Advertisement

ಕೊರೊನಾ ಸೋಂಕು ನಿರ್ಮೂಲನೆಗೆ ಸಹಕರಿಸಿ

10:44 PM Jun 08, 2021 | Team Udayavani |

ಚಿತ್ರದುರ್ಗ: ಕೋವಿಡ್‌ ಸೋಂಕಿನಿಂದ ಮುಕ್ತಿ ಪಡೆಯುವ ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದವರು ಇಂದು ಮೊದಲ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ, ಅಮಾಯಕರು ಸಾಯುತ್ತಿದ್ದಾರೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ಜೆಸಿಆರ್‌ ಬಡಾವಣೆಯ ಸರ್ಕಾರಿ ಶಾಲೆ ಆವರಣದಲ್ಲಿ ಭಾನುವಾರ ಅಖೀಲ ಭಾರತ ವೀರಶೆ„ವ ಮಹಾಸಭಾದಿಂದ ಹಮ್ಮಿಕೊಂಡಿದ್ದ ಕೋವಿಡ್‌ ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲರೂ ಕೊರೊನಾ ಲಸಿಕೆ ಪಡೆದುಕೊಳ್ಳುವ ಮೂಲಕ ಕೋವಿಡ್‌ ಮುಕ್ತರಾಗಲು ಸಹಕಾರ ನೀಡಬೇಕು. ಬದಲಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸಬಾರದು ಎಂದರು.

ಆರಂಭದಲ್ಲಿ ದೇಶಾದ್ಯಂತ ಕೋವಿಡ್‌ ಲಸಿಕೆ ವಿತರಣೆಗೆ ಮುಂದಾದಾಗ ಅನೇಕರು ಇದರಿಂದ ನಪುಂಸಕತ್ವ ಉಂಟಾಗುತ್ತದೆ, ಹೆಣ್ಣುಮಕ್ಕಳಿಗೆ ಸಂತಾನ ಆಗುವುದಿಲ್ಲ ಎಂದು ವದಂತಿ ಹಬ್ಬಿಸಲಾಗಿತ್ತು. ಆದರೆ ಇತ್ತೀಚೆಗೆ ಹೆಚ್ಚು ಹೆಚ್ಚು ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಏಕಕಾಲದಲ್ಲಿ ಹೆಚ್ಚು ಜನ ಲಸಿಕೆ ಪಡೆಯಲು ಬರುತ್ತಿರುವುದರಿಂದ ಲಸಿಕೆ ಸರಬರಾಜಿನಲ್ಲಿ ಕೊಂಚ ವ್ಯತ್ಯಯವಾಗುತ್ತಿದೆ. ಕೊರೊನಾ ಮೊದಲ ಅಲೆಯಲ್ಲಿ ಆಕ್ಸಿಜನ್‌ ಅಗತ್ಯ ಅಷ್ಟಾಗಿ ಕಂಡುಬರಲಿಲ್ಲ. ಈಗ ಸಾಕಷ್ಟು ಬೇಡಿಕೆ ಇದೆ. ಆದಾಗ್ಯೂ ಆಕ್ಸಿಜನ್‌ ಪೂರೈಸಲಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಅನಗತ್ಯವಾಗಿ ಈ ಕುರಿತು ಟೀಕೆ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ನಗರದ ವಿವಿಧೆಡೆಗಳಲ್ಲಿ ಲಸಿಕಾ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ವಿವಿಧ ಬಡಾವಣೆಗಳಲ್ಲಿಯೂ ಲಸಿಕೆ ಹಾಕಲಾಗುತ್ತದೆ. ಯಾರು ಸಹ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು ಎಂದ ಶಾಸಕರು, ಯಾರಿಗಾದರೂ ಕೋವಿಡ್‌ ಲಕ್ಷಣ ಕಂಡು ಬಂದಲ್ಲಿ ಆತಂಕಪಟ್ಟುಕೊಳ್ಳದೆ ತಮಟಕಲ್ಲು ರಸ್ತೆಯಲ್ಲಿರುವ ಕೋವಿಡ್‌ ಕೇಂದ್ರಕ್ಕೆ ದಾಖಲಾಗಬೇಕು.

Advertisement

ಅಲ್ಲಿ ಅತ್ಯುತ್ತಮ ವ್ಯವಸ್ಥೆ ಮಾಡಲಾಗಿದೆ ಎಂದರು. ಕಾಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಟಿ. ಬದರಿನಾಥ್‌, ಸದಸ್ಯರಾದ ಶ್ರಣೀಕ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಗಿರೀಶ್‌, ಡಾ| ಕುಮಾರಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ಕೆಇಬಿ ಷಣ್ಮುಖಪ್ಪ, ನಗರಸಭಾ ಸದಸ್ಯರಾದ ಅನುರಾಧ ರವಿಕುಮಾರ್‌, ರೋಹಿಣಿ ನವೀನ್‌, ಸುರೇಶ್‌, ರವಿಕುಮಾರ್‌, ವೇದಾ, ಮಹಡಿ ಶಿವಮೂರ್ತಿ, ಮಹೇಶ್‌, ದಿವಾಕರ, ಆನಂದ, ಶಶಿಧರ್‌, ಸಿದ್ದಪ್ಪ, ಗಂಗಾಧರ ಮತ್ತಿತರರು ಭಾಗವಹಿಸಿದ್ದರು. ಸುಮಾರು 300ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next