ಹಿಂಪಡೆಯಬೇಕು ಹಾಗೂ ಕಾಫಿ ಬೆಳೆಗಾರರ ನೆರವಿಗೆ ಕಾಫಿಮಂಡಳಿ ಬರಬೇಕು ಎಂದು ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು
ಮಾತನಾಡಿದರು.
Advertisement
ಅತಿವೃಷ್ಟಿ, ಅಕಾಲಿಕ ಮಳೆ, ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಇಂದು ಕಾಫಿ ಬೆಳೆಗಾರರು ನಲುಗಿ ಹೋಗಿದ್ದಾರೆ. ಕಾಫಿ ಉದ್ಯಮವೇ ನಶಿಸುವ ಸ್ಥಿತಿಗೆ ಬಂದಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರ ನೆರವಿಗೆ ಬರಬೇಕಾದ ಕಾಫಿ ಮಂಡಳಿ ಕಣ್ಮುಚ್ಚಿಕೊಂಡಿದ್ದು ನಷ್ಟದ ನೆಪವೊಡ್ಡಿ ಝೋನಲ್ ಕಚೇರಿಗಳನ್ನು ಮುಚ್ಚಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿಎಂದು ಪ್ರಶ್ನಿಸಿದರು.
ಝೋನಲ್ ಕಚೇರಿಗಳಿಂದ ಸಣ್ಣಪುಟ್ಟ ಕಾಫಿ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಕಾಫಿ ಬೆಳೆಗಾರರಿಗೆ ಸಿಗುವ ಸಬ್ಸಿಡಿ, ಕಾμಗಿಡ, ರೈತರಿಗೆ ಸಿಗುವ ರಸಗೊಬ್ಬರ ಮಾಹಿತಿ ಸ್ಥಳೀಯವಾಗಿ ದೊರೆಯುವುದರಿಂದ ಸಣ್ಣ ಬೆಳೆಗಾರರಿಗೆ ನೆರವಾಗಿತ್ತು. ಈಗ ಈ ಕಚೇರಿಗಳನ್ನು
ರದ್ದುಪಡಿಸುವುದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರು ದೂರದ ಪ್ರದೇಶದಿಂದ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಲಿದೆ.
ಕೇಂದ್ರ ಸರ್ಕಾರ ಸಂಪೂರ್ಣ ರೈತ ವಿರೋಧಿಯಾಗಿದೆ. ಕಳೆದ ಎರಡು ತಿಂಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ
ನಡೆಸುತ್ತಿದ್ದಾರೆ. ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೂ ಸರ್ಕಾರ ಅವರ ಮೇಲೆ ಜಲ ಪಿರಂಗಿ ಗುಂಡು ಹೊಡೆಯುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅದೇ ರೀತಿ ಕಾಫಿ ಬೆಳೆಗಾರರನ್ನು ಕೂಡ ನಿರ್ಲಕ್ಷ ಮಾಡಲಾಗುತ್ತಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡ ಇಬ್ರಾಹಿಂ ಅವರ ರಾಜ್ಯದ 26 ಸಂಸದರು ಜನರ ರಕ್ಷಣೆಗಾಗಿ ಇಲ್ಲ, ಅವರೆಲ್ಲ ಭಕ್ಷಕರಾಗಿದ್ದಾರೆ ಎಂದು ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಸಂಸದೆ ಶೋಭಾ ಕರಂದ್ಲಾಜೆ 2 ಬಾರಿ ಸಂಸದರಾಗಿದ್ದಾರೆ. ಇದುವರೆಗೂ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಮಾತನಾಡಿಲ್ಲ ಎಂದ ಅವರು, ಎಲ್ಲಿ ಕೋಮು ಗಲಭೆ ನಡೆಯುತ್ತಿದೆಯೋ ಅಲ್ಲಿ ಹಾಜರಾಗುವುದಷ್ಟೇ ಅವರ ಕೆಲಸವಾಗಿದೆ ಎಂದು ಟೀಕಿಸಿದರು.
ಬೆಳೆಗಾರರು ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಂಡಿದ್ದು, ಸಾಲ ಮರುಪಾವತಿ ಮಾಡದ ಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ. ಬ್ಯಾಂಕ್‌ಗಳು ಸಾಲ ಸೂಲಿಗೆ ನೋಟಿಸ್ ನೀಡುತ್ತಿವೆ. ಯಾರೂ ಧೃತಿಗೆಡಬಾರದು ಎಂದ ಅವರು, ಶೋಭಾ ಕರಂದ್ಲಾಜೆ ಪಾರ್ಲಿಮೆಂಟ್‌ನಲ್ಲಿ ಬೆಳೆಗಾರರ ಪರಧ್ವನಿ
ಎತ್ತದೆ ಬೆಳೆಗಾರರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಕಾಫಿ ಬೆಳೆಗಾರ ಎಚ್.ಎಂ. ಕೃಷ್ಣೇಗೌಡ ಮಾತನಾಡಿ, ಕಾ ಪಿ ಬೆಳೆಗಾರರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಈ ಕಚೇರಿಗಳಿಂದ ಅನುಕೂಲವಾಗುತ್ತಿದೆ. ಯಾವುದೇ ಕಾರಣಕ್ಕೂ ಕಚೇರಿಗಳನ್ನುರದ್ದುಪಡಿಸಬಾರದು ಎಂದರು. ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಚಂದ್ರಪ್ಪ, ಮಂಜಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ವಿನಯ್‌ರಾಜ್, ಹೊಲದಗದ್ದೆ ಗಿರೀಶ್, ಹುಣಸೆಮಕ್ಕಿ ಗಣೇಶ್, ಎಂ.ಡಿ. ರಮೇಶ್, ಜಯರಾಜ್ ಅರಸ್, ರವಿ ನಿಡುವಾಳೆ ಮತ್ತಿತರರು ಇದ್ದರು. ಓದಿ : ಮಹಾನಗರ ಪಾಲಿಕೆ ಟೌನ್ ಪ್ಲಾನಿಂಗ್ ನ ಜಂಟಿ ನಿರ್ದೇಶಕ ಜಯರಾಜ್ ಅವರ ಮನೆ ಮೇಲೆ ಎಸಿಬಿ ದಾಳಿ