Advertisement
ಮತ್ತೂಂದು ಕಡೆ ಮೊದಲ ಡೋಸ್ ಪಡೆದುಕೊಳ್ಳಲು ಕಾತುರಾಗಿದ್ದಾರೆ. ಆದರೆ, ಬೇಡಿಕೆಗೆ ಅನುಗುಣವಾಗಿ ಸರ್ಕಾರ ವ್ಯಾಕ್ಸಿನ್ ಪೂರೈಕೆ ಮಾಡದಿರುವುದರಿಂದ ವ್ಯಾಕ್ಸಿನ್ ವಿತರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನ್ ನೀಡಲು 103 ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲಾಸ್ಪತ್ರೆ, 6 ತಾಲೂಕು ಆಸ್ಪತ್ರೆ, 5 ಸಮುದಾಯ ಕೇಂದ್ರ ಆಸ್ಪತ್ರೆ, 89 ಪ್ರಾಥಮಿಕ ಆರೋಗ್ಯ ಕೇಂದ್ರ, 2 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಕೇಂದ್ರ ತೆರೆದು ಲಸಿಕೆ ವಿತರಣೆ ಮಾಡಲಾಗುತ್ತಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
Related Articles
Advertisement
ಗ್ರಾಮೀಣ ಪ್ರದೇಶದಲ್ಲಿ 745 ನಗರದಲ್ಲಿ 107 ಮಂದಿ, 100 ಮತ್ತು ಅದಕ್ಕೂ ಮೇಲ್ಪಟ್ಟವರಲ್ಲಿ 409 ಜನರಿದ್ದು, ಗ್ರಾಮೀಣರಲ್ಲಿ 345 ಜನರು, ನಗರದಲ್ಲಿ 64 ಮಂದಿ ನೂರನೇ ವಸಂತ ದಾಟಿದವರು ಇದ್ದಾರೆ. ಇವರು ಸೇರಿದಂತೆ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ವಿತರಣೆ ಮಾಡಬೇಕಿದೆ. ಸದ್ಯ ಜಿಲ್ಲೆಯಲ್ಲಿ (ಮೇ.28) 2,13,522 ಮಂದಿ ಮೊದಲಹಂತದ ಲಸಿಕೆಯನ್ನು ಪಡೆದುಕೊಂಡಿದ್ದಾರೆ. 53,790ರಷ್ಟು ಮಂದಿ 2ನೇ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. ಆರೋಗ್ಯ ಇಲಾಖೆ ವಾರಿಯರ್ ಮೊದಲ ಡೋಸ್ 9776 ಎರಡನೇ ಡೋಸ್‌ನ್ನು 7454 ಮಂದಿ ಪಡೆದುಕೊಂಡಿ ದ್ದಾರೆ.
ಫ್ರಂಟ್‌ಲೆçನ್ ವರ್ಕರ್ಸ್ ಮೊದಲ ಡೋಸ್ 6959 ಹಾಗೂ 2ನೇ ಡೋಸ್ 4513 ಮಂದಿ ಪಡೆದುಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟವರು 8,268 ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. 45ರಿಂದ 59 ವರ್ಷದೊಳಗಿನವರು 95891 ಮಂದಿ ಮೊದಲ ಡೋಸ್ ಹಾಗೂ 10,724 ಮಂದಿ 2ನೇ ಡೋಸ್ ಪಡೆದುಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟವರು 92,628 ಮಂದಿ ಮೊದಲ ಡೋಸ್ ಮತ್ತು 31099 ಮಂದಿ 2ನೇ ಡೋಸ್ ಪಡೆದುಕೊಂಡಿದ್ದಾರೆ ಒಟ್ಟಾರೆಯಾಗಿ 2,13,522ಮಂದಿ ಮೊದಲ ಡೋಸ್ ಮತ್ತು 53,790 ಮಂದಿ 2ನೇ ಡೋಸ್ ಪಡೆದುಕೊಂಡಿದ್ದಾರೆ.
ಬಹುತೇಕ ಮಂದಿ ಲಸಿಕೆ ಪಡೆದುಕೊಳ್ಳಲು ಬಾಕಿ ಉಳಿದಿದ್ದು, ಯಾವಾಗ ಲಸಿಕೆ ಸಿಗುತ್ತದೆ ಎಂದು ಕಾದುಕುಳಿತ್ತಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಸರ್ಕಾರ ನಿಲ್ಲಿಸಿದ್ದು ತುರ್ತುಸೇವೆಯಲ್ಲಿರುವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಲಸಿಕೆವಿತರಣೆಗೆ ಚುರುಕು ಮುಟ್ಟಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.