Advertisement

ಜನಸಂಖ್ಯಾ ನಿಯಂತ್ರಣ ಜಾಗೃತಿ ಅಗತ್ಯ

09:55 PM Jul 09, 2021 | Team Udayavani |

ಚಿಕ್ಕಮಗಳೂರು : 2011ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆಯು 121ಕೋಟಿ ಇದ್ದು, ಪ್ರತೀ ವರ್ಷ 1.80 ಕೋಟಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ 42 ವರ್ಷಗಳಲ್ಲಿ 240 ಕೋಟಿ ಜನಸಂಖ್ಯೆ ದಾಟಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಉಮೇಶ್‌ ಆತಂಕ ವ್ಯಕ್ತಪಡಿಸಿದರು.

Advertisement

ಗುರುವಾರ ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ಜಾಗೃತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಬಾಲ್ಯವಿವಾಹ, ಮೂಢನಂಬಿಕೆ, ಅನಕ್ಷರತೆ ಸೇರಿದಂತೆ ಇತರೆ ಕಾರಣಗಳಿಂದ ಜನಸಂಖ್ಯೆ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆ ಇದ್ದು, ಮುಂದಿನ 40 ವರ್ಷದಲ್ಲಿ 12 ಕೋಟಿ ದಾಟಲಿದೆ. ಜನಸಂಖ್ಯೆ ಸೊಟಕ್ಕೆ ಕಡಿವಾಣ ಹಾಕಬೇಕು. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ರೇಟ್‌ ಶೇ.3ಕ್ಕಿಂತ ಕಡಿಮೆಯಾಗಿದೆ. ಪ್ರವಾಸಿಗರು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಧಿ  ಕಾರಿಗಳು ಮತ್ತು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿ ಕಾರಿ ಡಾ| ಅಶ್ವಥ್‌ ಬಾಬು ಮಾತನಾಡಿ, 1987, ಜು.11 ರಂದು ಯುಗೋಸ್ಲೇವಿಯಾದಲ್ಲಿನ ಗಂಡುಮಗುವೊಂದು ವಿಶ್ವದ ಜನಸಂಖ್ಯೆಯು 500ನೇ ಕೋಟಿಯ ಪ್ರಜೆಯಾಗಿ ಹುಟ್ಟಿದ್ದು, ಆ ದಿನವನ್ನು ಯುನಿಸೆಫ್‌ ವಿಶ್ವಜನಸಂಖ್ಯೆ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

ದೇಶದಲ್ಲಿ ಜನಸಂಖ್ಯೆ ದರವು 2001-2011ರ ವೇಳೆಗೆ ಶೇ.17.64ಕ್ಕೆ ಇಳಿದಿದೆ. ಮರಣ ಪ್ರಮಾಣವು ಶೇ.7.1ಕ್ಕೆ ಬಂದಿದೆ. ಜಿಲ್ಲೆಯಲ್ಲಿ 2011ರ ಜನಗಣತಿಯಂತೆ 1,137,961 ಇದೆ ಎಂದು ಮಾಹಿತಿ ನೀಡಿದರು.

Advertisement

ಆರ್‌.ಸಿ.ಎಚ್‌. ಡಾ| ಭರತ್‌ ಮಾತನಾಡಿದರು. ಡಾ| ಹರೀಶ್‌ಬಾಬು, ಸಹಾಯಕ ಆಡಳಿತ ವಿಭಾಗಾಧಿ ಕಾರಿ ಪ್ರಶಾಂತ್‌, ಹರ್ಷ, ಸಿಎಂಡಿ, ಎನ್‌ಎಚ್‌ಎಂ, ಆರ್‌ಸಿ ಎಚ್‌ ವಿಭಾಗದ ಸಿಬ್ಬಂದಿ ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ವೈ.ಎಂ. ಲಲಿತಾ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next