ಚಿಕ್ಕಮಗಳೂರು: ಕೈಗಾರಿಕೆ ಮತ್ತು ವ್ಯಾಪಾರೋದ್ಯಮ ದೇಶದ ಆರ್ಥಿಕತೆಯ ಬೆನ್ನೆಲುಬು. ಶೇ.70ರಷ್ಟು ಆದಾಯ ತೆರಿಗೆ ಈ ಕ್ಷೇತ್ರದಿಂದ ಸಂದಾಯವಾಗುತ್ತಿದೆ.
ಕೈಗಾರಿಕೋದ್ಯಮ ಹಾಗೂ ವ್ಯಾಪಾರೋದ್ಯಮ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಎಫ್‌ಕೆಸಿಸಿಐ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನಿಕಟಪೂರ್ವ ಅಧ್ಯಕ್ಷ ಎಸ್. ಸುಧಾಕರ ಶೆಟ್ಟಿ ಹೇಳಿದರು.
ಶುಕ್ರವಾರ ನಗರದ ರಾಯಲ್ ಬ್ಯಾಂಕ್ವಿಟ್ ಸಭಾಂಗಣದಲ್ಲಿ ಜಿಲ್ಲೆಯ ಕೈಗಾರಿಕಾ ಮತ್ತು ವ್ಯಾಪಾರೋದ್ಯಮಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. 1916ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ನಾಡಿನ ಹಿತದೃಷ್ಟಿಯಿಂದ ಎಫ್‌ಕೆಸಿಸಿಐ ಪ್ರಾರಂಭಿಸಿದರು. ಪ್ರಥಮ ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರಾಗಿ ಮೈಸೂರು ಮಹಾರಾಜರು ಕಾರ್ಯ ನಿರ್ವಹಿಸಿದ ಇತಿಹಾಸವಿದೆ. ರಾಜ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಂಸ್ಥೆಯಾಗಿ ಸದೃಢವಾಗಿ ಇಂದು ಬೆಳೆದಿದೆ ಎಂದರು. ಎಫ್‌ಕೆಸಿಸಿಐ ಜಿಲ್ಲಾ ಸಮನ್ವಯ ಸಮಿತಿಗಳ ಚೇರ್ಮನ್ ಶಿವಮೊಗ್ಗದ ಡಿ.ಎಂ. ಶಂಕರಪ್ಪ ಮಾತನಾಡಿ, ಕೈಗಾರಿಕೆ ಮತ್ತು ವ್ಯಾಪಾರ ಸೇವೆಗಳ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ಉದ್ಯಮ ಹಾಗೂ ಸರ್ಕಾರದೊಂದಿಗೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ತರಹದ ಉದ್ಯಮಗಳ ಒಕ್ಕೂಟ ಇದಾಗಿದೆ ಎಂದು ತಿಳಿಸಿದರು. ಮಂಡ್ಯ ಜಿಲ್ಲಾಧ್ಯಕ್ಷ ಕೆ. ಪ್ರಭಾಕರ್, ಎಫ್‌ಕೆಸಿಸಿಐ ಸದಸ್ಯತ್ವ ಸಮಿತಿ ಅಧ್ಯಕ್ಷ ಬಿ. ಚಿದಂಬರ ರಾವ್, ನಿರ್ದೇಶಕ ಹಾಸನದ ಅರುಣ್, ಜಿಲ್ಲೆಯ ವ್ಯಾಪಾರೋದ್ಯಮಿ ಶಾಂತರಾಮ್ ಹೆಗ್ಡೆ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಎಂ. ಮಹೇಶ್, ಕಾರ್ಯದರ್ಶಿ ವಿಜಯೇಂದ್ರ ಹಾಗೂ ಭೀಮಾಚಾರ್‌ರನ್ನು ಖಜಾಂಚಿಯಾಗಿ ಹಾಗೂ ಹಂಗಾಮಿ ಪದಾ ಧಿಕಾರಿಗಳನ್ನು ಘೋಷಿಸಲಾಯಿತು.
ಓದಿ :
ಉತ್ತರಾಖಂಡದಲ್ಲಿ ಹಿಮಸ್ಪೋಟ: 10 ಮೃತದೇಹ ಪತ್ತೆ, 150 ಮಂದಿ ಕಣ್ಮರೆ, 16 ಜನರ ರಕ್ಷಣೆ