Advertisement

ಕಾವಲ್‌ನಲ್ಲಿ ಜಾನುವಾರು ಸಾವು: ಜನರಲ್ಲಿ ಆತಂಕ

05:25 PM Feb 15, 2021 | Team Udayavani |

ಚಿಕ್ಕಮಗಳೂರು: ಸರ್ಕಾರ ಗೋ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ.
ಜಿಲ್ಲೆಯಲ್ಲಿ ಸರ್ಕಾರವೇ ನಡೆಸುತ್ತಿರುವ ಅಮೃತ್‌ ಮಹಲ್‌ ಕಾವಲ್‌ನಲ್ಲಿ ಹಸು ಮತ್ತು ಕರುಗಳು ಸಾವನ್ನಪ್ಪುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

Advertisement

ಅಮೃತ್‌ ಮಹಲ್‌ ತಳಿ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದ್ದು ತನ್ನದೇ ಆದ ಇತಿಹಾಸ ಹೊಂದಿದೆ. ರಾಜ-ಮಹಾರಾಜರ ಕಾಲದಲ್ಲಿ ಒಂದು
ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ವಸ್ತುಗಳ ಸಾಗಾಟಕ್ಕೆ ಅಮೃತ್‌ ಮಹಲ್‌ ತಳಿಯ ರಾಸುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಇಂತಹದೊಂದು
ದೊಡ್ಡ ಇತಿಹಾಸವನ್ನು ಅಮೃತ್‌ ಮಹಲ್‌ ತಳಿ ಹೊಂದಿದೆ.

ದೈತ್ಯ ದೇಹವನ್ನು ಹೊಂದಿರುವ ಅತ್ಯಂತ ಶಕ್ತಿಯುತವಾದ ಅಮೃತ್‌ ಮಹಲ್‌ ತಳಿಯ ಸಂವರ್ಧನೆಗೆ ಸರ್ಕಾರದಿಂದ ಜಿಲ್ಲೆಯಲ್ಲಿ
ಕೇಂದ್ರವನ್ನು ತೆರೆಯಲಾಗಿದೆ. ತಳಿಗಳ ಸಂವರ್ಧನೆಗೆ ಸಾಕಷ್ಟು ಹಣವನ್ನು ವಿನಿಯೋಗಿಸಲಾಗುತ್ತಿದೆ. ಆದರೆ, ಕೇಂದ್ರದಲ್ಲಿ ಕರುಗಳು ಸಾವನ್ನಪ್ಪುತ್ತಿದ್ದು, ಯಾವ ಕಾರಣದಿಂದ ಹಸು ಮತ್ತು ಕರುಗಳು ಸಾವನ್ನಪ್ಪುತ್ತಿವೆ ಎಂಬ ವಿಷಯ ಸಾರ್ವಜನಿಕರ ಪ್ರಶ್ನೆಯಾಗಿದೆ.

ಇತ್ತೀಚೆಗೆ ಬಾಸೂರು ಅಮೃತ್‌ ಮಹಲ್‌ ಕಾವಲ್‌ನಲ್ಲಿ 3 ಕರುಗಳು ಮೃತಪಟ್ಟಿವೆ. ಹಾಗೂ ಇತರೆ ಸಂವರ್ಧನಾ ಕೇಂದ್ರಗಳಲ್ಲಿ ಹಸು ಮತ್ತು ಕರುಗಳು ಮೃತಪಟ್ಟ ಬಗ್ಗೆ ಲಭ್ಯ ಮೂಲಗಳಿಂದ ತಿಳಿದು ಬಂದಿದೆ. ಅಜ್ಜಂಪುರ ಸಂವರ್ಧನಾ ಕೇಂದ್ರದಲ್ಲಿ 372, ಬಾಸೂರು 301, ಲಿಂಗದಹಳ್ಳಿ 394, ರಾಯಸಂದ್ರ 245, ಹಬ್ಬನಘಟ್ಟ 197, ರಾಮಗಿರಿ 266, ಚಿಕ್ಕೆಮ್ಮಿಗನೂರು 339 ಬೀರೂರು 107 (ಗಂಡು ತಳಿ) ಹಸುಗಳನ್ನು ಸಾಕಲಾಗುತ್ತಿದೆ. ಸದೃಢವಾಗಿ ಬೆಳೆದುನಿಂತ ಮೇಲೆ ಅವುಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಇದರಿಂದ ಸರ್ಕಾರಕ್ಕೂ ಲಕ್ಷಾಂತರ ರೂ. ಆದಾಯ ತರುತ್ತಿದೆ. 2020ರಲ್ಲಿ ಬೀರೂರು ಸಂವರ್ಧನಾ ಕೇಂದ್ರವೊಂದರಲ್ಲಿ ಹರಾಜು ಪ್ರಕ್ರಿಯೆಯಿಂದ
ಸುಮಾರು 87ಲಕ್ಷ ರೂ. ಆದಾಯ ಬಂದಿತ್ತು. ಜಿಲ್ಲೆಯ ಅಜ್ಜಂಪುರ ಅಮೃತ್‌ ಮಹಲ್‌ ಕೇಂದ್ರದ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು,
ಹಾಸನ, ಚಿತ್ರದುರ್ಗ ಜಿಲ್ಲೆ ಸೇರಿದಂತೆ ಒಟ್ಟು 68,247 ಎಕರೆ ಕಾವಲ್‌ ಹೊಂದಿದೆ. ಪ್ರತಿಯೊಂದು ಕೇಂದ್ರಗಳಲ್ಲಿ 400 ಹಸುಗಳನ್ನು ನಿರ್ವಹಣೆ
ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಇಷ್ಟೆಲ್ಲ ಸೌಲಭ್ಯಗಳನ್ನು ಹೊಂದಿದ್ದರೂ ಆಗಾಗ್ಗೆ
ಹಸುಗಳು ಮತ್ತು ಕರುಗಳು ಸಾವನ್ನಪ್ಪುತ್ತಿರುವ ಘಟನೆ ನಡೆಯುತ್ತಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಹಸು ಮತ್ತು ಕರುಗಳು ಯಾವ ಕಾರಣದಿಂದ ಸಾವನ್ನಪ್ಪುತ್ತಿವೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಸರ್ಕಾರ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಪ್ರತೀ ತಾಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯಲು
ಚಿಂತಿಸಿದೆ. ಸರ್ಕಾರವೇ ನಡೆಸುತ್ತಿರುವ ಅಮೃತ್‌ ಮಹಲ್‌ ತಳಿ ಸಂವರ್ಧನಾ ಕೇಂದ್ರದಲ್ಲಿ ಕರುಗಳು ಮತ್ತು ಹಸುಗಳು ಆಗಾಗ್ಗೆ ಸಾವನ್ನಪ್ಪುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಜಿಲ್ಲಾಡಳಿತ ಈ ಸಂಬಂಧ ಗಮನ ಹರಿಸಬೇಕಿದೆ.

Advertisement

ಓದಿ : ಕಲೆಗಳತ್ತ ಪೋಷಕರು ಜಾಗೃತಿ ಮೂಡಿಸಿ: ಅನಿತಾ

Advertisement

Udayavani is now on Telegram. Click here to join our channel and stay updated with the latest news.

Next