ಬಾಳೆಹೊನ್ನೂರು: ಕಾರ್ಮಿಕ ಇಲಾಖೆಯ ಅ ಧೀನದಲ್ಲಿ ಬರುವ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಅಹಾರ ಧಾನ್ಯ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಬಾಳೆಹೊನ್ನೂರಿನ ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯ ಬಿ. ಕಣಬೂರು, ಮಾಗುಂಡಿ, ಬನ್ನೂರು ಆಡುವಳ್ಳಿ, ಕರ್ಕೇಶ್ವರ ಗ್ರಾಪಂ ವ್ಯಾಪ್ತಿಯ ಕಟ್ಟಡ ಮತ್ತು ಇತರೆ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು. 2008ರಿಂದ 2015ರ ವರೆಗೆ ಕಟ್ಟಡ ಕಾರ್ಮಿಕರ ವಾರ್ಷಿಕ ನೋಂದಣಿಗೆ 25 ರೂ. ಹಾಗೂ ಮಾಸಿಕ ವಂತಿಗೆ 10 ರೂ.ನಂತೆ ಸಂಗ್ರಹಿಸಿದ್ದು 2015 ರಿಂದ 2020ರ ವರೆಗೆ 50 ರೂ. ವಂತಿಗೆ ವಸೂಲಿ ಮಾಡಲಾಗಿದೆ.
ಮಾಲೀಕರ ಲೇಬರ್ ಸೆಸ್ ಶೇ.1ರಂತೆ ಸರಕಾರದ ಎಲ್ಲಾ ನಿರ್ಮಾಣ ಕಟ್ಟಡಗಳಿಗೂ ಹಾಗೂ 10 ಲಕ್ಷ ಮೇಲ್ಪಟ್ಟ ಕಟ್ಟಡ ನಿರ್ಮಾಣಕ್ಕೆ ಶೇ. 1 ಸೆಸ್ ವಿಧಿಸಿದ್ದು ಈ ಹಣದಿಂದ ಕಾರ್ಮಿಕರಿಗೆ ಅಹಾರ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಬನ್ನೂರು, ಆಡುವಳ್ಳಿ, ಮಾಗುಂಡಿ, ಕರ್ಕೇಶ್ವರ, ಬಿ. ಕಣಬೂರು ಗ್ರಾಪಂನ ಅಧ್ಯಕ್ಷರು, ಸದಸ್ಯರಿಗೆ ಹಾಗೂ ಪತ್ರಕರ್ತರಿಗೆ ಮಾಹಿತಿ ನೀಡದಿರುವ ಬಗ್ಗೆ ಶಾಸಕರನ್ನು ಪ್ರಶ್ನಿಸಿದಾಗ ಉತ್ತರಿಸಿದ ಅವರು ತಾಪಂ ಇಒ ಹಾಗೂ ಗ್ರಾಪಂ ಪಿಡಿಒ ಅವರು ಈ ಬಗ್ಗೆ ಮಾಹಿತಿ ನೀಡಬೇಕಾಗಿದ್ದು, ಅಧಿಕಾರಿಗಳು ನಿರ್ಲಕ್ಷé ವಹಿಸಿದ ಬಗ್ಗೆ ಜಿಪಂ ಸಿಇಒ ಅವರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುವುದೆಂದು ತಿಳಿಸಿದರು.ಹಿರಿಯ ಕಾರ್ಮಿಕ ನಿರೀಕ್ಷಕ ಸುರೇಂದ್ರ ಮಾತನಾಡಿ, ನೋಂದಾಯಿತ ಹೋಬಳಿ ವ್ಯಾಪ್ತಿಯ ಕುಟುಂಬಗಳಿಗೆ 500 ಆಹಾರ ಧಾನ್ಯದ ಕಿಟ್ ವಿತರಿಸಲಾಗುವುದೆಂದು ತಿಳಿಸಿದರು.
ಕಾರ್ಯ ನಿರ್ವಾಹಕ ಅಧಿ ಕಾರಿ ಮಹಮ್ಮದ್ ಹ್ಯಾರೀಸ್, ರಾಘವೇಂದ್ರ, ಅಂಕಿ- ಅಂಶ ತಂತ್ರಜ್ಞ ಶಿವರಾಮ್, ಬಿ. ಕಣಬೂರು ಗ್ರಾಪಂ ಅಧ್ಯಕ್ಷೆ ಅಂಬುಜಾ, ಉಪಾಧ್ಯಕ್ಷ ಎಂ.ಜೆ. ಮಹೇಶಾಚಾರ್, ಕರ್ಕೇಶ್ವರ ಗ್ರಾಪಂ ರಾಜೇಶ್ ಕೇಶವತ್ತಿ, ಬನ್ನೂರು ಗ್ರಾಪಂ ಅಧ್ಯಕ್ಷೆ ಮಧುರಾ, ಉಪಾಧ್ಯಕ್ಷ ಗೋಪಾಲ, ಮಾಗುಂಡಿ ಗ್ರಾಪಂ ಅಧ್ಯಕ್ಷೆ ಪ್ರಮಿಳಾ ಸಿಲ್ವಿಯಾ ಸೆರಾವೋ, ಆಡುವಳ್ಳಿ ಗ್ರಾಪಂ ಅಧ್ಯಕ್ಷ ಪ್ರದೀಪ, ಉಪಾಧ್ಯಕ್ಷೆ ಪ್ರತಿಮಾ, ಪ್ರಭಾಕರ್ ಪ್ರಣಸ್ವಿ, ಎಂ.ಎಸ್. ಅರುಣೇಶ್, ಇಬ್ರಾಹಿಂ ಶಾμ ಇತರರು ಇದ್ದರು.