Advertisement

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅಪರೂಪದ ಪುತ್ಥಳಿ ಸಿದ್ಧ

06:56 PM Jul 26, 2021 | Team Udayavani |

ಚಿಕ್ಕಮಗಳೂರು: ಮೈಸೂರು ಕೇಂದ್ರ ಗ್ರಂಥಾಲಯದ ಹೊಸ ಕಟ್ಟಡದಲ್ಲಿ ಪ್ರತಿಷ್ಠಾಪಿಸಲಾಗುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪುತ್ಥಳಿ ಚಿಕ್ಕಮಗಳೂರು ನಗರದಲ್ಲಿ ಸಿದ್ಧಗೊಳ್ಳುತ್ತಿದೆ. ನಗರದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿರುವ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಶಿಲ್ಪಿ ವಿಶ್ವಕರ್ಮ ಆಚಾರ್ಯ, ವಿದ್ಯಾರ್ಥಿಗಳಾದ ಲೋಹಿತ್‌ಕುಮಾರ್‌, ಶಿವದೀಪ ಪಟೇಲ್‌, ನಿಶ್ಚಿತಗೌಡ, ಸಿಂಚನ ಸಹಕಾರದಲ್ಲಿ 15 ದಿನದಲ್ಲಿ ಎರಡೂವರೆ ಅಡಿ ಎತ್ತರದ ಪುತ್ಥಳಿ ನಿರ್ಮಿಸಿದ್ದಾರೆ.

Advertisement

ಒಡೆಯರ್‌ ದರ್ಬಾರ್‌ ಉಡುಪಿನಲ್ಲಿರುವ ಪುತ್ಥಳಿ ಮೈಸೂರಿನ ಕೆ.ಆರ್‌. ವೃತ್ತದಲ್ಲಿರುವುದನ್ನು ಹೊರತುಪಡಿಸಿದರೆ ಈಗ ಸಿದ್ಧವಾಗುತ್ತಿರುವುದು 2ನೇ ಪುತ್ಥಳಿ. ಮೈಸೂರು ಅರಮನೆ ಸೇರಿದಂತೆ ಹಲವು ಕಡೆಗಳಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾವಚಿತ್ರವನ್ನು ತರಿಸಿಕೊಳ್ಳಲಾಗಿತ್ತು. ಅಂತಿಮವಾಗಿ ದರ್ಬಾರ್‌ ಉಡುಪಿನಲ್ಲಿರುವ ಭಾವಚಿತ್ರವನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಪುತ್ಥಳಿ ಮಣ್ಣಿನಲ್ಲಿ ಸಿದ್ಧಗೊಂಡಿದ್ದು ಫೈಬರ್‌ ಮತ್ತು ಕಂಚಿನಲ್ಲಿ ನಿರ್ಮಿಸಲು ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಪುತ್ಥಳಿಗೆ ಅಂತಿಮ ಸ್ಪರ್ಶ ನೀಡಬೇಕಿದೆ. ಗ್ರಂಥಾಲಯ ಪಿತಾಮಹ ರಂಗನಾಥನ್‌ ಅವರ ಪುತ್ಥಳಿ ನಿರ್ಮಾಣಗೊಳ್ಳಬೇಕಿದ್ದು, ಇದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ರಂಗನಾಥನ್‌ ಅವರ ಪುತ್ಥಳಿ ಮೈಸೂರು ಕೇಂದ್ರ ಗ್ರಂಥಾಲಯದಲ್ಲಿ ಅನಾವರಣಗೊಳ್ಳಲಿದೆ ಎಂದು ವಿಶ್ವಕರ್ಮ ಆಚಾರ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next