ಶೃಂಗೇರಿ: ಕೋವಿಡ್ ನಡುವೆಯೂ ಶಿಕ್ಷಕರು ತಮ್ಮ ಕರ್ತವ್ಯವನ್ನು ಪಾಲಿಸಿದ್ದು, ಈ ಸಾಲಿನ ಶೈಕ್ಷಣಿಕ ಪದ್ಧತಿ ಶಿಕ್ಷಣ ಕ್ಷೇತ್ರಕ್ಕೆ ಅಲ್ಪ ಹಿನ್ನಡೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಪಿ.ನಾಗರಾಜ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಏರ್ಪಡಿಸಿದ್ದ ಗುರುಸ್ಪಂದನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾಧಿದೇವತೆಯಾದ ಶಾರದೆಯ ನೆಲೆವೀಡಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾಗ್ಯ ನಮಗೆ ಒದಗಿದೆ. ಪ್ರತಿ ವರ್ಷವೂ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಯಲ್ಲಿ ತಾಲೂಕು ಉತ್ತಮ ಫಲಿತಾಂಶ ಪಡೆಯುತ್ತಿದೆ. ಈ ವರ್ಷವೂ ಉತ್ತಮ ಫಲಿತಾಂಶ ತರಲು ಶಿಕ್ಷಕರು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷೆ ಎಚ್.ಎಸ್. ಮೈತ್ರಿ ಮಾತನಾಡಿ, ಶಿಕ್ಷಕರು ಕೋವಿಡ್ ನಡುವೆಯೂ ವಿದ್ಯಾಗಮ ನಡೆಸುವುದರ ಮೂಲಕ ವಿದ್ಯಾರ್ಥಿಗಳ ನಿಕಟ ಸಂಪರ್ಕದಲ್ಲಿದ್ದರು. ಇನ್ನೂ ಪೂರ್ಣ ಪ್ರಮಾಣದ ಶಾಲೆಗಳು ಆರಂಭ ವಾಗದಿದ್ದರೂ, ಆರಂಭವಾ ಗಿರುವ ತರಗತಿಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಉತ್ತಮಗೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಕರ ಸಂಘದ ನೂತನ ಪದಾ ಧಿಕಾರಿಗಳ ಪದಗ್ರಹಣ ನಡೆಯಿತು. ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಪಿ.ನಾಗರಾಜ್ ಅವರನ್ನು ಗೌರವಿಸಲಾಯಿತು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾ ಧಿಕಾರಿ ಎನ್.ಜಿ. ರಾಘವೇಂದ್ರ ಮಾತನಾಡಿದರು.
ಉಪಾಧ್ಯಕ್ಷ ಎಚ್.ಕೆ.ದಿನೇಶ್, ಕಾರ್ಯದರ್ಶಿ ಓಂಕಾರಸ್ವಾಮಿ, ಕೊಟ್ಟೂರೇಶ್, ಕವಿತಾಕುಮಾರಿ, ರಾಜೇಶ್, ಶರತ್ ಶೆಟ್ಟಿ, ವಿದ್ಯಾಧರ, ಶ್ವೇತಾ, ಭಾಗ್ಯವತಿ ಇದ್ದರು.
ಓದಿ:
ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ಸ್ವಾಮಿ ಅಭ್ಯರ್ಥಿ