Advertisement

ಯಾರೇ ಹುಟ್ಟಿ ಬಂದರೂ 370ನೇ ವಿಧಿ ಮರು ಜಾರಿ ಅಸಾಧ್ಯ : ರವಿ

10:23 PM Jun 16, 2021 | Team Udayavani

ಚಿಕ್ಕಮಗಳೂರು: ಸಂವಿಧಾನದ 370ನೇ ವಿ ಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಪ್ರತ್ಯೇಕ ಸ್ಥಾನಮಾನವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದು ಹಾಕಿದ್ದು ಮತ್ತೆ ಯಾರೇ ಹುಟ್ಟಿ ಬಂದರೂ ದನ್ನು ಮರು ಜಾರಿ ಸಾಧ್ಯವಿಲ್ಲ.

Advertisement

ಒಂದು ವೇಳೆ ತರಲು ಪ್ರಯತ್ನಿಸಿದರೆ ಅವರು ಇತಿಹಾಸ ಪುಟದಲ್ಲಿ ಕಳೆದು ಹೋಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಕಾಂಗ್ರೆಸ್‌ ಪದೇ ಪದೇ ರಾಷ್ಟ್ರೀಯ ವಿರೋ ಧಿ ನಿಲುವು ತೆಗೆದುಕೊಳ್ಳುವುದು ಈ ದೇಶದ ದುರಂತ.

370ನೇ ವಿಧಿ  ತೆರವುಗೊಳಿಸಿದ್ದು ರಾಷ್ಟ್ರೀಯ ಪ್ರಮಾದ ಎಂದು ಕಾಂಗ್ರೆಸ್‌ ಭಾವಿಸಿದಂತಿದೆ. ದಿಗ್ವಿಜಯ್‌ ಸಿಂಗ್‌ ಅವರದ್ದು ಪಾಕಿಸ್ತಾನೀಯರನ್ನು ಸಂತೋಷಪಡಿಸುವ ಹೇಳಿಕೆ. ಅವರು ಭಾರತದಲ್ಲಿ ಇರುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.

ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ್ದರಿಂದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನ ಜಮ್ಮು-ಕಾಶ್ಮೀರದಲ್ಲಿ ಅನುಷ್ಠಾನಗೊಂಡಿರಲಿಲ್ಲ. ಭ್ರಷ್ಟಾಚಾರ, ಭಯೋತ್ಪಾದನೆಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ 370ನೇ ವಿ ಧಿ ರದ್ದುಪಡಿಸುವ ಕೆಲಸ ಮಾಡಿತು.

ಇದರಿಂದ ಅಲ್ಲಿಯ ಜನ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. 370ನೇ ವಿಧಿ  ರದ್ದುಪಡಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ದೇಶ ವಿರೋಧಿ  ಚಟುವಟಿಕೆ ಮಾಡುವವರು ಬಿಲ ಸೇರಿದ್ದು ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಅವರನ್ನು ಹೊರ ತರುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಿಂದ ದೇಶದಲ್ಲಿ ಇಂಧನ ಬೆಲೆ ಏರಿಕೆಗೆ ಕಾರಣ. ಅಲ್ಲದೆ ಹಿಂದಿನ ಕಾಂಗ್ರೆಸ್‌ ಸರ್ಕಾರ 2006-07ರಲ್ಲಿ ಇಂಧನ ಬಾಂಡ್‌ ತಂದು 12 ವರ್ಷ ಬಡ್ಡಿಸಹಿತ ಸಾಲ ಪಾವತಿ ಮಾಡದೇ ಇದುದ್ದರಿಂದ ಅದನ್ನು ತೀರಿಸುವ ಪಾಪ ಕರ್ಮ ನಮಗೆ ಬಂದಿದೆ.

ಇಂಧನ ಬೆಲೆ ಏರಿಕೆ ವಿರೋಧಿ ಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುವ ಬದಲು ಕಾಂಗ್ರೆಸ್‌ ಅ ಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯ ವಿ ಧಿಸುವ ತೆರಿಗೆ ಇಳಿಸಿ ಬೇರೆ ರಾಜ್ಯಗಳಿಗೂ ಮಾದರಿಯಾಗಲಿ. ಆಗ ಅವರ ಹೋರಾಟಕ್ಕೆ ಬದ್ಧತೆ ಬರಲಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next