Advertisement

ಕೊರೊನಾ ತಡೆಗೆ ತಂಡವಾಗಿ ಕೆಲಸ ಮಾಡಿ

11:03 PM May 13, 2021 | Team Udayavani |

ಎನ್‌.ಆರ್‌.ಪುರ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪರಸ್ಪರ ದೂಷಣೆ ಬಿಟ್ಟು, ಎಲ್ಲರೂ ಕೊರೊನಾ ನಿರ್ಮೂಲನೆಗೆ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಸಲಹೆ ನೀಡಿದರು. ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಕೊರೊನಾ …ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದರು.

Advertisement

ಎಲ್ಲಾ ವಿಚಾರಗಳಿಗೂ ಸರ್ಕಾರ ಅಥವಾ ಮೇಲಧಿಕಾರಿಗಳ ಆದೇಶಕ್ಕೆ ಕಾಯದೇ ಪರಿಸ್ಥಿತಿಗೆ ತಕ್ಕಂತೆ ತಾಲೂಕು ಆಡಳಿತವೇ ತೀರ್ಮಾನ ತೆಗೆದುಕೊಂಡರೆ ಸುಲಭವಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು. ಕೊರೊನಾ ಮೊದಲ ಅಲೆ ಬಂದಾಗ ಕೋವಿಡ್‌ ಪಾಸಿಟಿವ್‌ ವ್ಯಕ್ತಿಗಳಿಗೆ, ಸಾರ್ವಜನಿಕರಿಗೆ ಭಯವಿತ್ತು. ಒಬ್ಬರ ಮೇಲೆ ಇನ್ನೊಬ್ಬರಿಗೆ ಸಂಶಯವಿತ್ತು. ಪ್ರಸ್ತುತ ಎರಡನೇ ಅಲೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಕೊರೊನಾ ಬಾಧಿತ ವ್ಯಕ್ತಿಯ ಮನೆ ಮುಂದೆ ಬ್ಯಾನರ್‌ ಹಾಕುವ ಅಥವಾ ಅವರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸುವ ತೀರ್ಮಾನ ಸ್ಥಳೀಯವಾಗಿ ತೆಗೆದುಕೊಳ್ಳಬೇಕು. ಕೊರೊನಾ ಪಾಸಿಟಿವ್‌ ಬಂದ ಕೆಲವರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಿದರೆ ಜನರಿಗೆ ಭಯ ಬರುತ್ತದೆ.

ಆಗ ಪಾಸಿಟಿವ್‌ ಬಂದ ವ್ಯಕ್ತಿಗಳು ಹೊರಗಡೆ ಓಡಾಡುವುದಿಲ್ಲ ಎಂದರು. ಕಳೆದ ಕೆಲವು ದಿನಗಳಿಂದ ಆಕ್ಸಿಜನ್‌ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ 6ವೆಂಟಿಲೇಟರ್‌ ಇವೆ. ವೆಂಟಿಲೇಟರ್‌ ಬಳಕೆ ಆರಂಭಿಸಿದರೆ ಹೆಚ್ಚು ಆಕ್ಸಿಜನ್‌ ಬೇಕಾಗುತ್ತದೆ. ಆಕ್ಸಿಜನ್‌ ಕೊರತೆ ಇದ್ದಾಗ ಕಡಿಮೆ ಆಕ್ಸಿಜನ್‌ ಬೇಕಾದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚು ಆಕ್ಸಿಜನ್‌ ಬೇಕಾದವರಿಗೆ ಬೇರೆಡೆ ವ್ಯವಸ್ಥೆ ಮಾಡಬೇಕು. ಸರ್ಕಾರ ಕೋವಿಡ್‌ ಅನ್ನು ಗಂಭೀರವಾಗಿ ಪರಿಗಣಿಸಿದೆ. ಕೋವಿಡ್‌ ನಿಯಂತ್ರಣಕ್ಕೆ ಜನರಿಗೆ ಅವಕಾಶ ನೀಡಿದಾಗಲೂ ಜನರು ಸ್ಪಂದಿಸದಿರುವುದಕ್ಕೆ ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿದೆ.

ಇದರ ಪರಿಣಾಮವಾಗಿ ಕೊರೊನಾ ಬಾಧಿತರ ಸಂಖ್ಯೆ ಮೂರ್‍ನಾಲ್ಕು ದಿನಗಳಿಂದ ಕಡಿಮೆಯಾಗಿದೆ ಎಂದರು. ಕೊರೊನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಆಶಾ ಕಾರ್ಯಕರ್ತೆಯರಿಗೆ ಸಮಸ್ಯೆಯಾದಲ್ಲಿ ಮೇಲಧಿಕಾರಿಗಳು ಅವರ ನೆರವಿಗೆ ಧಾವಿಸಬೇಕು. ಪೊಲೀಸ್‌ ಅಧಿಕಾರಿಗಳು, ಮೇಲಧಿಕಾರಿಗಳು ವರದಿ ಕೊಟ್ಟಾಗ ತೊಂದರೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ಆಸ್ಪತ್ರೆಯಿಂದ ಬೇರೆಡೆ ಲಸಿಕೆ ನೀಡುವ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ತಾಲೂಕು ಆಡಳಿತ ನಿರ್ಧರಿಸಬೇಕು ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕ್ಷೇತ್ರದ ಮೂರು ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಇದ್ದು, ಆಕ್ಸಿಜನ್‌ ಕೊರತೆಯಿಂದ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಆಕ್ಸಿಜನ್‌ ಹೆಚ್ಚು ಪೂರೈಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

Advertisement

ವಿಧಾನ ಪರಿಷತ್‌ ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ಮಾತನಾಡಿ, ಜಿಲ್ಲೆಯಲ್ಲಿ ವೆಂಟಿಲೇಟರ್‌ ನಿರ್ವಹಣೆ ಮಾಡುವವರ ಸಮಸ್ಯೆಯಿದೆ. ಆಕ್ಸಿಜನ್‌ ಸಮಸ್ಯೆಯಾಗಿಲ್ಲ. ವೆಂಟಿಲೇಟರ್‌ ಬಳಸಿದಾಗ ಆಕ್ಸಿಜನ್‌ ಸಮಸ್ಯೆಯಾಗಬಹುದು. ಕೊರೊನಾ ಲಸಿಕೆ ಬೇರೆಡೆ ಕೊಡುವ ವ್ಯವಸ್ಥೆ ಮಾಡುವಾಗ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ ಎಂದರು. ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಕೊಪ್ಪದಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕ ಆರಂಭಿಸುವ ಸಾಧ್ಯತೆಯಿದೆ. ಆದರೂ ಇಲ್ಲಿನ ಆಸ್ಪತ್ರೆಗೆ ಆಕ್ಸಿಜನ್‌ ಪೂರೈಸಲು ಸಾಧ್ಯವಾಗುವುದಿಲ್ಲ ಎಂದರು.

ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೀರಪ್ರಸಾದ್‌ ಮಾತನಾಡಿದರು. ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ನಾಗರಾಜ್‌, ತರೀಕೆರೆ ಉಪವಿಭಾಗಾಧಿಕಾರಿ ಸಿದ್ದಲಿಂಗರೆಡ್ಡಿ, ತಹಶೀಲ್ದಾರ್‌ ಸಿ.ಜಿ.ಗೀತಾ, ಕೊಪ್ಪ ಡಿವೈಎಸ್‌ಪಿ ರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next