Advertisement

ಪೊಲೀಸ್‌ ವಸತಿ ಗೃಹ ಉದ್ಘಾಟನೆ

06:19 PM Feb 08, 2021 | Team Udayavani |

ಆಲ್ದೂರು: ಆಲ್ದೂರಿನ ಹಳೆಯ ಪ್ರವಾಸಿ ಮಂದಿರದ ಬಳಿ ನೂತನವಾಗಿ ನಿರ್ಮಿಸಿರುವ 12 ಪೊಲೀಸ್‌ ವಸತಿ ಗೃಹಗಳನ್ನು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಭಾನುವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಆಲ್ದೂರು ಠಾಣೆಯ ಪೊಲೀಸ್‌ ಸಿಬ್ಬಂದಿಗಳಿಗೆ ವಸತಿ ಗೃಹಗಳ ಅವಶ್ಯಕತೆ ಇತ್ತು. ಸಿಬ್ಬಂದಿಗಳು ಚಿಕ್ಕಮಗಳೂರಿನಿಂದ ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇತ್ತು. ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 12 ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಇವು ಬಹಳ ಚಿಕ್ಕದಾಗಿವೆ. 12 ಗೃಹಗಳ ಬದಲು 8 ಗೃಹಗಳನ್ನು ಮಾಡಿದ್ದರೆ ಅನುಕೂಲವಾಗುತ್ತಿತ್ತು. ಕುಟುಂಬ ಸಮೇತ ಇರಲು ವ್ಯವಸ್ಥಿತವಾಗಿರುತ್ತಿತ್ತು ಎಂದರು.

Advertisement

ಪೊಲೀಸ್‌ ಸಿಬ್ಬಂದಿಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮ ಪಡುತ್ತಿದ್ದಾರೆ. ಅವರಿಗೂ ಒತ್ತಡದ ಜೀವನವಿದೆ. ಅವರ ವಾಸಕ್ಕೆ ಯೋಗ್ಯವಾದ ವಸತಿ ಗೃಹಗಳ ಅವಶ್ಯಕತೆ ಇದ್ದು ಉತ್ತಮ ಗೃಹಗಳ ನಿರ್ಮಾಣವಾಗಬೇಕು. ಈ ಬಗ್ಗೆ ನಾನು ವಿಧಾನಸಭೆ ಅಧಿವೇಶನದಲ್ಲಿ ಗಮನ ಸೆಳೆಯುತ್ತೇನೆ ಎಂದರು.

ವೃತ್ತ ನಿರೀಕ್ಷಕಿ ಸ್ವರ್ಣ ಮಾತನಾಡಿ, ಆಲ್ದೂರು ಪಟ್ಟಣದಲ್ಲಿ ಪೋಲೀಸ್‌ ವಸತಿ ಗೃಹಗಳನ್ನು ನಿರ್ಮಿಸಿಕೊಡಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿದ್ದು ಆ ಬೇಡಿಕೆ ಈಡೇರಿದೆ. ಹಿಂದಿನ ವಸತಿ ಗೃಹಗಳಿಗೆ ಹೋಲಿಕೆ ಮಾಡಿದರೆ ಆಧುನಿಕವಾಗಿ ನಿರ್ಮಾಣ ಮಾಡಲಾಗಿದೆ. ರಾಜ್ಯಾದ್ಯಂತ ಒಂದೇ ರೀತಿಯ ಯೋಜನೆಯಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಆಧುನಿಕ ಸ್ಪರ್ಶ ಸಿಗುವಂತಾಗಬೇಕು ಎಂದರು.

ಆಲ್ದೂರು ಆಲ್ದೂರು ಪಿಎಸ್‌ಐ ಶಂಭುಲಿಂಗಯ್ಯ,ಅಪರಾಧ ವಿಭಾಗದ ಪಿಎಸ್‌ಐ ಶಿವರುದ್ರಮ್ಮ, ಪೋಲೀಸ್‌ ಸಿಬ್ಬಂದಿ, ಗ್ರಾಪಂ ಅಧ್ಯಕ್ಷೆ ಶೀÅದೇವಿ
ಕುಮಾರಸ್ವಾಮಿ, ಉಪಾಧ್ಯಕ್ಷೆ ಪ್ರತಿಭಾ ನವೀನ್‌, ಬಿಜೆಪಿ ಮಂಡಲದ ಅಧ್ಯಕ್ಷ ದಿನೇಶ್‌ ಮುಗುಳವಳ್ಳಿ, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂಪತ್‌, ಗ್ರಾಪಂ ಸದಸ್ಯರಾದ ಲಕ್ಷ್ಮಣ್‌, ಭರತ್‌, ಗೋಪಾಲ್‌, ಎಪಿಎಂಸಿ ಸದಸ್ಯ ಕವೀಶ್‌, ಹೋಬಳಿ ಅಧ್ಯಕ್ಷ ಸುದರ್ಶನ್‌, ಕಿಶನ್‌ ಮೈಲಿಮನೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮದ್‌ ಮುದಾಬೀರ್‌ ಇದ್ದರು.

ಪೋಲೀಸ್‌ ಸಿಬ್ಬಂದಿ ತಮ್ಮ ಕುಟುಂಬದವರ ಜೊತೆ ಸಡಗರದಿಂದ ಪಾಲ್ಗೊಂಡಿದ್ದರು. ಹಸು – ಕರುವಿಗೆ ಪೂಜೆ ಸಲ್ಲಿಸಿ ವಸತಿ ಗೃಹಗಳ ಗೃಹಪ್ರವೇಶ ನೆರವೇರಿಸಲಾಯಿತು. ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಭಟ್‌ ಪೂಜಾ ವಿಧಾನಗಳನ್ನು ನೆರವೇರಿಸಿಕೊಟ್ಟರು.

Advertisement

ಓದಿ: ಬಿಎಸ್‌ಎಫ್ ಯೋಧ ಮಂಜುನಾಥಗೆ ಅಂತಿಮ ನಮನ

Advertisement

Udayavani is now on Telegram. Click here to join our channel and stay updated with the latest news.

Next