ಚಿಕ್ಕಮಗಳೂರು: ನಿಗದಿತ ಸಮಯಕ್ಕೆ ಬರಬೇಕಾಗಿದ್ದ ಬಸ್ಸೊಂದು ಸುಮಾರು ಮೂರುವರೆ ತಾಸು ವಿಳಂಭವಾಗಿ ಬಂದ ಹಿನ್ನೆಲೆಯಲ್ಲಿ ಬಸ್ಸಿಗಾಗಿ ಕಾದು ಕುಳಿತ ಮಹಿಳೆಯರು ಬಸ್ಸು ಬರುತ್ತಿದ್ದಂತೆ ರಸ್ತೆ ಮಧ್ಯದಲ್ಲಿಯೇ ಬಸ್ಸನ್ನು ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕನಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬೇಲೂರಿನಿಂದ ಮೂಡಿಗೆರೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರು ಊರಿಗೆ ವಾಪಸ್ಸು ತೆರಳಲು ಸಂಜೆ ೫ ಗಂಟೆಗೆ ಬಸ್ಸಿಗಾಗಿ ಕಾದು ಕುಳಿತ್ತಿದ್ದಾರೆ ಆದರೆ ಬಸ್ಸು ಬರಲೇ ಇಲ್ಲ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸವಲತ್ತನ್ನು ನೀಡಿದ ಸರಕಾರ ಅದಕ್ಕಾಗಿ ಮಹಿಳೆಯರು ಕಾದು ಕುಳಿತ್ತಿದ್ದಾರೆ ಆದರೆ ೫ ಗಂಟೆಯಿಂದ ಕಾದು ಕುಳಿತ ಮಹಿಳೆಯರಿಗೆ ಬಸ್ಸು ಬಂದದ್ದು ಮಾತ್ರ ೮. ೩೦ ಕ್ಕೆ ಈ ವೇಳೆ ಕುಪಿತಗೊಂಡ ಮಹಿಳೆಯರು ಬಸ್ಸು ಬರುತ್ತಿದ್ದಂತೆ ರಸ್ತೆ ಮಧ್ಯಕ್ಕೆ ತೆರಳಿ ಬಸ್ಸನ್ನು ರಸ್ತೆ ಮಧ್ಯದಲ್ಲೇ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ ತಾವು ಹೋಗಬೇಕಾದ ಊರಿನ ಬಸ್ಸು ಸಿಗದೇ ಸಕಲೇಶಪುರ ಬಸ್ಸಿನಲ್ಲಿ ಜನ್ನಾಪುರಕ್ಕೆ ಹೋಗಿ ಅಲ್ಲಿಂದ ಮಹಿಳೆಯರು ಮನೆಗೆ ತೆರಳಿದ್ದಾರೆ.
ಬಸ್ ಇಲ್ಲದೆ ಪರದಾಡ್ತರೋ ನಿತ್ಯ ಓಡಾಡುವ ಕಾರ್ಮಿಕ ಮಹಿಳೆಯರು ಶಕ್ತಿ ಯೋಜನೆಯ ಫ್ರೀ ಬಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ADGP ಹೆದ್ದಾರಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಚಾಕು ತೋರಿಸಿ ಚಿನ್ನದ ಸರ ದರೋಡೆ…