ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಎಂ.ಸಿ. ಶಿವಾನಂದ ಸ್ವಾಮಿ ಅವರು ಸಮರ್ಥ ಅಭ್ಯರ್ಥಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯರು, ಕನ್ನಡಪರ ಸಂಘಟನೆಗಳು, ಶಿಕ್ಷಕರ ಸಂಘಟನೆಗಳ ಪ್ರತಿನಿ ಧಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಂಡರು.
ಶನಿವಾರ ನಗರದ ಸ್ಕೌಟ್ ಭವನದಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಪದ್ಮಾ ತಿಮ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡರು. ಸಭೆಯಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಎಂ.ಸಿ. ಶಿವಾನಂದ ಸ್ವಾಮಿ ಅವರನ್ನು ಕಳೆದ 35 ವರ್ಷಗಳಿಂದ ಹತ್ತಿರದಿಂದ ಬಲ್ಲವನಾಗಿದ್ದೇನೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತನ್ನು ಶಿವಾನಂದಸ್ವಾಮಿ ಅವರು
ಗಟ್ಟಿಗೊಳಿಸುತ್ತಾರೆಂಬ ಬಲವಾದ ನಂಬಿಕೆ ಇದೆ ಎಂದು ಹೇಳಿದರು.
ಕನ್ನಡಪರ ಸಂಘಟನೆ ಮುಖಂಡರಾದ ರಾಜೇಗೌಡ, ನೂರುಲ್ಲಾಖಾನ್, ಎಲ್.ವಿ. ಕೃಷ್ಣಮೂರ್ತಿ, ಅನಿಲ್‌ಕುಮಾರ್, ರಘು ಬಿ.ಎಂ. ಕುಮಾರ್ ಮಾತನಾಡಿ, ಶಿವಾನಂದ ಸ್ವಾಮಿ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಮರ್ಥರಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಾಹಿತ್ಯ ಪರಿಷತ್ತನ್ನು ಬಲಿಷ್ಟಗೊಳಿಸಲಿದ್ದಾರೆ ಹಾಗೂ ನಾಡಿನ ನೆಲ, ಜಲ, ಭಾಷೆ ಪರಧ್ವನಿ ಎತ್ತುವ ನಂಬಿಕೆ ಇದೆ ಎಂದರು.
ಜಿಪಂ ಮಾಜಿ ಸದಸ್ಯ ಮುಗುಳುವಳ್ಳಿ ನಿರಂಜನ್ ಮಾತನಾಡಿ, ಶಿವಾನಂದಸ್ವಾಮಿ ಅವರು ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಇನಷ್ಟು ಬಲಿಷ್ಟವಾಗಿ ಬೆಳೆಸುವ ಸ್ಪಷ್ಟ ನಿಲುವು ಹೊಂದಿದ್ದಾರೆ ಎಂದು ತಿಳಿಸಿದರು. ರವೀಶ್ ಕ್ಯಾತನಬೀಡು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದು, ಅದೇ ಮಾದರಿಯಲ್ಲಿ ಶಿವಾನಂದಸ್ವಾಮಿ ಅವರು ಕಾರ್ಯನಿರ್ವಹಿಸುವ ನಂಬಿಕೆ ಇದೆ ಎಂದರು.
ರಾಜ್ಯ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್.ರಾಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ನಿಯೋಜಿತ ಅಭ್ಯರ್ಥಿ ಎಂ.ಸಿ. ಶಿವಾನಂದಸ್ವಾಮಿ ಮಾತ ನಾಡಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ಬಿ.ಅಮ್ಜದ್, ಆಡಿಟರ್ ರಂಗನಾಥನ್, ಬಿ.ಪಿ. ಜಗದೀಶ್, ವಕೀಲೆ ಮಮತಾ, ಭಾರತಿ ಶಿವರುದ್ರಪ್ಪ, ವೇಲಾಯುಧನ್, ಹಿರೇಮಗಳೂರು ನಾರಾಯಣ, ಎಂ.ಎಂ.ಡಿ ಹಳ್ಳಿ ವೇದಮೂರ್ತಿ, ಮಾನುಮಿರಾಂಡ ಬಸವರಾಜ್, ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ನಂಜೇಗೌಡ, ಪ್ರಗತಿಪರ ಕೃಷಿಕ ಚಂದ್ರಶೇಖರ್, ವಿಜಯ್ ಕುಮಾರ್ ಮತ್ತಿತರರು ಇದ್ದರು.
ಓದಿ:
51 ಸಾವಿರ ಗಡಿ ತಲುಪಿ ದಾಖಲೆ ಬರೆದ ಷೇರುಪೇಟೆ: ಸೆನ್ಸೆಕ್ಸ್ 617 ಅಂಕ ಜಿಗಿತ, ನಿಫ್ಟಿ 15,000