Advertisement
ಜಿಲ್ಲೆಯ ಕಡೂರು ತಾಲೂಕು ಎಸ್. ಬಿದರೆ ಗ್ರಾಮದ ಚಂದ್ರಶೇಖರ್ ಕಳೆದ 21ವರ್ಷ ಗಳಿಂದ ಬಿಎಸ್‌ಎಫ್ ಯೋಧನಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದು ಗ್ರಾಮಕ್ಕೆ ಬಂದಿದ್ದಾರೆ. ಅವರನ್ನು ಗ್ರಾಮಸ್ಥರು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಹಾರ ಹಾನಿ ತಬ್ಬಿಕೊಂಡು ಸ್ವಾಗತಿಸಿದರು. ನಂತರ ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಮದಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಶಾಲಾ ಮಕ್ಕಳು, ಗ್ರಾಮಸ್ಥರು ಜೈಕಾರ, ಘೋಷಣೆ ಕೂಗಿ ಬರಮಾಡಿಕೊಂಡರು. ಯೋಧ ಚಂದ್ರಶೇಖರ್ ಮಾತನಾಡಿ, ಕಾಶ್ಮೀರದ ಹಿಮಪಾತದಲ್ಲಿ ಸಿಲುಕಿ ಮೂರು ದಿನ 1 ಲೀಟರ್ ನೀರು ಕುಡಿದು ಬದುಕಿ ಬಂದ ಘಟನೆ ಹಾಗೂ ಯೋಧರು ಎಷ್ಟು ಕಷ್ಟಪಡುತ್ತಾರೆಂಬ ತಮ್ಮ ಅನುಭವವನ್ನು ಹಂಚಿಕೊಂಡರು.
Related Articles
Advertisement
ಓದಿ: ಮುಸ್ಲಿಮರ ಹಿನ್ನಡೆಗೆ ಜನಪ್ರತಿನಿಧಿಗಳೇ ಕಾರಣ: ಉಸ್ತಾದ್