Advertisement

ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡೆಗಣನೆ-ಆರೋಪ

06:09 PM Jan 29, 2021 | Team Udayavani |

ಕಡೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ತಮ್ಮನ್ನು·ಕಡೆಗಣಿಸಲಾಗುತ್ತಿದೆ ಎಂದು ತಾಪಂ ಅಧ್ಯಕ್ಷೆ ಬಿ.ಆರ್‌.ಪ್ರೇಮಾಬಾಯಿ ಕೃಷ್ಣಮೂರ್ತಿ ಗಂಭೀರ ಆರೋಪ·ಮಾಡಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮಗಳ ಆಹ್ವಾನಪತ್ರಿಕೆಗಳಲ್ಲಿ ತಮ್ಮ ಹೆಸರಿದ್ದರೂ ಆಹ್ವಾನ ಪತ್ರಿಕೆಯನ್ನುತಲುಪಿಸುವುದಿಲ್ಲ. ತಲುಪಿದರೂ ಕೆಲವೇ ನಿಮಿಷದ ಹಿಂದೆತಲುಪುತ್ತದೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕೆಂದುಪ್ರಶ್ನಿಸಿದರು. ಸಭೆಗಳಲ್ಲಿ ಕೆಲವು ಅತಿಥಿಗಳಿದ್ದರೂ ಸಹತಮಗೆ ಭಾಷಣದ ಅವಕಾಶನೀಡುವುದಿಲ್ಲ. ಅನೇಕ ಸಂದರ್ಭಸ್ವಾಗತ ಮಾಡುವವರು ತಮ್ಮನ್ನುಸ್ವಾಗತಿಸುವುದೂ ಇಲ್ಲ. ಕೇವಲಕಾಟಚಾರಕ್ಕೆ ತಮ್ಮ ಹೆಸರನ್ನು ಆಹ್ವಾನಪತ್ರಿಕೆಯಲ್ಲಿ ಬಳಸುತ್ತಿರುವುದು
ಬೇಸರದ ಸಂಗತಿ ಎಂದರು.

ಮೊನ್ನೆ ನಡೆದ ಗಣರಾಜ್ಯೋತ್ಸವಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೆಲವೇ ಗಂಟೆಮುಂಚಿತವಾಗಿ ನೀಡಿದ್ದರು. ಕನ್ನಡ ರಾಜ್ಯೋತ್ಸವದಕಾರ್ಯಕ್ರಮದಲ್ಲಿ ತಹಶೀಲ್ದಾರರು ವೇದಿಕೆಯಲ್ಲಿ ತಮ್ಮಹೆಸರನ್ನೇ ಪ್ರಸ್ತಾಪಿಸಲಿಲ್ಲ, ಸ್ವಾಗತಕಾರರು ಸ್ವಾಗತವನ್ನುಬಯಸಲಿಲ್ಲ. ಇದು ಶೋಚನೀಯ ವ್ಯವಸ್ಥೆ ಎಂದರು.

ತಾವು ಬಿ.ಎ ಪದವೀಧರರಾಗಿದ್ದು ಸ್ವತಂತ್ರವಾಗಿಆಲೋಚನೆ ಮಾಡುವ,ಚಿಂತಿಸುವ ಹಾಗೂ ಭಾಷಣಕಲೆಯನ್ನು ರೂಢಿಸಿಕೊಂಡಿದ್ದೇನೆ . ನಾಲ್ಕಾರು ಹಿತವಚನತಿಳಿಸುವ ಇಂಗಿತ ತಮಗೂ ಇದೆ. ಆದರೆ ಅ ಧಿಕಾರಿಗಳಬೇಜವಾಬ್ದಾರಿಯಿಂದ ಕಡೆಗಣನೆಯಾಗುತ್ತಿದೆ. ಇದುಮಹಿಳಾ ಮೀಸಲು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಿದ್ದ ಕೊಡಲಿಪೆಟ್ಟು ಎಂದು ಅಭಿಪ್ರಾಯಪಟ್ಟರು

ಓದಿ : ಶಿರಹಟ್ಟಿ: ದ್ಯಾಮವ್ವ ದೇವಿ ಅದ್ಧೂರಿ ಮೆರವಣಿಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next