Advertisement
ಬುಧವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ಜಿಲ್ಲಾದ್ಯಂತ ವ್ಯಾಪಿಸುತ್ತಿದೆ. ಬೆಂಗಳೂರು ನಗರ ಹಾಗೂ ಬೇರೆ ಜಿಲ್ಲೆಗಳಿಂದ ಗ್ರಾಮೀಣ ಪ್ರದೇಶಕ್ಕೆ ಜನರು ವಲಸೆ ಬಂದು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ತಿರುಗಾಡಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಸೋಂಕು ವ್ಯಾಪಿಸುತ್ತಿದೆ ಎಂದರು.
Related Articles
Advertisement
4ದಿನಗಳ ಅವಧಿಯಲ್ಲಿ ಕೈಗಾರಿಕೆ, ವಾಣಿಜ್ಯ ವಹಿವಾಟು ಬಂದ್ ಆಗಲಿವೆ. ಸರ್ಕಾರಿ ಕಚೇರಿ, ಬ್ಯಾಂಕ್ ಕೋವಿಡ್ ಮಾರ್ಗಸೂಚಿಯಂತೆ ಕಡಿಮೆ ಸಿಬ್ಬಂ ದಿಯೊಂದಿಗೆ ಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹಾಲಿನ ಅಂಗಡಿ, ಮೆಡಿಕಲ್ ಶಾಪ್, ಆಸ್ಪತ್ರೆ, ಕ್ಲೀನಿಕ್ ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಈ ಸೇವೆ ಪಡೆದುಕೊಳ್ಳುವವರು ವಾಹನಗಳನ್ನು ತರುವಂತಿಲ್ಲ. ನಡೆದುಕೊಂಡು ಬರಬೇಕು. ಸಮೀಪದ ಅಂಗಡಿಗೆ ಹೋಗಿ ಖರೀದಿ ಮಾಡಬೇಕು ಎಂದರು.
ಮದುವೆ ಕಾರ್ಯಕ್ರಮ ನಡೆಸಲು 250ಕ್ಕೂ ಹೆಚ್ಚು ನೋಂದಣಿಯಾಗಿದ್ದು, ಅಂಥವರಿಗೆ ಮದುವೆ ಸಮಾರಂಭಕ್ಕೆ ಅವಕಾಶವಿದೆ. 10ಜನರು ಮಾತ್ರ ಪಾಲ್ಗೊಳ್ಳಬೇಕು. ಶವಸಂಸ್ಕಾರ ದಲ್ಲಿ 5ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವವರನ್ನು ಚೆಕ್‌ಪೋಸ್ಟ್‌ಗಳಲ್ಲಿ ತಡೆದು ಅವರ ಮಾಹಿತಿ ಕಲೆ ಹಾಕಲಾಗುವುದು. ಮತ್ತು 14ದಿನಗಳ ಕಾಲ ಹೋಂ ಕ್ವಾರಟೈನ್‌ಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್, ದಿನಪತ್ರಿಕೆ, ಅನಾಥಾಶ್ರಮ, ವೃದ್ಧಾಶ್ರಮ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ನ್ಯಾಯಾಲಯಗಳು ಹೈಕೋರ್ಟ್ ಆದೇಶದಂತೆ ಕಾರ್ಯನಿರ್ವಹಿಸಲಿವೆ. ಲಾಕ್‌ಡೌನ್ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಎಂ. ಎಚ್.ಅಕ್ಷಯ್, ಜಿಪಂ ಸಿಇಒ ಎಸ್.ಪೂವಿತಾ ಉಪಸ್ಥಿತರಿದ್ದರು.