Advertisement

ರಾಮೇಶ್ವರಂ ಅರ್ಚಕರಿಗೆ ಶೃಂಗೇರಿ ಜಗದ್ಗುರುಗಳ ದೀಕ್ಷೆ

10:01 PM Jul 09, 2021 | Team Udayavani |

ಶೃಂಗೇರಿ : ತಮಿಳುನಾಡಿನ ರಾಮೇಶ್ವರಂ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಲು ಶ್ರೀ ರಾಮೇಶ್ವರ ದೇವಾಲಯದ ಅರ್ಚಕ ಶರವಣನ್‌ ರಾನಡೆ ಅವರಿಗೆ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳು ಗುರುವಾರ ದೀಕ್ಷೆ ನೀಡಿದರು.

Advertisement

ಬೆಳಗ್ಗೆ ಗುರುಭವನದಲ್ಲಿ ವಿವಿಧ ಧಾರ್ಮಿಕ ವಿಧಿ-  ವಿಧಾನದ ನಂತರ ಜಗದ್ಗುರುಗಳು ರಾಮೇಶ್ವರ ದೇವಾಲಯದ ಅರ್ಚಕರಿಗೆ ದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಇದ್ದರು. ಈ ಮೂಲಕ ಶ್ರೀ ರಾಮೇಶ್ವರ ದೇವಾಲಯದ ಅರ್ಚಕ ಶರವಣನ್‌ ರಾನಡೆ ಅವರು ಶ್ರೀ ರಾಮನಾಥ ಸ್ವಾಮಿಯ ಪೂಜೆ ಮಾಡಲು ಅಧಿಕಾರ ಪಡೆದರು.

ರಾಮೇಶ್ವರದಲ್ಲಿ ಶ್ರೀ ರಾಮನಾಥ ಸ್ವಾಮಿಗೆ ಯಾರು ಪೂಜೆ ಮಾಡಬೇಕು ಎಂದು ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಕಟ್ಟುನಿಟ್ಟಿನ ಸಂಪ್ರದಾಯ ಮತ್ತು ನಿರ್ಬಂಧಗಳನ್ನು ಹಾಕಿದ್ದಾರೆ. ಈ ಹಕ್ಕನ್ನು ನೇಪಾಳದ ಮಹಾರಾಜರು ಪಡೆದಿದ್ದು, ಶೃಂಗೇರಿ ಮಠದ ಗುರು ಪರಂಪರೆ ಇದನ್ನು ದೈವಿಕವಾಗಿ ಪಡೆದಿದೆ. ನಿರ್ದಿಷ್ಟ ಸಮುದಾಯದಿಂದ ಬರುವ ಅರ್ಚಕರು ಶೃಂಗೇರಿ ಮಠದ ಜಗದ್ಗುರುಗಳಿಂದ ಮಂತ್ರೋಪದೇಶ ದೀಕ್ಷೆ ಸ್ವೀಕರಿಸಿದ ನಂತರವೇ ಶ್ರೀ ರಾಮನಾಥ ಸ್ವಾಮಿಯ ಸೇವೆ ಮಾಡಬಹುದಾಗಿದೆ.

ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಮತ್ತು ರಾಮೇಶ್ವರ ದೇವಾಲಯದ ಧಾರ್ಮಿಕ ಆಚರಣೆ ಮತ್ತು ಸಂವಿಧಾನದ 25ನೇ ಪರಿಚ್ಛೇದದ ಅಡಿಯಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕು ಕೂಡ ಆಗಿದೆ. ಐತಿಹಾಸಿಕವಾಗಿ ಶೃಂಗೇರಿ ದಕ್ಷಿಣಾಮ್ನಾಯ ಮಹಾಸಂಸ್ಥಾನ ಮತ್ತು ರಾಮೇಶ್ವರಂ ಕ್ಷೇತ್ರಕ್ಕೂ ಅವಿನಾವಭಾವ ಸಂಬಂಧ ಇದೆ.

Advertisement

Udayavani is now on Telegram. Click here to join our channel and stay updated with the latest news.

Next