Advertisement
ಗುರುವಾರ ನಗರದ ವಿಜಯಪುರ ಸದಾಶಿವ ಶಾಸ್ತ್ರಿ ಭವನದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರ ಚುನಾವಣೆ ಕುರಿತಂತೆ ಜಿಲ್ಲಾಧ್ಯಕ್ಷ ಆಕಾಂಕ್ಷಿಗಳು, ಸಮಾನ ಮನಸ್ಕರು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಬದಲಾವಣೆಗಳಿಂದ ಸಾಹಿತ್ಯ ಪರಿಷತ್ನಕಾಲಾವಧಿ 5 ವರ್ಷಕ್ಕೆ ನಿಗದಿಯಾಗಿರುವುದರಿಂದ ಸದ್ಯದಲ್ಲೇ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆಗಳು ನಡೆಯತ್ತವೆ. ಸೂರಿ ಶ್ರೀನಿವಾಸ್ ಅವರು ಅಭ್ಯರ್ಥಿ ಆಕಾಂಕ್ಷಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿ.ಅಜ್ಜಂಪುರ ಜಿ.ಸೂರಿ ಅವರು ಜಿಲ್ಲಾಧ್ಯಕ್ಷರಾಗಿದ್ದಾಗ ಬದ್ಧತೆ, ಸಾಹಿತ್ಯದ ಬಗ್ಗೆ ಇರುವ ಕಳಕಳಿಯ ಹಾದಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಮುಂದುವರಿಸಿಕೊಂಡು ಬಂದು ಸಾಹಿತ್ಯ ಪರಿಷತ್ತನ್ನು ಸಮರ್ಥವಾಗಿ ನಡೆಸಲು ಅಗತ್ಯ ವಾದ ಆಲೋಚನೆಗಳನ್ನು ಹೊಂದಿದ್ದಾರೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಕಸಾಪ
ಮೆರವಣಿಗೆಗಳಿಗೆ ಮಾತ್ರ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ನೆನಪಿಸಿಕೊಂಡು ನಮ್ಮನ್ನು ಅಷ್ಟಕ್ಕೆ ಸೀಮಿತ ಮಾಡಿದ್ದಾರೆ. ನಾವು ಬೀದಿಗೆ ಬಂದು ಹೋರಾಟ ಮಾಡಬೇಕಾದರೆ ಸಾಹಿತ್ಯ ಪರಿಷತ್ ನಿಂದ ಇತ್ತೀಚಿನ ದಿನಗಳಲ್ಲಿ ಬೆಂಬಲಿಸದಿರುವುದು ವಿಪರ್ಯಾಸ. ಮುಂದೆ ಆ ರೀತಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
Related Articles
ಓಂಕಾರೇಗೌಡ, ಸದಸ್ಯ ವರಸಿದ್ದಿ ವೇಣುಗೋಪಾಲ್, ವಾಣಿ ಚಂದ್ರಯ್ಯ ನಾಯ್ಡು, ಲಕ್ಷ್ಮೀ ಶ್ಯಾಮರಾವ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನವರತ್ನ ಇಂದುಕುಮಾರ್, ವಕೀಲರಾದ ಡಿ.ಎಸ್. ಮಮತಾ, ಜಗದೀಶ್, ನಟರಾಜ್, ವಿವಿಧ ಸಂಘಟನೆಯ ಬಿ.ಎಂ. ಕುಮಾರ್, ಚಿ.ಸ. ಪ್ರಭುಲಿಂಗ ಶಾಸ್ತ್ರಿ, ಕಳವಾಸೆ ರವಿ, ಎಲ್.ವಿ. ಕೃಷ್ಣಮೂರ್ತಿ ಇದ್ದರು.
Advertisement
ಓದಿ : ವೈದ್ಯರ ತಾಂತ್ರಿಕ ಗೋಷ್ಠಿಗೆ ಚಾಲನೆ