Advertisement

400 ಕೋಟಿ ರೂ. ಅನುದಾನಕ್ಕೆ ಮನವಿ

06:16 PM Jan 23, 2021 | Team Udayavani |

ಚಿಕ್ಕಮಗಳೂರು: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ 400 ಕೋಟಿ ರೂ. ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಕೆ.ಎಸ್‌. ಗುರುಮೂರ್ತಿ ತಿಳಿಸಿದರು.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡಳಿ ವ್ಯಾಪ್ತಿಗೆ 13 ಜಿಲ್ಲೆ ಒಳಗೊಂಡಿದ್ದು, ವಿಧಾನಸಭೆ ಸದಸ್ಯರು ಮತ್ತು ವಿಧಾನ ಪರಿಷತ್‌ ಸದಸ್ಯರು ಸೇರಿ 136 ಜನ ಸದಸ್ಯರನ್ನು ಮಂಡಳಿ ಹೊಂದಿದೆ ಎಂದರು.

ಇದನ್ನೂ ಓದಿ: ರೈತರಿಗೆ ಬೆಳೆ ಉಳಿಸಿಕೊಳ್ಳುವ ಸವಾಲು; ಪಂಪ್‌ಸೆಟ್‌ಗಳಿಗೆ ಕರೆಂಟ್‌ ಶಾಕ್‌

ಮಂಡಳಿಯ ಪ್ರಮುಖ ಉದ್ದೇಶವೇ ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕು ಮತ್ತು ಮಲೆನಾಡು ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬೇಕೆಂಬುದಾಗಿದೆ. ಇಲ್ಲಿಯವರೆಗೂ ಮಂಡಳಿಗೆ ಸರ್ಕಾರ ನೀಡುವ ಅನುದಾನ ಕಡಿಮೆ ಇದೆ. ಪ್ರತೀ ವರ್ಷ 40 ಕೋಟಿ, 30 ಕೋಟಿ ಅನುದಾನ ನೀಡುತ್ತಿದೆ ಎಂದರು.

ಶಾಸಕರಿಂದ ಕ್ರಿಯಾಯೋಜನೆ ಪಡೆದು ಆ ಯೋಜನೆಗಳನ್ನು ಮಂಡಳಿಯಿಂದ ಅನುಷ್ಠಾನ ಮಾಡಲಾಗುವುದು ಎಂದ ಅವರು, ಮಲೆನಾಡು ಭಾಗದಲ್ಲಿ ರಸ್ತೆ, ಚರಂಡಿ ಮಾಡುವುದೇ ಮಂಡಳಿಯ ಕೆಲಸವಾಗಬಾರದು. ಮಲೆನಾಡಿನ ಸಮಸ್ಯೆಗಳ ಬಗ್ಗೆಯೂ ಮಂಡಳಿ ಗಮನ ಹರಿಸಬೇಕೆನ್ನುವ ಉದ್ದೇಶವನ್ನು ಇರಿಸಿಕೊಂಡಿದ್ದೇವೆ ಎಂದರು.

Advertisement

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆ, ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ರೀತಿಯ ಸಮಸ್ಯೆಗಳಿವೆ. ಈ ಸಮಸ್ಯೆಗಳ ನಿವಾರಣೆಗೆ ಮಂಡಳಿ ಗಮನಹರಿಸಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ವಿವಿ ಹಾಗೂ ತೋಟಗಾರಿಕೆ ವಿವಿ, ಪಶುವೈದ್ಯ ಕಾಲೇಜು ಹೊಂದಿದ್ದು, ಇವುಗಳ ಜೊತೆಗೂಡಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕೃಷಿ ಕಾರ್ಯಾಗಾರವನ್ನು ಮುಂದಿನ ದಿನಗಳಲ್ಲಿ ನಡೆಸಲು ಚಿಂತನೆ ನಡೆಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕಾಲುಸಂಕ ಮತ್ತು ತೂಗುಸೇತುವೆ ಅಗತ್ಯವಿದ್ದು ಕಾಲುಸಂಕ ಮತ್ತು ತೂಗುಸೇತುವೆ ನಿರ್ಮಾಣಕ್ಕೆ 21-22ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

1016-17ನೇ ಸಾಲಿನಿಂದ ಇಲ್ಲಿಯವರೆಗೂ 1,354 ಹಳೇ ಕಾಮಗಾರಿಗಳು ಇದ್ದು, ಈ ಕಾಮಗಾರಿಗಳನ್ನು ಮುಗಿಸಬೇಕಿದೆ. ಜಿಲ್ಲೆಯಲ್ಲಿ 10 ಕೋಟಿ ರೂ. ವೆಚ್ಚದ 113 ಕಾಮಗಾರಿ ಮಂಜೂರಾಗಿದ್ದು, 6 ಕೋಟಿ ರೂ. ವೆಚ್ಚದ 59 ಕಾಮಗಾರಿ ಮುಕ್ತಾಯವಾಗಿದೆ. 79 ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಗಳನ್ನು ಮಾರ್ಚ್‌ ಅಂತ್ಯದೊಳಗೆ ಮುಗಿಸುವುದಾಗಿ ತಿಳಿಸಿದರು.

ಕಾರ್ಯಪಾಲಕ ಇಂಜಿನಿಯರ್‌ ಎಚ್‌.ವಿ. ವಿಜಯ್‌, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಉಪ ನಿರ್ದೇಶಕ ಶಿವಾನಂದ್‌ ಎಚ್‌. ಕುದರಿ, ಶ್ರೀನಿವಾಸ್‌ ಇದ್ದರು.

ಇದನ್ನೂ ಓದಿ ; ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

Advertisement

Udayavani is now on Telegram. Click here to join our channel and stay updated with the latest news.

Next