Advertisement

ಆರೋಗ್ಯ ಕಾರ್ಯಕರ್ತರನ್ನು ಗೌರವಿಸಿ: ರಘುಮೂರ್ತಿ

09:28 PM Jul 02, 2021 | Team Udayavani |

ನಾಯಕನಹಟ್ಟಿ: ಆರೋಗ್ಯ ವ್ಯವಸ್ಥೆಯ ತಳ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಗೌರವಿಸಬೇಕು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ತುರುವನೂರು ಗ್ರಾಮದಲ್ಲಿ ಕೊರೊನಾ ವಾರಿಯರ್ಗೆ ದಿನಸಿ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಗನವಾಡಿ, ಆಶಾ, ಪೌರ ಕಾರ್ಮಿಕರು ಸಿಬ್ಬಂದಿ ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ.

Advertisement

ಚಳ್ಳಕೆರೆ, ಪರಶುರಾಮಪುರ ಹಾಗೂ ತುರುವನೂರು ಗ್ರಾಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಅತ್ಯಂತ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆ ತರುವಲ್ಲಿ ಶ್ರಮ ವಹಿಸಿ ಕಾರ್ಯ ನಿರ್ವಹಿಸಿದ್ದಾರೆ.

ಸ್ಥಳೀಯರ ವಿರೋಧದ ನಡುವೆ ಪಾಸಿಟಿವ್‌ ಇರುವ ಜನರನ್ನು ಕರೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಎರಡನೇ ಅಲೆ ಇನ್ನೂ ಅಂತ್ಯಗೊಂಡಿಲ್ಲ. ಈ ನಡುವೆ ಮೂರನೇ ಅಲೆಯ ಆತಂಕವಿದೆ. ಆಶಾ, ಅಂಗನವಾಡಿ ಹಾಗೂ ಪೌರ ಕಾರ್ಮಿಕರು ಕಡ್ಡಾಯವಾಗಿ ಎರಡು ಹಂತದ ಲಸಿಕೆಗಳನ್ನು ಪಡೆಯಬೇಕು.

ಎರಡು ಲಸಿಕೆಗಳನ್ನು ಪಡೆದ ಜನರಿಗೆ ಕೊರೊನಾ ಹರಡುವ ಪ್ರಮಾಣ ಶೇ. 96 ಕಡಿಮೆಯಾಗಲಿದೆ. ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಾಗಿ ಒಳಗಾಗುವ ಅಪಾಯವಿದೆ. 360ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಸುಲಭವಾಗಿ ಕೊರೊನಾಕ್ಕೆ ತುತ್ತಾಗುವ ಸಾಧ್ಯತೆಯಿದೆ.

ಆದ್ದರಿಂದ ಅವರೆಲ್ಲರಿಗೂ ಪೌಷ್ಟಿಕ ಆಹಾರ ನೀಡಬೇಕೆಂದರು. ತುರುವನೂರು ಗ್ರಾಮದ ಪ್ರಥಮದರ್ಜೆ ಕಾಲೇಜು ಸ್ಥಳಾಂತರಗೊಂಡಿತ್ತು. ಇಂತಹ ಸಂದರ್ಭದಲ್ಲಿ ಎಲ್ಲಾಸ್ವಾಮೀಜಿಗಳು ನನ್ನ ಪರ ಧ್ವನಿಯಾಗಿ ಬೆಂಬಲ ನೀಡಿದರು. ಹೀಗಾಗಿ ಕಾಲೇಜು ಇಲ್ಲಿಯೇ ಉಳಿಯಲು ಸಾಧ್ಯವಾಯಿತು ಎಂದು ತಿಳಿಸಿದರು.

Advertisement

ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿ, ತಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಇಡೀ ಸಮಾಜ ಗೌರವಿಸಬೇಕು. ಸರಕಾರ ಅವರ ಸೇವೆಯನ್ನು ಗುರುತಿಸಿ ಉತ್ತಮ ವೇತನ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ಶಾರದಾ ರಮೇಶ್‌, ತಾಪಂ ಇಒ ಹನುಮಂತಪ್ಪ, ತಾಲೂಕು ಆರೋಗ್ಯಾಧಿ ಕಾರಿ ಡಾ| ಗಿರೀಶ್‌, ಸಿಡಿಪಿಒ ನರಸಿಂಹರಾಜು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next