Advertisement

ಆತ್ಮಸ್ಥೈರ್ಯದಿಂದ ಕೊರೊನಾ ಎದುರಿಸಿ

10:27 PM Jul 15, 2021 | Team Udayavani |

ಬಾಳೆಹೊನ್ನೂರು: ಕೋವಿಡ್‌-19 ಮೂರನೇ ಅಲೆಯನ್ನು ಎಲ್ಲರೂ ಭಯಪಡದೇ ಆತ್ಮಸ್ಥೈರ್ಯದಿಂದ ಎದುರಿಸುವ ಅವಶ್ಯಕತೆಯಿದೆ ಎಂದು ಮಲೆನಾಡು ಗಲ್ಫ್  ಶಿಕ್ಷಣ ಮತ್ತು ಸೇವಾ ಟ್ರಸ್ಟ್‌ ವಲಯದ ಅಧ್ಯಕ್ಷ ಅಬ್ದುಲ್‌ ವಹೀದ್‌ ತಿಳಿಸಿದರು. ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಲೆನಾಡು ಗಲ್ಫ್ ಶಿಕ್ಷಣ ಮತ್ತು ಸೇವಾ ಟ್ರಸ್ಟ್‌ ವಲಯದ ಸರ್ವ ಸದಸ್ಯ ವಿಶೇಷ ಮಾಸಿಕ ಸಭೆಯಲ್ಲಿ ಮಾತನಾಡಿದರು.

Advertisement

ಟ್ರಸ್ಟ್‌ ವತಿಯಿಂದ ಹಲವಾರು ತುರ್ತು ಸಂದರ್ಭದಲ್ಲಿ ಸಮಾಜಮುಖೀ ಸೇವೆ ಸಲ್ಲಿಸುತ್ತಿದೆ. ಅಲ್ಲದೆ ಮಲೆನಾಡು ಪ್ರದೇಶದ ಜನರ ಸಂಕಷ್ಟದಲ್ಲಿ ಜಾತಿ, ಮತ ಬೇಧವಿಲ್ಲದೆ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವುದು. ಶಿಕ್ಷಣ ಇನ್ನಿತರ ಸಮಾಜ ಸೇವೆ ಮಾಡುವ ಉದ್ದೇಶವನ್ನಿಟ್ಟುಕೊಂಡಿದೆ. ಬಹಳ ಪ್ರಮುಖವಾಗಿ ಮುಂಬರುವ ಕೋವಿಡ್‌-19 ಮೂರನೇ ಅಲೆಯ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹ ಆತ್ಮಸ್ಥೈರ್ಯದಿಂದ ಎದುರಿಸುವ ಅವಶ್ಯಕತೆಯಿದೆ.

ಅಲ್ಲದೆ ಕೊರೊನಾ ನಿಯಂತ್ರಣಕ್ಕಾಗಿ ಸರಕಾರದ ಆದೇಶದಂತೆ ಕೊರೊನಾ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಮಾಸಿಕ ಸಭೆಯಲ್ಲಿ ಹೊಸ ಕಾರ್ಯಕಾರಿಣಿ ಸದಸ್ಯರ ಸೇರ್ಪಡೆ ಮತ್ತು ತಾಲೂಕು ವಾರು ಉಪ-ಘಟಕಗಳ ರಚನೆಯ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಎಂ.ಜಿ.ಟಿ ಬಾಳೆಹೊನ್ನೂರು ವಲಯದ ಗೌರವಾಧ್ಯಕ್ಷ ಕಳಸ ಇಬ್ರಾಹಿಂ, ಉಪಾಧ್ಯಕ್ಷ ಜಮೀರ್‌ ಮೂಸಬ್ಬ, ಕಾರ್ಯದರ್ಶಿ ಇಬ್ರಾಹೀಂ ಶಾ, ಪ್ರದಾನ ಕಾರ್ಯದರ್ಶಿ ಅಬ್ದುಲ್‌ ಹಕ್‌, ಖಜಾಂಚಿ ರಝೀನ್‌ ಗಬ್‌ಗಲ್‌, ಕೇಂದ್ರ ಸಮಿತಿ ಸದಸ್ಯ, ಇಂಟರ್‌ ನ್ಯಾಶನಲ್‌ ಕೋ-ಆರ್ಡಿನೇಟರ್‌, ಕೇಂದ್ರ ಸಮಿತಿ ಮತ್ತು ದಮ್ಮಾಮ್‌-ಖೋಬರ್‌ ಘಟಕದ ಅಧ್ಯಕ್ಷ ಜಯಪುರ ಅಬ್ದುಲ್‌ ಸತ್ತಾರ್‌, ರಿಯಾಧ್‌ ಘಟಕದ ಪ್ರಧಾನ ಕಾರ್ಯದರ್ಶಿ ನಜೀರ್‌. ಎಂ, ಅಲ್‌ ಜುಬೈಲ್‌ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಲತೀಫ್‌ ಸೇರಿದಂತೆ ಎಂ.ಜಿ.ಟಿ ಬಾಳೆಹೊನ್ನೂರು ವಲಯದ ಸದಸ್ಯರು ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next