ಚಿಕ್ಕಮಗಳೂರು: ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನು ವಿ ಧಿಸಿದೆ. ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿ ಸಿದೆ. ಜನರು ಆರ್ಥಿಕವಾಗಿ ಬಳಲಿದ್ದಾರೆ. ಕೋವಿಡ್ ಸೋಂಕಿನಿಂದ ಶಾಲಾ- ಕಾಲೇಜುಗಳನ್ನು ಮುಚ್ಚಲಾಗಿದ್ದು, ಶೈಕ್ಷಣಿಕ ಚಟುವಟಿಕೆ ನಿರ್ಬಂಧಿಸಿ ಆನ್‌ಲೈನ್ ಪಾಠ- ಪ್ರವಚನ ನಡೆಸಲಾಗುತ್ತಿದೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಯನ್ನು ಜೂನ್ ತಿಂಗಳಿಂದ ಆರಂಭಿಸಲಾಗುತ್ತಿದ್ದು ಮಕ್ಕಳನ್ನು ದಾಖಲಿಸುವಂತೆ ಪೋಷಕರಿಗೆ ವಾಟ್ಸ್‌ಆ್ಯಪ್ ಮೆಸೇಜ್ ಕಳಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೋವಿಡ್ ಸೋಂಕಿನಿಂದ 2 ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆ ಹಳಿ ತಪ್ಪಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ದೂಡಿದೆ. ದುಡಿಮೆ ಇಲ್ಲದೆ ವಿದ್ಯಾರ್ಥಿಗಳ ಪೋಷಕರು ಮನೆಯಲ್ಲೇ ದಿನ ದೂಡುವಂತಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಜೂನ್ ತಿಂಗಳಿಂದ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು. ಶಾಲಾ ಶುಲ್ಕವನ್ನು ಪಾವತಿಸುವಂತೆ ಪೋಷಕರಿಗೆ ಮೆಸೇಜ್‌ಗಳನ್ನು ಕಳಿಸುತ್ತಿದ್ದು, ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಶುಲ್ಕ ಪಾವತಿಸುವಂತೆ ಒತ್ತಡ ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. 2ನೇ ತರಗತಿ ವಿದ್ಯಾರ್ಥಿಗಳ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಯನ್ನು ಲೈವ್ ಒನ್ ಲೈವ್ ತರಗತಿಗಳನ್ನು ಆರಂಭಿಸುತ್ತಿದ್ದು, ಹಾಗೆಯೇ 2021-22ನೇ ಸಾಲಿನ ಶಾಲಾ ದಾಖಲಾತಿಯನ್ನು ಆರಂಭಿಸಿದ್ದು, ಜೂ.15ರೊಳಗೆ ದಾಖಲಾಗುವಂತೆ ವಾಟ್ಸ್ ಆ್ಯಪ್ ಮೆಸೇಜ್‌ನಲ್ಲಿ ತಿಳಿಸಿದ್ದಾರೆ.
ಅದೇ ಶಾಲೆಯಲ್ಲಿ ಮುಂದುವರಿಯುತ್ತಿರುವ ವಿದ್ಯಾರ್ಥಿಗಳು 20 ಸಾವಿರ ರೂ. ಪಾವತಿ ಮಾಡುವಂತೆ ತಿಳಿಸಿರುವ ಕೆಲವು ಶಾಲಾ ಆಡಳಿತ ಮಂಡಳಿ ಬ್ಯಾಂಕ್‌ನಲ್ಲಿ ಹಣ ಪಾವತಿ ಮಾಡಿ ಬ್ಯಾಂಕಿನ ಚಲನ್ ಅನ್ನು ಶಾಲಾ ಮಂಡಳಿ ನೀಡಿರುವ ಶಾಲಾ ಶಿಕ್ಷಕರ ವಾಟ್ಸ್ ಆ್ಯಪ್ ಗೆ ಕಳಿಸುವಂತೆ ಸೂಚಿಸಿದ್ದು, 2021-22ನೇ ಸಾಲಿನ 1ನೇ ಕಂತು ಶುಲ್ಕವನ್ನು ಪಾವತಿಸುವಂತೆ ತಿಳಿಸಿ ಮಕ್ಕಳ ಪೋಷಕರಿಗೆ ಮೆಸೇಜ್‌ಗಳನ್ನು ಕಳಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳನ್ನು ಆರಂಭಿಸುವಂತೆ ಯಾವುದೇ ಆದೇಶ ನೀಡಿಲ್ಲ, ಆದರೂ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಜೂನ್ ತಿಂಗಳಿಂದ ಆರಂಭಿಸುವುದಾಗಿ ಮತ್ತು ದಾಖಲಾತಿ ಮಾಡಿಕೊಳ್ಳುವುದಾಗಿ ಹಾಗೂ ಮೊದಲ ಕಂತಿನ ಶುಲ್ಕವನ್ನು ಪಾವತಿಸುವಂತೆ ಸಂದೇಶಗಳನ್ನು ಕಳಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ನಿಧನ ವಾರ್ತೆ ಸಾರ್ವಜನಿಕರು ಮತ್ತು ಪೋಷಕರು ಪ್ರಶ್ನಿಸಿದ್ದಾರೆ.