Advertisement

ರಂಭಾಪುರಿ ಪೀಠಕ್ಕೆ ಎಸಿ ಭೇಟಿ

06:18 PM Jan 29, 2021 | Team Udayavani |

ಬಾಳೆಹೊನ್ನೂರು: ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸತ್ಯದ ತಳಹದಿಯ ಮೇಲೆ ಸುಸಂಸ್ಕೃತ ಜೀವನ ನಿರ್ಮಾಣಗೊಳ್ಳಲು ಸಾಧ್ಯ.
ಮನುಷ್ಯನಿಗೆ ಬರುವ ಕಷ್ಟಗಳು ಸುಖಾಗಮನದ ಹೆಗ್ಗುರುತು ಎಂದು ಶ್ರೀ ಡಾ| ಪ್ರಸನ್ನ ವೀರಸೋಮೇಶ್ವರ
ಜಗದ್ಗುರುಗಳು ತಿಳಿಸಿದರು.

Advertisement

ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌. ಪುರ ತಾಲೂಕು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಪೌರ್ಣಿಮಾ ಧರ್ಮ ಸಮಾರಂಭದ
ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನದಿ ದಾಟಲು ನೌಕೆ ಬೇಕು. ಭವ ಸಾಗರ ದಾಟಲು ಗುರು ಬೇಕು. ಅರಿವು, ಆದರ್ಶಗಳಿಂದ ಬದುಕು ಶ್ರೀಮಂತಗೊಳ್ಳಬೇಕಾಗಿದೆ. ಇಂದು
ಎಲ್ಲ ರಂಗಗಳಲ್ಲಿ ನಡೆದಿರುವ ಸಂಘರ್ಷಗಳಿಗೆ ಅರಿವಿನ ಕೊರತೆಯೇ ಕಾರಣವೆಂದರೆ ತಪ್ಪಾಗದು ಎಂದರು.
ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀ, ಹಂಪಸಾಗರದ ಶಿವಲಿಂಗ ರುದ್ರಮುನಿ ಶ್ರೀ, ನೆಗಳೂರು ಗುರುಶಾಂತೇಶ್ವರ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಹುಣ್ಣಿಮೆ ಅಂಗವಾಗಿ ಶ್ರೀ ರಂಭಾಪುರಿ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನಡೆಯಿತು. ತರೀಕೆರೆ ಉಪವಿಭಾಗಾಧಿ ಕಾರಿ ರೇಣುಕಪ್ರಸಾದ್‌ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.

ಬಾಳೆಹೊನ್ನೂರು ಉಪ-ತಹಶೀಲ್ದಾರ್‌ ನಾಗೇಂದ್ರ, ರಾಜಸ್ವ ನಿರೀಕ್ಷಕ ಎಚ್‌. ಮಂಜುನಾಥ್‌, ಗ್ರಾಮ ಲೆಕ್ಕಿಗ ರಜತ್‌ ಮತ್ತಿತರರು ಇದ್ದರು.

Advertisement

ಓದಿ : ಮಹಿಳಾ ದೌರ್ಜನ್ಯ ನಿಲ್ಲದಿರುವುದು ಆತಂಕಕಾರಿ

Advertisement

Udayavani is now on Telegram. Click here to join our channel and stay updated with the latest news.

Next