ಕಡೂರು: ಕಡೂರು ತಾಲೂಕು ಕಡೂರು- ಬೀರೂರು ಶೈಕ್ಷಣಿಕ ವಲಯಗಳನ್ನು ಹೊಂದಿದ್ದು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿಶೇಷ ಕೋವಿಡ್ ನಿಯಮಗಳನ್ನು ಅಳವಡಿಸಿಕೊಂಡಿದ್ದು ಕೊರೊನಾ ಸೋಂಕಿರುವ ಇಬ್ಬರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕಡೂರು ಬಿಇಒ ಜಿ. ರಂಗನಾಥಸ್ವಾಮಿ ಹಾಗೂ ಬೀರೂರು ಬಿಇಒ ಎಸ್.ರಾಜಕುಮಾರ್ ಹೇಳಿಕೆ ನೀಡಿದ್ದಾರೆ.
ಸೋಮವಾರ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆದರೆ ಜು. 22 ರಂದು ಭಾಷಾ ವಿಷಯಗಳಾದ ಕನ್ನಡ ,ಇಂಗ್ಲಿಷ್ ಮತ್ತು ಹಿಂದಿ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಕಡೂರು ಶೈಕ್ಷಣಿಕ ವಲಯವು 16 ಪರೀûಾ ಕೇಂದ್ರಗಳನ್ನು ಹೊಂದಿದ್ದು ಒಟ್ಟು 227 ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಗೆ 12 ಜನ ವಿದ್ಯಾರ್ಥಿಗಳು ಅವರನ್ನು 6 ಅಡಿ ಅಂತರದಲ್ಲಿ ಕೂರಿಸಲಾಗುವುದು. ಈ ಬಾರಿ ಹೊಸ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 2,489 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇವರಲ್ಲಿ ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಮಕ್ಕಳು ಸೇರಿದ್ದಾರೆ. ಈ ಬಾರಿ ಕೊರೊನಾ ಅಲೆಯಿಂದ 6 ಪರೀûಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ತೆರೆಯಲಾಗಿದೆ ಮಕ್ಕಳಿಗೆ ಯಾವುದೇ ಭಯ, ಆತಂಕ, ಅಡ್ಡಿ ಇಲ್ಲದೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಡೂರು ಬಿಇಒ ಜಿ.ರಂಗನಾಥಸ್ವಾಮಿ ತಿಳಿಸಿದರು.
ಬೀರೂರು ಶೈಕ್ಷಣಿಕ ವಲಯ: ಬೀರೂರು ಶೈಕ್ಷಣಿಕ ವಲಯದಲ್ಲಿ ಒಟ್ಟು 10 ಕೇಂದ್ರಗಳನ್ನು ತೆರೆದಿದ್ದು ಹೊಸ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ 1,408 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 10 ಕೇಂದ್ರಗಳಿಂದ 132 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಕೊಠಡಿಗೂ ಸ್ಯಾನಿಟೈಸ್ ಮಾಡಲಾಗಿದ್ದು, ಮಕ್ಕಳಿಗೆ ಕುಡಿಯಲು ಶುದ್ಧ ನೀರು,ಅವಶ್ಯಕತೆ ಇದ್ದವರಿಗೆ ಎನ್- 95 ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಮಸ್ಯೆಗಳಿಲ್ಲದೆ ಇಲಾಖೆಯ ಸಿಬ್ಬಂದಿ ಶಿಕ್ಷಕರ ಸಹಕಾರದೊಂದಿಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಬೀರೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಾಜಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದರು.
ಕೋವಿಡ್ ವಿಶೇಷ ಪರೀûಾ ಕೇಂದ್ರ: ಕಡೂರು ಶೈಕ್ಷಣಿಕ ವಲಯದ ಗಿರಿತಿಮ್ಲಾಪುರ ಗ್ರಾಮದ ವಿದ್ಯಾರ್ಥಿ ಮೃತ್ಯುಂಜಯ ಪ್ರೌಢಶಾಲೆ ವಡೇರಹಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಕಡೂರು ಪಟ್ಟಣದ ಹೈವೇ ರಸ್ತೆಯಲ್ಲಿರುವ ಬಾಯ್ಸ ಹಾಸ್ಟೆಲ್‌ನಲ್ಲಿ ವಿಶೇಷವಾಗಿ ತೆರೆದಿರುವ ಪರೀûಾ ಕೇಂದ್ರಕ್ಕೆ ಗ್ರಾಮದಿಂದಲೇ ಆ್ಯಂಬುಲೆನ್ಸ್ ಮೂಲಕ ಕರೆತಂದು ಪರೀಕ್ಷೆ ಬರೆಸಲು ಸಿದತೆ ಮಾಡಲಾಗಿದೆ.
ಬೀರೂರು ಶೈಕ್ಷಣಿಕ ವಲಯದ ಸೈದುಖಾನ್ ಗ್ರಾಮದ ವಿದ್ಯಾರ್ಥಿ ಬಳ್ಳಾವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಸೋಂಕು ತಗುಲಿದ್ದು ಈ ವಿದ್ಯಾರ್ಥಿಯ ತರೀಕೆರೆ ಪಟ್ಟಣದ ವಿಶೇಷ ಕೇಂದ್ರದಲ್ಲಿ ಪರೀಕ್ಷೆ ಬರೆಸಲು ಸಿದ್ಧತೆ ಮಾಡಲಾಗಿದೆ ಎಂಬ ಮಾಹಿತಿಯನ್ನು ರಾಜಕುಮಾರ್ ನೀಡಿದರು