ಚಿಕ್ಕಮಗಳೂರು: ರೈತವಿರೋಧಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಿಸಾನ್ ಸೆಲ್ ಕಾರ್ಯಕರ್ತರು ಪತ್ರದಲ್ಲಿ ರಕ್ತದಿಂದ ಸಹಿ ಮಾಡಿ ಪತ್ರ ಚಳುವಳಿ ನಡೆಸಿದರು.
ಶನಿವಾರ ನಗರದ ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಕೃಷಿ ಕಾಯ್ದೆಗಳನ್ನು ಕೈಬಿಡಿ. ರೈತರ ಮೇಲಿನ ದಬ್ಟಾಳಿಕೆ ನಿಲ್ಲಿಸಿ ಎಂದು ಪತ್ರದಲ್ಲಿ ಬರೆದು ರಕ್ತದಲ್ಲಿ ಸಹಿ ಮಾಡಿ ಪ್ರಧಾನಮಂತ್ರಿಗೆ ಅಂಚೆ ಮೂಲಕ ಪತ್ರ ರವಾನೆ ಮಾಡಿದರು.
ಕಾಂಗ್ರೆಸ್ ಕಿಸಾನ್‌ಸೆಲ್ ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಂ. ವಿಜಯ್‌ಕುಮಾರ್ ಮಾತನಾಡಿ, ರೈತರಿಗೆ ಬೇಡವಾದ ನೂತನ ಕೃಷಿಕಾಯ್ದೆ ಕೇಂದ್ರ ಸರ್ಕಾರಕ್ಕೆ ಏಕೆ ಬೇಕು. ಕೇಂದ್ರ ಸರ್ಕಾರ ಈ ಹಠಮಾರಿತನ ಕೈಬಿಡಬೇಕು. ಅನೇಕ ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕಾಯ್ದೆಯನ್ನು ಹಿಂಪಡೆಯದೆ ರೈತರ ಮೇಲೆ ಸರ್ಕಾರ ದೌರ್ಜನ್ಯ ನಡೆಸುತ್ತಿದೆ. ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ನೂತನ ಕೃಷಿಕಾಯ್ದೆಗಳನ್ನು ಸರ್ಕಾರ ತಕ್ಷಣ ಹಿಂಪಡೆದು ದೇಶಕ್ಕೆ ಅನ್ನ ನೀಡುವ ರೈತಸಮುದಾಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಆಲ್ದೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ. ಈರೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಫಿ ಅಹಮದ್, ಪ್ರದೀಪ್, ಗುರುದೇವ್, ಹಾರೂನ್, ನರೇಂದ್ರ ಇದ್ದರು.
ಓದಿ :
ಭಾಷೆ ಸಂಸ್ಕೃತಿಯ ವಾಹಕ: ಡಾ| ಮಹಾದೇವ