Advertisement

ಜನರ ಬದುಕು ಹೈರಾಣಾಗಿಸಿದ ಸರ್ಕಾರ: ಮೀಗಾ

10:08 PM Jun 15, 2021 | Team Udayavani

ಶೃಂಗೇರಿ: ತೈಲೋತ್ಪನ್ನಗಳ ಮೇಲೆ ರಾಜ್ಯ ಹಾಗೂ ಕೇಂದ್ರ ಸರಕಾರ ಹೆಚ್ಚು ತೆರಿಗೆ ವಿಧಿ ಸಿ ಜನಸಾಮಾನ್ಯರ ಬದುಕು ಹೈರಾಣಾಗುವಂತೆ ಮಾಡಿದೆ ಎಂದು ಕಿಸಾನ್‌ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಸಚಿನ್‌ ಮೀಗಾ ಹೇಳಿದರು.

Advertisement

ಬೇಗಾರಿನ ಪೆಟ್ರೋಲ್‌ ಬಂಕ್‌ ಬಳಿ ಸೋಮವಾರ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಮೀಗಾ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು.

ದಿನ ನಿತ್ಯದ ವಸ್ತು ಬೆಲೆ ಗಗನಕ್ಕೇರಿದೆ. ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌ ಸರಕಾರದ ಮೇಲೆ ಒತ್ತಡ ಹೇರಿ ತೈಲ ಬೆಲೆ ಇಳಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ವ್ಯಾಕ್ಸಿನ್‌ ಕೊರತೆ ತೀವ್ರವಾಗಿದ್ದು, ಗ್ರಾಮ- ಗ್ರಾಮದಲ್ಲಿ ವ್ಯಾಕ್ಸಿನ್‌ ಹಾಕಬೇಕಿದೆ.

ನನ್ನ ಸ್ವಂತ ಗ್ರಾಮ ಮೀಗಾದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲು ನಾನು ಆಸಕ್ತಿ ಹೊಂದಿದ್ದು,ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದರು. ಬೇಗಾರ್‌ ಗ್ರಾಪಂ ಅಧ್ಯಕ್ಷ ಕೇಶವ್‌, ಸದಸ್ಯ ಲಕ್ಷಿ¾àಶ, ಕಾಂಗ್ರೆಸ್‌ ಮುಖಂಡರಾದ ನಟರಾಜ್‌, ಗೋಪಾಲ ನಾಯ್ಕ, ಸುಂದರೇಶ್‌,ಪ್ರಸನ್ನ, ಮಹೇಶ್‌, ಪ್ರದೀಪ್‌, ಶಶಿ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next