ಕೊಟ್ಟಿಗೆಹಾರ: ವೈಚಾರಿಕತೆಗೆ ಹೆಚ್ಚಿನ·ಆದ್ಯತೆ ನೀಡಿದರೆ ಸದೃಢ ಸಮಾಜ ಕಟ್ಟಲುಸಾಧ್ಯವಾಗುತ್ತದೆ ಎಂದು ಉಪ ವಿಭಾಗಾ ಧಿಕಾರಿ ಡಾ| ಎಚ್.ಎಲ್. ನಾಗರಾಜ್‌ಹೇಳಿದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಮತ್ತು ಮನುಜಮತ ಸಿನಿಯಾನ ವತಿಯಿಂದನಡೆದ ಭೂಮಿ ಬೆಳೆ ಬದುಕು ಕುರಿತಸಿನಿಮಾ ಹಬ್ಬ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.
ಜಾಗತಿಕ ಸಿನಿಮಾಗಳನ್ನುನೋಡುವುದರಿಂದ ಸಾವಿರಾರು ಪುಸ್ತಕಗಳನ್ನುಓದಿದಾಗ ಸಿಗುವಂತಹ ಅನುಭವವಾಗುತ್ತದೆ.ನೋಡುಗರಲ್ಲಿ ಬೌ ದ್ಧಿಕ ಆಲೋಚನಾಶಕ್ತಿಯನ್ನು ಸಮಾಜಪರವಾಗಿ ಚಿಂತಿಸುವುದನ್ನುಸಿನಿಮಾಗಳು ಕಲಿಸುತ್ತವೆ ಎಂದರು.
ಮನುಜಮತ ಸಿನಿಯಾನ ತಂಡದ ಐವನ್‌ಡಿಸಿಲ್ವ ಮಾತನಾಡಿ, ಜಾಗತಿಕ ಸಿನಿಮಾಗಳುಆ ನೆಲದ ತವಕ ತಲ್ಲಣಗಳನ್ನು ಕಲಾತ್ಮಕವಾಗಿಕಟ್ಟಿಕೊಡುತ್ತವೆ. ಪ್ರೇಕ್ಷಕನೊಳಗೆ ಹಲವಾರುಪ್ರಶ್ನೆಗಳನ್ನು ಮೂಡಿಸಿ ವೈಚಾರಿಕತೆಯನ್ನುಬೆಳೆಸುತ್ತವೆ ಎಂದರು.
ಮನುಜಮತ ಸಿನಿಯಾನ ತಂಡದರೋಹಿತ್ ಅಗಸರಹಳ್ಳಿ ಮಾತನಾಡಿ,ಮನುಜಮತ ಸಿನಿಯಾನ ತಂಡಸಿನಿಮಾ ಕಲೆಯ ಮೂಲಕ ಲೋಕದಗತಿ ಸ್ಥಿತಿ ಅರಿವಿನತ್ತ ಸಾಗಲು ಇಂತಹಕಾರ್ಯಕ್ರಮಗಳನ್ನು ಆಯೋಜಿಸಿಕೊಂಡುಬರುತ್ತದೆ. ಪ್ರಸ್ತುತ ಸಮಸ್ಯೆಗಳತ್ತ ಬೆಳಕುಚೆಲ್ಲುವ ಜಾಗತಿಕ ಸಿನಿಮಾಗಳನ್ನು ಸಮಾನಮನಸ್ಕರೆಲ್ಲಾ ವೀಕ್ಷಿಸಿ ಚರ್ಚಿಸುವ ಮೂಲಕಹೊಸ ಹೊಳಹುಗಳನ್ನು ಅರಿಯುವುದು ಈಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ತೇಜಸ್ವಿ ಪ್ರತಿಷ್ಠಾನದ ಬಾಪು ದಿನೇಶ್,ಮನುಜಮತ ಸಿನಿಯಾನ ತಂಡದನಿತ್ಯಾನಂದ, ಫಣಿರಾಜ್, ಚಂದ್ರೆಗೌಡ,ಸತೀಶ್, ಭಾರತಿದೇವಿ, ಅಕ್ಷತಾ ಹುಂಚದಕಟ್ಟೆ,ಪೂರ್ಣೇಶ್ ಮತ್ತಾವರ, ರೇಖಾ ಪೂರ್ಣೇಶ್,ತೇಜಸ್ವಿ ಪ್ರತಿಷ್ಠಾನದ ಸಂಯೋಜಕರಾಆಕರ್ಷ್, ಸಿಬ್ಬಂದಿ ಸತೀಶ್ ಇದ್ದರು.
ಓದಿ :
ಶರತ್ ಕೃಷ್ಣಮೂರ್ತಿ ಭಾರತ್ ಸ್ಕೌಟ್ಸ್-ಗೈಡ್ಸ್ ಅಧ್ಯಕ್ಷ