ಅಜ್ಜಂಪುರ: ಜು. 31 ರೊಳಗೆ ಭದ್ರಾ ಯೋಜನೆ ಸಂತ್ರಸ್ತ ರೈತರಿಗೆ ಪರಿಹಾರ ನೀಡುವುದಾಗಿ ಉಪ ವಿಭಾಗಾಧಿ ಕಾರಿ ಸಿದ್ದಲಿಂಗ ರೆಡ್ಡಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಿಂದ ತರೀಕರೆ ಉಪವಿಭಾಗಾಧಿ ಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಕಡೂರು ಮಾಜಿ ಶಾಸಕ ವೈ.ಎಸ್. ವಿ. ದತ್ತ ಗುರುವಾರ ಕೈಬಿಟ್ಟರು.
ಅಜ್ಜಂಪುರ ಮತ್ತು ಕಡೂರು ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರದ ಹಣ ಸರಿಯಾಗಿ ವಿತರಣೆ ಆಗದಿರುವ ಬಗ್ಗೆ ನ್ಯಾಯ ಕೇಳಲು ಅವರು ಸಂತ್ರಸ್ತ ರೈತರೊಂದಿಗೆ ಪಾದಯಾತ್ರೆಗೆ ಮುಂದಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಗುಂಪುಗೂಡುವಿಕೆ ಬೇಡ. ಪ್ರತಿಭಟನೆ ಕೈಬಿಡಿ ಎಂದು ಡಿವೈಎಸ್ಪಿ ಯೋಗನಗೌಡ, ಇನ್ ಪೆಕ್ಟರ್ ಲಿಂಗರಾಜು, ಪಿಎಸ್‌ಐ ಬಸವರಾಜು ಮನವೊಲಿಸಲು ಮುಂದಾದರು.
ಆಗ ರೈತರೊಂದಿಗೆ ಚರ್ಚಿಸಿದ ಮಾಜಿ ಶಾಸಕರು, ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಬಂದು, ಅಹವಾಲು ಆಲಿಸಿ, ಪರಿಹಾರ ನೀಡುವ ಬಗ್ಗೆ ಸ ಷ್ಟ ಭರವಸೆ ನೀಡಿದರೆ, ಪಾದಯಾತ್ರೆ ಹಿಂಪಡೆಯುವುದಾಗಿ ತಿಳಿಸಿದರು. ಭೂಸ್ವಾ ಧೀನಕ್ಕೆ ಪರಿಹಾರ ನೀಡದ ಹೊರತು ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ರೈತರು ಹಿಂದೆ ಪಟ್ಟು ಹಿಡಿದಿದ್ದರು. ಆಗ ನಾನೇ, ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿ ರೈತರ ಮನವೊಲಿಸಿದ್ದೆ.
ಈಗ ಪರಿಹಾರ ಸರಿಯಾಗಿ ವಿತರಣೆ ಆಗುತ್ತಿಲ್ಲ. ರೈತರು ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕಿದೆ. ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ದೊರಕಿಸಿಕೊಡಲು ಪಾದಯಾತ್ರೆ ನಡೆಸುತ್ತಿರುವುದಾಗಿ ಮಾಜಿ ಶಾಸಕ ವೈ.ಎಸ್. ವಿ. ದತ್ತ, ಉಪವಿಭಾಗಾಧಿ ಕಾರಿಗಳಿಗೆ ತಿಳಿಸಿದರು.
ಇದೀಗ ನೀಡಿರುವ ಭರವಸೆಯಂತೆ ಸಂತ್ರಸ್ತರಿಗೆ ಪರಿಹಾರ ದೊರಕದಿದ್ದರೆ, ರೈತರೊಂದಿಗೆ ಪಾದಯಾತ್ರೆ ನಡೆಸುವುದಾಗಿ ಅವರು ತಿಳಿಸಿದರು. ಸರಿಯಾದ ದಾಖಲೆಯೊಂದಿಗೆ ಕೇರಿಯಲ್ಲಿ ನೇರವಾಗಿ ಸಂಪರ್ಕಿಸಿದರೆ, ವಿಳಂಬ ಮಾಡದೆ ಪರಿಹಾರ ನೀಡಲಾಗುವುದು ಎಂದು ಉಪವಿಭಾಗಾಧಿ ಕಾರಿ ಭರವಸೆ ನೀಡಿದರು. ಶಿವಾನಂದ್, ಕ್ಷೇತ್ರಪಾಲ್, ಕೋಡಿಹಳ್ಳಿ ಮಹೇಶ್, ರಾಜಣ್ಣ, ಮೋಹನ್, ಮುಬಾರಕ್, ಬಿಸಲೇರಿ ಕೆಂಪರಾಜ್, ರೇವಣ್ಣ, ರಾಜ್ ಕುಮಾರ್ ಮತ್ತಿತರರಿದ್ದರು.