ಕೊಟ್ಟಿಗೆಹಾರ: ಕಳೆದ ನಾಲ್ಕೈದು ದಿನಗಳಿಂದ ಬಣಕಲ್‌ನ ಸಬ್ಲಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಅಕ್ಕಪಕ್ಕದ ಗ್ರಾಮಗಳಾದ ಚಕ್ಕೋಡು, ಹೆಬ್ರಿಗೆ, ಕಂಬಳಕಾಡು, ಚನ್ನಹಡ್ಲು, ಅತ್ತಿಗೆರೆ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು, ಕಾಡಾನೆ ಓಡಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೂ, ಕಾಡಾನೆಗಳು ಹಜ್ಜೆ ಕೀಳುತ್ತಿಲ್ಲ.
ಹಲವು ಕಾ
ಫಿ ತೋಟಗಳಲ್ಲಿ ಓಡಾಡಿಕೊಂಡು ಹಾನಿ ಮಾಡಿರುವ ನಾಲ್ಕು ಕಾಡಾನೆಗಳ ಹಿಂಡು, ಕಂಬಳಕಾಡು ತೋಟದಲ್ಲಿ ಬೀಡು ಬಿಟ್ಟಿದೆ. ಬುಧವಾರ ಅತ್ತಿಗೆರೆ ಭಾಗದ ತೋಟದಲ್ಲಿ ಬೀಡು ಬಿಟ್ಟಿದೆ. ಗ್ರಾಮಸ್ಥರು, ಕೂಲಿ ಕಾರ್ಮಿಕರು ಕಾಡಾನೆ ಭಯದಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ದಿನಗಳ ಹಿಂದೆ ಅರಣ್ಯ ಸಿಬ್ಬಂದಿಗೆ ಕಾಡಾನೆ ಓಡಿಸಲು ಮಳೆ ಅಡ್ಡಿಯಾಗಿತ್ತು. ನಂತರ ಮಳೆ ಬಿಡುವು ಕೊಟ್ಟಿತ್ತು.
ಆದರೂ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಲ್ಲಿ ಕಾಡಾನೆಗಳ ಹಿಂಡು ಮಾತ್ರ ಊರು ಬಿಟ್ಟು ಕಾಡಿಗೆ ಹೋಗದೇ ಅರಣ್ಯ ಸಿಬ್ಬಂದಿಯನ್ನು ಫಜೀತಿಗೆ ಸಿಕ್ಕಿಸಿದೆ. ದೈತ್ಯಾಕಾರದ ಮೂರು ಕಾಡಾನೆಗಳು ಪಟಾಕಿ ಶಬ್ದಕ್ಕೂ ಭಯ ಪಡದೇ ಹಲವು ಗ್ರಾಮಗಳ ಸುತ್ತಮುತ್ತ ಸುತ್ತುತ್ತಿರುವುದರಿಂದ ಬೆಳೆ ಹಾನಿಯ ಜತೆಗೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಡಾನೆ ಓಡಿಸಲು ಒತ್ತಾಯ: ಸಬ್ಲಿ, ಚಕ್ಕೋಡು, ಹಳ್ಳಿಕೆರೆ, ಚನ್ನಹಡ್ಲು, ಕಂಬಳಕಾಡು, ಅತ್ತಿಗೆರೆ ಭಾಗದಲ್ಲಿ ಈಗಾಗಲೇ ಅಪಾರ ಬೆಳೆ ಹಾನಿ ಸಂಭವಿಸಿದೆ. ಕಾಡಾನೆಗಳ ಹಿಂಡು ಅತ್ತಿಂದಿತ್ತ ಓಡಾಡುತ್ತಿರುವುದರಿಂದ ಗಾಬರಿಗೊಂಡಿವೆ. ಇದರಿಂದ ಕೂಲಿ ಕಾರ್ಮಿಕರ ತೋಟದ ಕೆಲಸಕ್ಕೆ ತೊಂದರೆಯಾಗಿದೆ. ಕೂಡಲೇ ಸಂಬಂಧಿ ಸಿದ ಹಿರಿಯ ಅರಣ್ಯ ಅಧಿ ಕಾರಿಗಳು ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು.
ಇಲ್ಲವಾದರೆ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಮೂಡಿಗೆರೆ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಾಲಕೃಷ್ಣ ಬಾಳೂರು ಒತ್ತಾಯಿಸಿದ್ದಾರೆ.