Advertisement

ಕೋವಿಡ್‌: 45 ಜನ ಮೃತರ ಅಸ್ಥಿ ವಿಸರ್ಜನೆ

10:17 PM Jun 23, 2021 | Team Udayavani |

ಚಿಕ್ಕಮಗಳೂರು/ಬಾಳೆಹೊನ್ನೂರು: ಕೋವಿಡ್‌ 2ನೇ ಅಲೆಯಿಂದ ಮೃತಪಟ್ಟ ಅನಾಥ ಮತ್ತು ನಿರ್ಗತಿಕ ಶವಗಳ ಚಿತಾಭಸ್ಮವನ್ನು ಮಂಗಳವಾರ ಬಾಳೆಹೊನ್ನೂರು ಸಮೀಪದ ಖಾಂಡ್ಯ ಭದ್ರಾ ನದಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌, ಜಿಲ್ಲಾ ಬಿಜೆಪಿ ಹಾಗೂ ತಾಲೂಕು ಆಡಳಿತದ ನೇತೃತ್ವದಲ್ಲಿ ವಿಧಿ-ವಿಧಾನಗಳನ್ನು ನೆರವೇರಿಸಿ ವಿಸರ್ಜಿಸಲಾಯಿತು.

Advertisement

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗಿ ಇದುವರೆಗೂ 325ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಕೆಲವು ಮೃತದೇಹಗಳನ್ನು ಕುಟುಂಬಸ್ಥರು ತಮ್ಮ ವಶಕ್ಕೆ ಪಡೆದು ಅಂತ್ಯಸಂಸ್ಕಾರ ಕ್ರಿಯೆ ನಡೆಸಿದರು. ಕೆಲ ಮೃತದೇಹವನ್ನು ವಾರಸುದಾರರು ಪಡೆಯದೆ ಅನಾಥವಾಗಿದ್ದು, ಅಂಥ ಮೃತದೇಹಗಳನ್ನು ಸಂಘಟನೆಗಳು ಮತ್ತು ಸ್ವಯಂ ಸೇವಾ ಕಾರ್ಯಕರ್ತರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಕುಟುಂಬಸ್ಥರು ತಮ್ಮ ವಶಕ್ಕೆ ಪಡೆದ ಮೃತದೇಹಗಳ ಅಂತ್ಯಕ್ರಿಯೆ ಬಳಿಕ ವಿಧಿ- ವಿಧಾನಗಳನ್ನು ನೆರವೇರಿಸಿ ಚಿತಾಭಸ್ಮ ವಿಸರ್ಜಿಸಿದ್ದರು.

ಆದರೆ 45 ಅನಾಥ ಮತ್ತು ನಿರ್ಗತಿಕ ಶವಗಳ ಅಂತ್ಯಕ್ರಿಯೆ ಬಳಿಕ ಚಿತಾಭಸ್ಮ ಪಡೆಯಲು ಯಾರೂ ಮುಂದಾಗದಿದ್ದರಿಂದ ನಗರದ ಚಿತಾಗಾರದಲ್ಲಿ ಇರಿಸಲಾಗಿತ್ತು. ಅಂಥ ಅಸ್ತಿಗಳನ್ನು ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು. ಪುರೋಹಿತರಾದ ಮಂಜುನಾಥ್‌ ಭಟ್‌, ಪ್ರಸಾದ್‌ ಭಟ್‌, ಜಗದೀಶ್‌, ಭಾರ್ಗವ್‌ ಭಟ್‌ ನೇತೃತ್ವದಲ್ಲಿ ಬಿಜೆಪಿ ಮುಖಂಡರಾದ ಸಂದೇಶ್‌ ಅರೆನೂರು, ವಾಸು ಹುಯಿಗೆರೆ, ಈಶ್ವರ ಹಳ್ಳಿ ಮಹೇಶ್‌ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಮುರಡಪ್ಪ, ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್‌, ಜಿಪಂ ಸದಸ್ಯೆ ಕವಿತಾ ಲಿಂಗರಾಜ್‌, ದೀಪಕ್‌ ದೊಡ್ಡಯ್ಯ, ಸಿಡಿಎ ಅಧ್ಯಕ್ಷ ಸಿ. ಆನಂದ್‌, ಬಿಜೆಪಿ ನಗರಾಧ್ಯಕ್ಷ ಮಧುರಾಜ್‌ ಕುಮಾರ್‌ ಅರಸ್‌, ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ತಹಶೀಲ್ದಾರ್‌ ಡಾ| ಕೆ.ಜೆ. ಕಾಂತ್‌ರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next