ಚಿಕ್ಕಮಗಳೂರು: ಬಿಜೆಪಿ ಜನಪ್ರತಿನಿ ಧಿಗಳಿಗೆ ಜನರ ಬಗ್ಗೆ ಕಾಳಜಿಯಿಲ್ಲ. ಸರ್ಕಾರ ನೀಡುವ ಸೌಲಭ್ಯಗಳನ್ನು ಲೂಟಿ ಮಾಡುವುದೇ ಇವರ ಕಾಳಜಿಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರದ ತಾಲೂಕು ಕಚೇರಿ ಆವರಣದಲ್ಲಿ ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಪಡಿತರ ಕಿಟ್‌ಗಳನ್ನು ಅ ಧಿಕಾರಿಗಳು, ಶಾಸಕರು ಮತ್ತು ಬಿಜೆಪಿ ಮುಖಂಡರ ಅಣತಿಯಂತೆ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆಯಲ್ಲಿ ನೋಂದಣಿಗೊಂಡ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಪಡಿತರ ಕಿಟ್‌ಗಳನ್ನು ನೀಡುತ್ತಿದೆ. ಆದರೆ ಇಲಾಖೆ ಅಧಿಕಾರಿಗಳು ಕಿಟ್ ಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ, ಶಾಸಕ ಸಿ.ಟಿ. ರವಿ ಮತ್ತು ಬಿಜೆಪಿ ಮುಖಂಡರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಇಲಾಖೆಯಿಂದ ಪೂರೈಕೆ ಮಾಡಲಾಗಿದ್ದ ಕಿಟ್‌ಗಳನ್ನು ನಗರದ ವಿವಿಧ ವಾರ್ಡ್‌ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಇಲಾಖೆಯಿಂದ ನೀಡುವ ಕಿಟ್ ಗಳನ್ನು ಶಾಸಕ ಸಿ.ಟಿ. ರವಿ ಅವರಿಂದ ವಿತರಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಬಿಜೆಪಿಯವರು ಮುಂದಾಗಿದ್ದಾರೆ ಎಂದರು.
ಶಾಸಕರ ಹಿಂಬಾಲಕರು ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಅನುದಾನವನ್ನು ಲೂಟಿ ಮಾಡಿದ್ದಾರೆ. ಕಾರ್ಮಿಕ ಇಲಾಖೆಯಿಂದ ನೀಡುತ್ತಿರುವ ಕಿಟ್ ಗಳನ್ನು ಲೂಟಿ ಮಾಡಿ ತಮ್ಮ ಬೇಳೆಕಾಯಿ ಬೇಯಿಸಿಕೊಳ್ಳಲು ಮುಂದಾಗಿ ಕೂಲಿ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್. ಎಂ. ರೇಣುಕಾರಾಧ್ಯ ಮಾತನಾಡಿ, ಜಿಲ್ಲೆಯ ಸಾವಿರಾರು ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಜಿಲ್ಲೆ ಯ ಕಾರ್ಮಿಕ ಇಲಾಖೆ ಅ ಧಿಕಾರಿಗಳು ಈ ಕಿಟ್‌ಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡದೆ ಬಿಜೆಪಿಯವರಿಗೆ ಲೂಟಿ ಮಾಡಲು ನೆರವು ನೀಡುತ್ತಿದ್ದಾರೆ ಎಂದ ಅವರು, ಕಿಟ್‌ಗಳನ್ನು ನೀಡಲು ಇಲಾಖೆ ಮುಂದಾಗದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಐಟಿಯಿಸಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 38 ಸಾವಿರ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಎಲ್ಲಾ ತಾಲೂಕುಗಳಿಗೂ 10 ಸಾವಿರ ಕಿಟ್ ಗಳನ್ನು ಸರ್ಕಾರ ಪೂರೈಕೆ ಮಾಡಿದೆ. ಕಿಟ್ ಗಳ ವಿತರಣೆ ಬಗ್ಗೆ ಇಲಾಖಾ ಧಿಕಾರಿಗಳು ಎಲ್ಲ ನೋಂದಾಯಿತ ಕಾರ್ಮಿಕರಿಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ತಹಶೀಲ್ದಾರ್ ಹಾಗೂ ಕಾರ್ಮಿಕ ಇಲಾಖೆ ಅಧಿ ಕಾರಿಗಳು ಕಿಟ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಘು, ತಾಲೂಕು ಅಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ, ವಸಂತ್‌ಕುಮಾರ್, ಜೆಡಿಎಸ್ ಪಕ್ಷದ ಜಯಂತಿ, ಮುಖಂಡರಾದ ಮಂಜೇಗೌಡ, ಶಾಂತಕುಮಾರ್ ಇತರರು ಇದ್ದರು.