ಕಡೂರು: ಸೇವಾ ಮನೋಭಾವನೆ ಮತ್ತು ನಿಸ್ವಾರ್ಥ ಗುಣ ಬೆಳೆಸಿಕೊಳ್ಳಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಬೇಕು ಎಂದು ಜಿಪಂ
ಸದಸ್ಯ ಶರತ್ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕಚೇರಿ ಸಭಾಂಗಣದಲ್ಲಿ ಶನಿವಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಅ ಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಪಡೆಯುವ ದಿನಗಳಲ್ಲಿ ಸ್ಕೌಟ್ಸ್ ಮತ್ತು ಬುಲ್‌ಬುಲ್ ಸಂಸ್ಥೆ ಸೇರುವ ಮೂಲಕ ಶಿಸ್ತಿನ ಜೀವನವನ್ನು ಅಭ್ಯಾಸ ಮಾಡಿಕೊಂಡಿದ್ದೆ. ಅದಕ್ಕೆ ಸೇರಲು ತಮ್ಮ ತಾಯಿ ಸುಜಾತ ಕೃಷ್ಣಮೂರ್ತಿ ಅವರೇ ಪ್ರೇರಣೆ. ಆ ದಿನಗಳಲ್ಲಿ ಸಮವಸ್ತ್ರ ಧರಿಸಿ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವುದೇ ಒಂದು ಹುರುಪಾಗಿತ್ತು ಎಂದು ಸ್ಮರಿಸಿಕೊಂಡರು. ತಮ್ಮ ತಾಯಿ ಅಧ್ಯಕ್ಷರಾಗಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ತಾಲೂಕು ಘಟಕಕ್ಕೆ ತಾವು ಅಧ್ಯಕ್ಷರಾಗುತ್ತಿರುವುದು ಸಂತಸ ತಂದಿದೆ. ತಾಯಿ ಅವರಿಂದಲೇ ಅಧಿ ಕಾರ ಹಸ್ತಾಂತರವಾಗುತ್ತಿರುವುದು ಚಿರಕಾಲ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಎನ್. ಷಡಕ್ಷರಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಪದಾಧಿ ಕಾರಿಗಳು ವಾರಿಯರ್ ನಂತೆ ಕೆಲಸ ಮಾಡಿದ್ದಾರೆ. ಅನೇಕ ಸೇವಾ ಮನೋಭಾವನೆ ಹೊಂದಿರುವ ಸಂಘ- ಸಂಸ್ಥೆಗಳೊಂದಿಗೆ ಕೈ ಜೋಡಿಸಿ ದುಡಿದಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು.
ಚಿಕ್ಕಮಗಳೂರು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತ ಎ.ಎನ್. ಮಹೇಶ್ ಮಾತನಾಡಿ, ರಾಜಕೀಯದಲ್ಲಿರುವವರು ಸಾರ್ವಜನಿಕರ ಸೇವೆಯನ್ನು ಅಧಿಕಾರತ್ವದಲ್ಲಿ ಬಯಸುತ್ತಾರೆಯೇ ಹೊರತು ಸಮಾಜ ಸೇವೆ ಮಾಡುವ ಸಂಸ್ಥೆಗಳಿಗೆ ಬರುವುದು ಬಹಳ ವಿರಳ. ಶರತ್ ಅವರು ಈ ಸಂಸ್ಥೆಗೆ ಬಂದು ಅಧ್ಯಕ್ಷರಾಗಿರುವುದು ನಮಗೆ ಸಂತಸ ತಂದಿದೆ ಎಂದರು.
ನಿವೃತ್ತ ಡಿಡಿಪಿಐ ನಿಂಗಪ್ಪ ಸೇವೆ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಗ ಶರತ್‌ಗೆ ಅಧಿಕಾರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಕಡೂರು ಕ್ಷೇತ್ರ ಶಿಕ್ಷಣಾಧಿ ಕಾರಿ ಜಿ. ರಂಗನಾಥಸ್ವಾಮಿ, ಸಮನ್ವಯಾ ಧಿಕಾರಿ ಪ್ರೇಮಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಕಲ್ಲೇಶಪ್ಪ, ಶಿಕ್ಷಕರಾದ ಎಂ.ಡಿ. ಮಂಜುನಾಥ್, ಭೈರೇಗೌಡ, ಎಂ.ಎಚ್. ಪ್ರಕಾಶ್‌ಮೂರ್ತಿ, ತಿಮ್ಮಪ್ಪ, ಕಿರಣ್‌ಕುಮಾರ್ ಮತ್ತಿತರರು ಇದ್ದರು.
ಶಿಕ್ಷಕರ ಸಂಘ,ಸ್ಕೌಟ್ಸ್ ಮತ್ತು ಗೈಡ್ಸ್‌ನ ತಾಲೂಕು ಸಂಘವು ಶರತ್ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿತು.
ಓದಿ :
ಜನಪದಕ್ಕೆ ಸ್ಕೂಲಿಂಗ್ ಆಗಬೇಕು, ಇದು ಶಾಸ್ತ್ರವಾಗದ ಹೊರತು ಶಾಶ್ವತವಾಗದು: ಹಂಸಲೇಖ