ಚಿಕ್ಕಮಗಳೂರು: ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್ ಅವರು ಕುರುಹಿನಶೆಟ್ಟಿ ಸಮುದಾಯದ ಏಳಿಗೆಗೆ ಶ್ರಮಿಸುವಂತೆ ಜಿಲ್ಲಾ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ರಾಜೇಂದ್ರ ಹೇಳಿದರು.
ಶನಿವಾರ ನಗರದ ತಾಪಂನಲ್ಲಿ ಕುರುಹಿನ ಶೆಟ್ಟಿ ಮಹಿಳಾ ಸಂಘದಿಂದ ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್ ಅವರನ್ನು ಅಭಿನಂದಿಸಿ ಅವರು
ಮಾತನಾಡಿದರು. ಶಾಸಕ ಸಿ.ಟಿ. ರವಿ ಅವರು ಸಮುದಾಯವನ್ನು ಗುರುತಿಸಿ ತಾಪಂ ಅಧ್ಯಕ್ಷಸ್ಥಾನ ದೊರೆಯುವಂತೆ ಮಾಡಿದ್ದಾರೆ. ಈ ನಿಟ್ಟಿನಲ್ಲ ಅಧ್ಯಕ್ಷರು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಗಳನ್ನು ದೊರೆಯುವಂತೆ ಮಾಡಬೇಕು ಎಂದರು.
ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಸ್ಥಾನಮಾನಗಳು ಲಭಿಸುತ್ತಿವೆ. ಎಲ್ಲರ ಸಹಕಾರದಿಂದ ಕುರುಹಿನಶೆಟ್ಟಿ ಸಮುದಾಯದ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು.
ಕುರುಹಿನ ಶೆಟ್ಟಿ ಮಹಿಳಾ ಸಂಘದ ನಿರ್ದೇಶಕರಾದ ತನುಜಾ ಶಿವಶಂಕರ್, ಚಂದ್ರಾವತಿ ಶಂಕರ್, ಪದ್ಮಾ ಮಹೇಶ್, ಕವಿತಾ ಹಾಲಪ್ಪ, ಕಲಾ ದಾನಪ್ಪ, ಪ್ರತಿಮಾ ಗಿರೀಶ್, ವಿನುತಾ ಪ್ರಭಾಕರ್, ಚಂದ್ರಿಕಾ ತಿಮ್ಮಶೆಟ್ಟಿ, ಪ್ರತಿಮಾ ವೆಂಕಟೇಶ್, ಸೀಮಾ ವಿಶ್ವನಾಥ್ ಇದ್ದರು.
ಓದಿ :
ಶರತ್ ಕೃಷ್ಣಮೂರ್ತಿ ಭಾರತ್ ಸ್ಕೌಟ್ಸ್-ಗೈಡ್ಸ್ ಅಧ್ಯಕ್ಷ