿವೆ. ಆದರೆ ಅಂತಹ ಯಾವುದೇ ವಿಘ್ನಗಳನ್ನು ಲೆಕ್ಕಿಸದೆ ಬೆಳೆದು ನಿಂತಿರುವ ಪಕ್ಷ ನಮ್ಮದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಂತೆ ನಾವು ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿ ನಿಷ್ಪಕ್ಷಪಾತವಾಗಿ ಶ್ರಮಿಸಿದರೆ ಮಾತ್ರ ದೃಢವಾಗಿ ನಿಂತು ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿ ಕಾರಕ್ಕೆ ತರಬಹುದು ಎಂದರು.
ಜೆಡಿಎಸ್‌ಗೆ ಸೇರ್ಪಡೆಯಾದ ಆರೀಫ್ ಮಾತನಾಡಿ, ನಾನು ಮೂಲತಃ ಜೆಡಿಎಸ್ ಪಕ್ಷದವನಾಗಿದ್ದು, ಕೆಲವು ವೈಯಕ್ತಿಕ ಕಾರಣಗಳಿಂದ ದೂರವಾಗಿದ್ದೆ. ಪಕ್ಷದ ಬಲವರ್ಧನೆ ನಮ್ಮ ಮೂಲ ಉದ್ದೇಶವಾಗಿದೆ. ಕಾಂಗ್ರೆಸ್ ಪಕ್ಷ ನನ್ನನ್ನು ಮೂಲೆಗುಂಪಾಗುವಂತೆ ಮಾಡಿತ್ತು ಎಂದರು.
ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ನಗರ ಘಟಕ ಅಧ್ಯಕ್ಷ ಬಾವಿಮನೆ ಮಧು, ಪುರಸಭೆ ಸದಸ್ಯ ಮೋಹನ್ ಕುಮಾರ್, ಜೆಡಿಎಸ್ ಮುಖಂಡರಾದ ಹೇಮಂತ್ ಕುಮಾರ್, ಮುಬಾರಕ್, ಅಯ್ಯೂಬ್, ಶಿವಮೂರ್ತಿ, ಹರಿಪ್ರಸಾದ್, ರಾಮಣ್ಣ, ಗಣೇಶ್, ಮಲ್ಲೇಶ್ ಇದ್ದರು.
ಓದಿ :
ಉದ್ಯಾವರ ಗ್ರಾಮ ಪಂಚಾಯತಿಗೆ ಬೀಗ ಜಡಿದು ಸಾರ್ವಜನಿಕರ ಆಕ್ರೋಶ