Advertisement

ಕೋವಿಡ್‌ ನಿಯಮ ಉಲ್ಲಂಘಿಸಿದರೆ ದಂಡ

10:26 PM Jun 30, 2021 | Team Udayavani |

ಚಿಕ್ಕಮಗಳೂರು: ಕೋವಿಡ್‌ ನಿಯಮ ನಗರ ಪ್ರದೇಶದಲ್ಲಿ ಉಲ್ಲಂಘನೆಯಾಗುತ್ತಿರು ವುದು ಕಂಡುಬಂದಲ್ಲಿ ನಗರಸಭೆಯಿಂದ ದಂಡ ವಿಧಿ ಸಲಾಗುವುದು ಎಂದು ಪೌರಾಯುಕ್ತ ಬಿ.ಸಿ. ಬಸವರಾಜ್‌ ತಿಳಿಸಿದ್ದಾರೆ.

Advertisement

ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್‌ ನಿಯಮಗಳನ್ನು ಉಲ್ಲಂಘಿ ಸುವವರ ವಿರುದ್ಧ ಕ್ರಮ ಕೈಗೊಳ್ಳಲು ನಗರಸಭೆ ಸಿಬ್ಬಂದಿಗಳನ್ನು ಒಳಗೊಂಡ 6 ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ತಿರುಗಾಡುವುದು, ಸಾಮಾಜಿಕ ಅಂತರ ಕಾಪಾಡದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ಕಂಡು ಬಂದಲ್ಲಿ 200 ರೂ. ದಂಡ ವಿಧಿ ಸಲಿದ್ದಾರೆ ಎಂದಿದ್ದಾರೆ.

ತಂಡ 1 ರಲ್ಲಿ ಶ್ರೀನಿವಾಸ್‌ಮೂರ್ತಿ, ಸುನೀಲ್‌ ಕುಮಾರ್‌, ಬಿ.ಸಿ. ನಾಗರಾಜ್‌, ತಂಡ 2 ರಲ್ಲಿ ವೈ.ಕೆ. ರಂಗಪ್ಪ, ಡಿ.ಮಂಜುನಾಥ್‌, ರಮೇಶ್‌, ತಂಡ 3 ರಲ್ಲಿ ಕೆ.ಎಸ್‌. ಈಶ್ವರಪ್ಪ, ಎನ್‌. ಅಣ್ಣಯ್ಯ, ವಿವೇಕ್‌, ತಂಡ 4 ರಲ್ಲಿ ಟಿ.ಎಚ್‌. ಶಶಿಕುಮಾರ್‌ ರಾಜ್‌ ಅರಸ್‌, ಶ್ರೀನಿವಾಸ್‌, ವಿವೇಕ್‌, ತಂಡ 5 ರಲ್ಲಿ ಎಸ್‌. ವೆಂಕಟೇಶ್‌, ಸತೀಶ್‌, ತಂಡ 6 ರಲ್ಲಿ ಎಚ್‌. ಆರ್‌. ರವಿ, ಮುರುಗೇಶ್‌, ನಗರಸಭೆ ಸಿಬ್ಬಂದಿ  ಗಳು ಮತ್ತು ಹೊರಗುತ್ತಿಗೆ ಸಿಬ್ಬಂದಿ  ಕಾರ್ಯ ನಿರ್ವಹಿಸಲಿ ದ್ದಾರೆ ಎಂದು ತಿಳಿಸಿದ್ದಾರೆ.

ಈ ತಂಡ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರ ವರೆಗೂ ಕಾರ್ಯ ನಿರ್ವಹಿಸಲಿದ್ದು ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಉಲ್ಲಂಘಿಸಿದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next