ಕಾಂಗ್ರೆಸ್ ರಾಜ್ಯ ಮಹಿಳಾ ಮೋರ್ಚಾಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.ಗೋಚವಳ್ಳಿಯಲ್ಲಿ ಅಪ್ರಾಪ್ತ ಬಾಲಕಿಮೇಲೆ ನಡೆದ ಅತ್ಯಾಚಾರ ಪ್ರಕರಣಖಂಡಿಸಿ ಪಟ್ಟಣದ ಪೊಲೀಸ್ ಠಾಣೆಎದುರು ಶುಕ್ರವಾರ ಕಾಂಗ್ರೆಸ್‌ನಿಂದಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿಅವರು ಮಾತನಾಡಿದರು.
ದೇಶದ ಹೆಣ್ಣು ಮಕ್ಕಳು ಸುಸಂಸ್ಕೃತರು.ಅನಾದಿ ಕಾಲದಿಂದಲೂ ಮಹಿಳೆಗೆಉನ್ನತ ಸ್ಥಾನವಿದೆ. ಈಗ ರಾತ್ರಿಯಲ್ಲಹಗಲು ವೇಳೆಯಲ್ಲೂ ಸಂಚರಿಸುವುದುಕಷ್ಟವಾಗಿದೆ. ಇಡೀ ಪ್ರಪಂಚವೇಭಾರತವನ್ನು ರೇಪ್ ಕ್ಯಾಪಿಟಲ್ ಎಂದಿದೆ.ಇದು ದೇಶಕ್ಕೆ ದೊಡ್ಡ ಅವಮಾನವಾಗಿದೆ.ಮಹಿಳೆಗೆ ರಕ್ಷಣೆ ಇಲ್ಲವಾಗಿದೆ ಎಂದರು.ಜಿಪಂ ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪ ಗೌಡ ಮಾತನಾಡಿ,ಗೋಚವಳ್ಳಿ ಪ್ರಕರಣದಲ್ಲಿ ಆರೋಪಿಗಳನ್ನುಬಂಧಿ ಸುವಲ್ಲಿ ಪೊಲೀಸ್ ಇಲಾಖೆಹಿಂದೇಟು ಹಾಕುತ್ತಿದೆ. ರಾಜಕೀಯ ಒತ್ತಡಪ್ರಕರಣದಲ್ಲಿ ಸೇರಿಕೊಂಡಿರುವುದುಮೇಲ್ನೋಟಕ್ಕೆ ಗೊತ್ತಾಗುತ್ತದೆ.ಅಮಾಯಕಅಪ್ರಾಪ್ತ ಬಾಲಕಿಗೆ ನ್ಯಾಯ ದೊರಕಬೇಕುಮತ್ತು ಅಪರಾ ಧಿಗಳಿಗೆ ಕಠಿಣಶಿಕ್ಷೆಯಾಗಬೇಕು ಎಂದುಆಗ್ರಹಿಸಿದರು.ಕಾಂಗ್ರೆಸ್ ಮುಖಂಡ ಸಂದೀಪ್‌ಮಾತನಾಡಿ, ಈ ಘಟನೆ ತಲೆತಗ್ಗಿಸುವಘಟನೆಯಾಗಿದ್ದು,ಇಂಥಹ ಪ್ರಕರಣವನ್ನುರಾಜಕೀಯವಾಗಿ ನೋಡುತ್ತಿರುವುದುವಿಷಾದನೀಯ. ಘಟನೆ ನಡೆದು ಸಾಕಷ್ಟುದಿನವಾಗಿದ್ದರೂ, ಸಂಸದರಾಗಲಿ, ಮಾಜಿಸಚಿವರು ಇತ್ತ ಕಡೆ ಮುಖ ಹಾಕದಿರುವುದುಖಂಡನೀಯ. ಪ್ರಕರಣದ ತನಿಖೆಯನ್ನು
ಸಿಒಡಿಗೆ ಒಪ್ಪಿಸಿ ನೊಂದ ಬಾಲಕಿಗೆ ನ್ಯಾಯದೊರಕಿಸಬೇಕು ಎಂದರು.ಸಭೆಯಲ್ಲಿ ಜಿಲ್ಲಾಧ್ಯಕ್ಷ ಡಾ|ಅಂಶುಮಂತ್, ಎಚ್.ಎಂ.ಸತೀಶ್,ಎಂ.ಎಚ್. ನಟರಾಜ್, ಸುಧಿಧೀರ್‌ಕುಮಾರ್ ಮುರೊಳ್ಳಿ, ವನಮಾಲ,ಸಂಧ್ಯಾ, ರೂಪಾ ಪೈ, ಲತಾ ಗುರುದತ್ತ,ಆಶಾ, ಶಕೀಲಾ ಗುಂಡಪ್ಪ, ಸೌಮ್ಯವಿಜಯಕುಮಾರ್ ಮತ್ತಿತರರುಇದ್ದರು.
Advertisement
ಪ್ರತಿಭಟನಾ ಮೆರವಣಿಗೆ ಸಂತೆಮಾರುಕಟ್ಟೆ ಸಮೀಪದಿಂದ ಆರಂಭವಾಗಿಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿಪೊಲೀಸ್ ಠಾಣೆ ಎದುರು ರಸ್ತೆ ತಡೆನಡೆಸಿಪ್ರತಿಭಟನಾ ಸಭೆ ನಡೆಸಿದರು.ಪ್ರತಿಭಟನಾಮೆರವಣಿಗೆಯಲ್ಲಿ ಬಿಜೆಪಿ ವಿರುದ್ಧಘೋಷಣೆ ಕೂಗಲಾಯಿತು.