Advertisement

ಲಸಿಕೆ ನೀಡುವಲ್ಲಿ ಕೇಂದ್ರ-ರಾಜ್ಯ ಸರಕಾರ ವಿಫಲ

11:00 PM Jun 03, 2021 | Team Udayavani |

ಕಡೂರು: ಕೊರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಲಸಿಕೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರತ್‌ ಕೃಷ್ಣಮೂರ್ತಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ವಿಷಯದಲ್ಲಿ ದಿನಕ್ಕೊಂದು, ವಾರಕ್ಕೊಂದು ಹೊಸ ಹೊಸ ಮಾರ್ಗಸೂಚಿಗಳನ್ನು ಸರಕಾರ ಆದೇಶಿಸುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಮೊದಲನೇ ಮತ್ತು ಎರಡನೇ ಡೋಸ್‌ ನಡುವಿನ ಅಂತರ 28 ದಿನಗಳಾಗಿತ್ತು. ನಂತರ ಅದು 45 ದಿನ, 84 ಇದೀಗ 90 ದಿನಗಳ ಅಂತರಕ್ಕೆ ಬದಲಾಗುತ್ತಾ ಬಂದಿದೆ. ಆದರೂ ಸಿಗುತ್ತಿಲ್ಲ ಎಂದು ದೂರಿದರು.

ಲಸಿಕೆ ನೀಡುವ ಕಾರ್ಯವು ಮಂದಗತಿಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ಲಸಿಕೆ ನೀಡುವಲ್ಲಿ ವಿಳಂಬವಾಗುತ್ತಿದೆ. ಆದ್ಯತೆ ಪಟ್ಟಿ ತಯಾರಿಸಿಕೊಂಡು ನೀಡುತ್ತಿದ್ದೇವೆ ಎಂಬ ಮಾತು ಕೇಳಿ ಬರುತ್ತಿದೆ. ಯಾರ್ಯಾರಿಗೆ ಆದ್ಯತೆ ಎಂಬ ಮಾಹಿತಿ ಲಭ್ಯವಾಗುತ್ತಿಲ್ಲ. ಇದನ್ನು ಆಡಳಿತವು ಸ್ಪಷ್ಟವಾಗಿ ತಿಳಿಸಬೇಕು. ಲಸಿಕೆ ಅನುಷ್ಠಾನವು ಪಾರದರ್ಶಕತೆಯಿಂದ ಕೂಡಿರಬೇಕು.

ತಾಲೂಕಿನಲ್ಲಿ ಸೋಂಕಿತರ ಮತ್ತು ಸಾವಿಗೀಡಾದವರ ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತಿರುವಂತೆ ಲಸಿಕೆ ಪಡೆದವರ ವಿವರಗಳನ್ನು ನಿತ್ಯ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಕೋವಿಡ್‌-19ರ 3ನೇ ಅಲೆಯಿಂದ ಮಕ್ಕಳಿಗೆ ಅಪಾಯ ಎಂಬ ಮುನ್ಸೂಚನೆಗಳು ಬರುತ್ತಿದ್ದು, 18 ವರ್ಷ ಕೆಳಗಿನವರಿಗೆ ಲಸಿಕೆ ನೀಡುವ ವಿಚಾರದಲ್ಲಿ ಸರಕಾರದ ಮಾರ್ಗಸೂಚಿಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಪುರಸಭೆ ಸದಸ್ಯ ತೋಟದ ಮನೆ ಮೋಹನ್‌ ಮಾತನಾಡಿ, ಪುರಸಭೆ ಸೇರಿದಂತೆ ಇತರೆ ಜನಪ್ರತಿನಿಧಿಗಳಿಗೂ ಸಹ ಲಸಿಕೆ ನೀಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಪುರಸಭೆ ಸದಸ್ಯೆ ಜ್ಯೋತಿ ಆನಂದ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಗಾಯಿತ್ರಿ ಕಿರಣ್‌, ಎಂ.ಸೋಮಶೇಖರ್‌, ಮಂಜುನಾಥ್‌, ಶರತ್‌ ಯಾದವ್‌, ನಾಗರಾಜ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next