Advertisement

ಒತ್ತಡದ ಮನಸ್ಸಿಗೆ ಸಂಗೀತದಿಂದ ಶಾಂತಿ-ನೆಮ್ಮದಿ: ಸಾಧ್ವಿನಿ

10:29 PM Jun 11, 2021 | Team Udayavani |

ಬಾಳೆಹೊನ್ನೂರು: ಇಂದಿನ ದಿನಗಳಲ್ಲಿ ಇರುವ ಹಲವು ಒತ್ತಡಗಳ ಮನಸ್ಸಿನ ನಿವಾರಣೆಗೆ ಸಂಗೀತದಿಂದ ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಗಾಯಕಿ ಸಾಧ್ವಿನಿ ಕೊಪ್ಪ ಹೇಳಿದರು.

Advertisement

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್‌ ಸಂಸ್ಥೆಯ ವತಿಯಿಂದ ಕೊರೊನಾ ಸಂಕಷ್ಟದ ಒತ್ತಡ ನಿರ್ವಹಣೆಗೆ ಹಲವು ಸೂತ್ರಗಳು ಮಾಲಿಕೆಯಡಿಯಲ್ಲಿ ಆಯೋಜಿಸಿದ್ದ ವರ್ಚುವಲ್‌ ಗಾನಸುಧೆ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತ ಎಂತಹ ಮನಸ್ಸುಗಳನ್ನು ಸಹ ತಲುಪಲಿದ್ದು, ಎಂತಹ ಬೇಸರ, ಕಷ್ಟಕರ ಸಮಯದಲ್ಲಿದ್ದರೂ ಸಹ ಒಂದು ಕ್ಷಣ ಸಂಗೀತವನ್ನು ಆಲಿಸಿದರೆ ಮನಸ್ಸು ತನ್ನೆಲ್ಲಾ ದುಃಖಗಳನ್ನು ಕಳೆದುಕೊಂಡು ಸಮಾಧಾನ ಹೊಂದಿದೆ. ಪ್ರಸ್ತುತ ಇರುವ ಕೊರೊನಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲ ವರ್ಗದ ಜನರು ಸಹ ಮಾನಸಿಕ ಒತ್ತಡದಲ್ಲಿದ್ದು, ಇಂತಹ ಸಮಯದಲ್ಲಿ ಜೇಸಿ ಸಂಸ್ಥೆಯು ಒತ್ತಡ ನಿವಾರಣೆಗೆ ಹಾಗೂ ಮನಸ್ಸಿನ ಮುದಕ್ಕಾಗಿ ವಿಭಿನ್ನವಾಗಿ ವರ್ಚುವಲ್‌ ರಸಮಂಜರಿ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಜೇಸಿ ಅಧ್ಯಕ್ಷ ಎಸ್‌.ಎಲ್‌.ಚೇತನ್‌ ಮಾತನಾಡಿ, ಸಂಗೀತವೆಂದರೆ ಒಂದು ವಿಶಿಷ್ಟ ಕಲೆಯಾಗಿದ್ದು, ಸಂಗೀತಕ್ಕೆ ಮಾರು ಹೋಗದವರೇ ಇಡೀ ವಿಶ್ವದಲ್ಲಿಲ್ಲ. ಸಂಗೀತವು ಪ್ರತಿಯೊಬ್ಬರ ಜೀವನಾಡಿಯಾಗಿದೆ. ಸಂಗೀತವು ಪ್ರತಿಯೊಬ್ಬರ ಜೀವನಕ್ಕೆ ಒಂದು ಹೊಸತನವನ್ನು ನೀಡಲಿದೆ ಎಂದರು.

ಕಾರ್ಯಕ್ರಮ ಸಂಯೋಜಕ ಚೈತನ್ಯ ವೆಂಕಿ ಮಾತನಾಡಿ, ಕೊರೊನಾದ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಮೂಲಕ ಮಲೆನಾಡಿನ ಗಾಯಕರನ್ನು ಒಗ್ಗೂಡಿಸಿ ರಸದೌತಣ ನೀಡುವ ವಿಭಿನ್ನ ಪರಿಕಲ್ಪನೆಯನ್ನು ಮೊದಲ ಬಾರಿ ಹೊಂದಿ ಸಂಗೀತದ ಘಮಲನ್ನು ಎಲ್ಲೆಡೆ ಹರಡುವುದರೊಂದಿಗೆ ಕೊರೊನಾದ ನೋವನ್ನು ಮರೆಸುವ ಪ್ರಯತ್ನ ಮಾಡಲಾಗಿದೆ ಎಂದರು.

Advertisement

ವರ್ಚುವಲ್‌ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಯಕಿ ಸಾಕ್ಷಿ ಸದಾಶಿವ “ಗಣನಾಯಕಾಯ ಗಣ ದೈವತಾಯ’ ಗಣಪತಿ ಗೀತೆಯೊಂದಿಗೆ ಚಾಲನೆ ನೀಡಿದ್ದು, ಗಾಯಕಿ ಸಾಧಿ Ìನಿ ಕೊಪ್ಪ “ಕರುಣಾಳು ಬಾ ಬೆಳಕೆ ಮಸುಕಿನಲಿ ಮಬ್ಬಿನಲಿ, ನೇಸರ ನೋಡು ನೇಸರಾ ನೋಡು’ ಗೀತೆಯನ್ನು ಹಾಡಿದರು.

ಹಿರಿಯ ವಕೀಲ ಎಸ್‌.ಎಸ್‌.ವೆಂಕಟೇಶ್‌ “ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ’ ಪರಿಸರ ಗೀತೆಯನ್ನು ಹಾಡಿ ಪರಿಸರ ಜಾಗೃತಿ ಮೂಡಿಸಿದರು. ಗಾಯಕಿ ಎನ್‌.ಆರ್‌. ಪುರದ ಭಾಗ್ಯಶ್ರೀ ಗೌಡ “ದೀಪವು ನಿನ್ನದೆ ಗಾಳಿಯು ನಿನ್ನದೆ’, “ಈ ಹಸಿರು ಸಿರಿಯಲಿ ಮನಸು ಮೆರೆಯಲಿ’, “ಜೀವ ವೀಣೆ ನೀಡು ಮಿಡಿತದ ಸಂಗೀತ’ ಗೀತೆ ಹಾಡಿ ರಂಜಿಸಿದರು.

ಗಾಯಕಿ ಕೊಪ್ಪದ ಡಾ| ಪ್ರಿಯಾಂಕ ಎಸ್‌. ರಾಜ್‌ “ಸೋಲೆ ಇಲ್ಲ ನಿನ್ನ ಹಾಡು ಹಾಡುವಾಗ’, “ದೇವರ ಆಟ ಬಲ್ಲವರಾರರು’, “ಜೊತೆಯಲಿ ಜೊತೆ ಜೊತೆಯಲಿ’ ಗೀತೆ, ಸೀತೂರಿನ ಗಾಯಕಿ ರಂಗಿಣಿ ರಾವ್‌ “ಹಳ್ಳಿಗೆ ಹೋಗುವ’ ಎಂಬ ಜನಪದ ಶೈಲಿಯ ಹಾಡು, “ದೂರದಿಂದ ಬಂದಂತ ಸುಂದರಾಂಗ ಜಾಣ’ ಹಾಡು, ಚಿಕ್ಕಮಗಳೂರಿನ ಸಾಹಿತಿ ಎಚ್‌. ಎಂ. ನಾಗರಾಜ್‌ ರಾವ್‌ ಕಲ್ಕಟ್ಟೆ “ನಮ್ಮೂರ ಮಂದಾರ ಹೂವೇ’ ಗೀತೆಯನ್ನು ಹಾಡಿ ಗಮನ ಸೆಳೆದರು.

ವರ್ಚುವಲ್‌ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಚ್‌.ಪಿ. ಕಾರ್ತಿಕ್‌, ಕಾರ್ಯಕ್ರಮ ನಿರ್ದೇಶಕ ಕೆ. ಪ್ರಶಾಂತ್‌ಕುಮಾರ್‌, ಕಾರ್ಯಕ್ರಮ ನಿರ್ವಾಹಕ ಕೆ.ಎಂ. ರಾಘವೇಂದ್ರ, ವಿ. ಅಶೋಕ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next